- Home
- Entertainment
- TV Talk
- ಬಿಗ್ ಬಾಸ್ ಮನೇಲಿ ರಘು ಫಿಸಿಕಲ್ ಟಾಸ್ಕ್ ನೋಡಿ ಬೆಚ್ಚಿಬಿದ್ದ ಸಹ ಸ್ಪರ್ಧಿಗಳು; ಮ್ಯೂಟೆಂಟ್ ಮುಂದೆ ಎಲ್ಲರೂ ಸೈಲೆಂಟ್!
ಬಿಗ್ ಬಾಸ್ ಮನೇಲಿ ರಘು ಫಿಸಿಕಲ್ ಟಾಸ್ಕ್ ನೋಡಿ ಬೆಚ್ಚಿಬಿದ್ದ ಸಹ ಸ್ಪರ್ಧಿಗಳು; ಮ್ಯೂಟೆಂಟ್ ಮುಂದೆ ಎಲ್ಲರೂ ಸೈಲೆಂಟ್!
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಮ್ಯೂಟೆಂಟ್ ರಘು, ನಾಣ್ಯ ಸಂಗ್ರಹ ಟಾಸ್ಕ್‌ನಲ್ಲಿ ತಮ್ಮ ಅಜಾನುಬಾಹು ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇತರ ಸ್ಪರ್ಧಿಗಳಿಂದ ಬಲವಂತವಾಗಿ ನಾಣ್ಯಗಳನ್ನು ಕಿತ್ತುಕೊಂಡಿದ್ದು, ಅವರ ಈ ಆಟದ ವೈಖರಿಗೆ ರಿಷಾ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿರುವ ಮ್ಯೂಟೆಂಟ್ ರಘು ಇದೀಗ ತಮ್ಮ ಅಸಲಿ ಆಟವನ್ನು ಪ್ರದರ್ಶನ ಮಾಡಿದ್ದಾರೆ. ಅಜಾನುಬಾಹು ದೇಹವನ್ನು ಹೊಂದಿರುವ ರಘು ಅವರು, ಬಿಗ್ ಬಾಸ್ ನೀಡಿದ್ದ ನಾಣ್ಯಗಳ ಸಂಗ್ರಹ ಟಾಸ್ಕ್‌ನಲ್ಲಿ ಎಲ್ಲರಿಂದಲೂ ನಾಣ್ಯಗಳನ್ನು ಕಿತ್ತುಕೊಂಡಿದ್ದಾರೆ. ಅವರಿಂದ ಒಂದೇ ಒಂದು ನಾಣ್ಯ ಕಿತ್ತುಕೊಳ್ಳಲು ಆಗದಂತೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇಂದು ಬಿಗ್ ಬಾಸ್ ಮನೆಯಲ್ಲಿ ನಾಣ್ಯಗಳ ಸಂಗ್ರಹ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಎಲ್ಲ ಸದಸ್ಯರನ್ನು ಮೂರು ತಂಡಗಳಾಗು ಮಾಡಿ ಅದರಲ್ಲಿರುವ ಪುರುಷರನ್ನು ಗಾರ್ಡನ್ ಏರಿಯಾಗೆ ಬಿಟ್ಟು ಅಲ್ಲಿ ಮೇಲಿನಿಂದ ನಾಣ್ಯಗಳನ್ನು ಎಸೆಯಲಾಗುತ್ತದೆ. ಇದರಲ್ಲಿ ಅತಿಹೆಚ್ಚು ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡವರು ವಿನ್ನರ್ ಆಗುತ್ತಾರೆ.
ಈ ವೇಳೆ ಸಣ್ಣಗೆ ತುಂಬಾ ಆಕ್ಟೀವ್ ಆಗಿರುವ ಗಿಲ್ಲಿ, ಧನುಷ್ ಸೇರಿ ಹಲವರು ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಇದಕ್ಕೆ ಟ್ವಿಸ್ಟ್ ಎಂಬಂತೆ ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡವರಿಂದ ಕಿತ್ತುಕೊಳ್ಳುವುದಕ್ಕೆ ಅವಕಾಶ ಕೊಡುತ್ತಾರೆ. ಆಗ ಮ್ಯೈಟೆಂಟ್ ರಘು ಎಲ್ಲರ ಬಳಿಯಿದ್ದ ನಾಣ್ಯಗಳನ್ನು ತನ್ನ ಬಲವನ್ನು ಪ್ರಯೋಗಿಸಿ ಕಿತ್ತುಕೊಳ್ಳುತ್ತಾರೆ.
