- Home
- Entertainment
- TV Talk
- ಸೇರಿಗೆ ಸವ್ವಾಸೇರು; ಕೈ ತೋರಿಸಿ ಮಾತಾಡಬೇಡ: ಅಶ್ವಿನಿ ಗೌಡ-ಜಾನ್ವಿ ವಿರುದ್ಧ ಮ್ಯೂಟಂಟ್ ರಘು ವೈಲೆಂಟ್
ಸೇರಿಗೆ ಸವ್ವಾಸೇರು; ಕೈ ತೋರಿಸಿ ಮಾತಾಡಬೇಡ: ಅಶ್ವಿನಿ ಗೌಡ-ಜಾನ್ವಿ ವಿರುದ್ಧ ಮ್ಯೂಟಂಟ್ ರಘು ವೈಲೆಂಟ್
ನಟ ಮ್ಯೂಟಂಟ್ ರಘು ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಬಂದ ಮೊದಲ ದಿನವೇ ಟಾಸ್ಕ್ ಒಂದರಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆ ಏಕವಚನ ಬಳಸಿ ಜಗಳವಾಡಿದ್ದು, ಇಡೀ ಮನೆಗೆ ಶಾಕ್ ನೀಡಿದ್ದಾರೆ.

ಬಿಗ್‌ಬಾಸ್ ಮನೆಗೆ ಮ್ಯೂಟಂಟ್ ರಘು
ನಟ, ಮ್ಯೂಟಂಟ್ ರಘು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ಎದುರು ಹಾಕಿಕೊಂಡಿದ್ದಾರೆ. ಬಿಗ್‌ಬಾಸ್ ನೀಡಿದ ಟಾಸ್ಕ್ ನಂತೆ ಸ್ಪರ್ಧಿಗಳ ಮೇಲೆ ನೀರು ಸುರಿದು, ಅವರ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮೂರು ವಾರ ಬಿಗ್‌ಬಾಸ್ ನೋಡಿರುವ ವೈಲ್ಡ್ ಕಾರ್ಡ್ ಆಟಗಾರರಿಗೆ ಮನೆಯೊಳಗಿರುವ ಸ್ಪರ್ಧಿಗಳು ಹೇಗೆ ಎಂಬುದರ ಬಗ್ಗೆ ಸಣ್ಣದಾಗಿ ತಿಳಿದಿರುತ್ತದೆ.
ಇದು ರೆಸಾರ್ಟ್ ಅಲ್ಲ
ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಬಿಗ್‌ಬಾಸ್ ಮನೆಯೊಳಗೆ ಮೈಕ್ ಹಿಡಿದುಕೊಂಡು ರಘು ಎಂಟ್ರಿ ಕೊಡುತ್ತಾರೆ. ಇದು ರೆಸಾರ್ಟ್ ಅಲ್ಲ ಎಂದು ಹೇಳುತ್ತಾ ಮಲಗಿರುವ ಎಲ್ಲಾ ಸ್ಪರ್ಧಿಗಳನ್ನು ಎಚ್ಚರ ಮಾಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳ ಮೇಲೆ ನೀರು ಸುರಿದು ರಘು ಕಾರಣ ನೀಡಬೇಕು. ಅದೇ ರೀತಿ ಅಶ್ವಿನಿ ಗೌಡ ಅವರ ಮೇಲೆಯೂ ನೀರು ಹಾಕುತ್ತಾರೆ.
ಏಕವಚನ
ನೀರು ಸುರಿದು ಕಾರಣ ನೀಡುವ ಸಂದರ್ಭದಲ್ಲಿ ಅಶ್ವಿನಿ ಗೌಡ ಅವರನ್ನು ಏಕವಚನದಲ್ಲಿಯೇ ಮಾತನಾಡಿಸುತ್ತಾರೆ. ಇದರಿಂದ ಕೋಪಗೊಂಡ ಅಶ್ವಿನಿ ಗೌಡ, ಏಕವಚನದಲ್ಲಿ ಮಾತನಾಡದಂತೆ ನೇರವಾಗಿಯೇ ಎಚ್ಚರಿಕೆ ಕೊಡುತ್ತಾರೆ. ಬಿಗ್‌ಬಾಸ್ ಮನೆಯಲ್ಲಿ ನಿಮಗೆ ಏನು ಅಧಿಕಾರ ಇಲ್ಲ. ನಾವಿಬ್ಬರು ಸ್ಪರ್ಧಿಗಳು ಎಂದು ಅಶ್ವಿನಿ ಗೌಡ ಹೇಳುತ್ತಾರೆ.
ಅಶ್ವಿನಿ ಗೌಡ ಮತ್ತು ಜಾನ್ವಿ
ಅಶ್ವಿನಿ ಗೌಡ ಬೆಂಬಲಕ್ಕೆ ನಿಂತುಕೊಂಡ ಜಾನ್ವಿ, ಏಕವಚನದಲ್ಲಿ ಮಾತನಾಡಿದ್ರೆ ಇಲ್ಲಿಂದ ಆಚೆ ಹೋಗಿ ಎಂದು ಹೇಳುತ್ತಾರೆ. ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿ ರಘು ಮೇಲೆ ಹರಿಹಾಯ್ದಿದ್ದಾರೆ. ಮೊದಲೇ ರಫ್ ಅಂತಾನೇ ಗುರುತಿಸಿಕೊಂಡಿರುವ ಇಬ್ಬರಗಿಂತ ಮೂರುಪಟ್ಟು ಧ್ವನಿ ಏರಿಸಿ ಗುಡುಗಿದ್ದಾರೆ.
ಇದನ್ನೂ ಓದಿ: ಎಲ್ಲಾ ಭಾಷೆಗಳ Bigg Bossನಲ್ಲಿ ನಂ.1 ಪಟ್ಟ ಯಾರಿಗೆ? TVR ರಿವೀಲ್- ಕನ್ನಡಕ್ಕೆ ಎಷ್ಟನೇ ಸ್ಥಾನ?
ಮ್ಯೂಟಂಟ್ ರಘು ಅಬ್ಬರ
ಮ್ಯೂಟಂಟ್ ರಘು ಅಬ್ಬರಕ್ಕೆ ಇಡೀ ಮನೆ ಸದಸ್ಯರೆಲ್ಲರೂ ನಡುಗಿದ್ದಾರೆ. ಈ ವಾರ ಸತೀಶ್, ಅಶ್ವಿನಿ ಎಸ್‌ಎಸ್ ಮತ್ತು ಮಂಜು ಭಾಷಿಣಿ ಮನೆಯಿಂದ ಹೊರಗೆ ಬಂದಿದ್ದಾರೆ. ಮ್ಯೂಟಂಟ್ ರಘು, ಸಂಜಯ್ ಸಿಂಗ್ ಮತ್ತು ರಿಷಾ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss ಫಿನಾಲೆಗೆ ಯಾರು ಅರ್ಹರು ಕೇಳಿದಾಗ ಮಂಜು ಭಾಷಿಣಿ- ಅಶ್ವಿನಿ ಒಟ್ಟಿಗೇ ಹೇಳಿದ್ದು ಒಬ್ಬರದ್ದೇ ಹೆಸರು!