ಇನ್ನು ರಘು ಅವರು ನಾಣ್ಯಗಳನ್ನು ಕಿತ್ತುಕೊಳ್ಳುವಾಗ ಒಬ್ಬೊಬ್ಬರನ್ನು ಕುರಿಗಳಂತೆ ಕೆಡವಿ ಹಾಕಿ ಅವರ ಕಾಲು, ಕೈಗಳನ್ನು ಎತ್ತಿ ತಿರುವಿ ಅವರ ಜೇಬಿನಲ್ಲಿದ್ದ ನಾಣ್ಯಗಳನ್ನು ಕಿತ್ತುಕೊಂಡು ಹೋಗುತ್ತಾರೆ. ನಾಣ್ಯ ಕಾಪಾಡಿಕೊಳ್ಳಲು ಉಳಿದವರು ಎಷ್ಟೇ ಪ್ರಯತ್ನ ಮಾಡಿದರೂ ರಘು ಮುಂದೆ ಎಲ್ಲರೂ ಡಮ್ಮಿ ಆಗಿ ನಾಣ್ಯ ಕಳೆದುಕೊಂಡು ಸುಮ್ಮನಾಗುತ್ತಾರೆ.
ಆದರೆ, ರಿಷಾ ಗೌಡ ರಘು ಅವರ ಆಟವನ್ನು ತೀವ್ರ ಕೋಪಗೊಳ್ಳುತ್ತಾರೆ. ನಾವೆಲ್ಲರೂ ನಿಮ್ಮ ಸಮಕ್ಕೆ ಇದ್ದೀವಾ? ಮಾಡಬಾರದು ಹಾಗೆ..., ಏನು ಅನ್ಕೊಂಡಿದ್ದೀರಾ? ನಿಮಗೆ ಶಕ್ತಿ ಇದೆ ಅಂತಾ ಗೊತ್ತು ಎಲ್ಲರಿಗೂ ಎಂದು ಕೋಪಗೊಂಡು ಬೈಯುತ್ತಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 12ರಲ್ಲಿ ಈಗಾಗಲೇ ಮೊದಲ ಫಿನಾಲೆಯನ್ನು ನಡೆಸಲಾಗಿದ್ದು, ಮೂವರು ಸ್ಪರ್ಧಿಗಳನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಯೊಳಗೆ ಕಳಿಸಿದ್ದಾರೆ. ಈ ಹಿಂದೆ ಎಲ್ಲ ಸ್ಪರ್ಧಿಗಳು ನಟರು, ಹಾಸ್ಯ ಕಲಾವಿದರು, ಗಾಯಕರು, ನಟಿಯರು, ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯಾದ ವಿಭಿನ್ನ ವ್ಯಕ್ತಿತ್ವದವರು ಬಂದಿದ್ದರು.
ಆದರೆ, ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳ ಪೈಕಿ ಮ್ಯೂಟೆಂಟ್ ರಘು ಹಾಗೂ ಸಂಜಯ್ ಸಿಂಗ್ ಇಬ್ಬರೂ ಬಾಡಿ ಬಿಲ್ಡರ್ ತರಹ ಇದ್ದಾರೆ. ಇನ್ನು ರಿಷಾ ಗೌಡ ಕೂಡ ಸ್ಪೋರ್ಟ್ಸ್ ಪರ್ಸನ್ ಆಗಿದ್ದಾರೆ. ಇದೀಗ ಎಲ್ಲ ಫಿಸಿಕಲ್ ಟಾಸ್ಕ್‌ನಲ್ಲಿ ಭಾರೀ ಪೈಪೋಟಿ ಕಾಣುತ್ತಿದೆ.