- Home
- Entertainment
- TV Talk
- ಮಿಥುನ ರಾಶಿಯ ಬಳಿಕ ಕಣ್ಮರೆಯಾಗಿದ್ದ ನಟ ಈಗ ರಾಘವೇಂದ್ರ ಸ್ವಾಮಿಗಳ ತಂದೆ… ಸಂಭ್ರಮದಲ್ಲಿ ಯದು ಶ್ರೇಷ್ಠ
ಮಿಥುನ ರಾಶಿಯ ಬಳಿಕ ಕಣ್ಮರೆಯಾಗಿದ್ದ ನಟ ಈಗ ರಾಘವೇಂದ್ರ ಸ್ವಾಮಿಗಳ ತಂದೆ… ಸಂಭ್ರಮದಲ್ಲಿ ಯದು ಶ್ರೇಷ್ಠ
ಮಿಥುನ ರಾಶಿ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರದ ಮೂಲಕ ಗಮನ ಸೆಳೆದ ನಟ ಯಶು ಶ್ರೇಷ್ಠ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಯದು ರಾಘವೇಂದ್ರ ಮಹಾತ್ಮೆ ಮೂಲಕ ರಾಯನ ತಂದೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ, ಈ ಕುರಿತು ಸಂಭ್ರಮ ಹಂಚಿಕೊಂಡ ಯದು.

ಮಿಥುನ ರಾಶಿ ನಟ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಮಿಥುನ ರಾಶಿ ಧಾರಾವಾಹಿ ನೆನಪಿದ್ಯಾ? ಖಂಡಿತವಾಗಿಯೂ ನಿಮಗೆ ನೆನಪಿರುತ್ತೆ. ಈ ಧಾರಾವಾಹಿಯಲ್ಲಿ ಮಿಥುನ್ ತಮ್ಮ ಸಮರ್ಥ್ ಪಾತ್ರದಲ್ಲಿ ಯದು ಶ್ರೇಷ್ಠ ನಟಿಸಿದ್ದರು. ಆ ಸೀರಿಯಲ್ ಬಳಿಕ ನಟ ತೆರೆ ಮೇಲೆ ಕಾಣಿಸಿಕೊಂಡಿದ್ದು ಕಡಿಮೆ.
ನಟನೆಯಿಂದ ದೂರ ಇದ್ದ ಯದು ಶ್ರೇಷ್ಠ
ಮಿಥುನ ರಾಶಿ ಬಳಿಕ ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ತಮ್ಮ ದೀರ್ಘಕಾಲದ ಗೆಳತಿ ವಿಶಾಖ ಹೇಮಂತ್ ಎನ್ನುವವರ ಜೊತೆಗೆ ವೈವಾಹಿಕ ಜೀವನಕ್ಕೆ ಯದುಶ್ರೇಷ್ಠ ಕಾಲಿಟ್ಟಿದ್ದರು. ಯದುಶ್ರೇಷ್ಠ - ವಿಶಾಖ ವಿವಾಹ ಮಹೋತ್ಸವ ಫೋಟೊಗಳು ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗಿದ್ದವು.
ರಾಘವೇಂದ್ರ ಮಹಾತ್ಮೆಯಲ್ಲಿ ಯದು
ಅಭಿಮಾನಿಗಳು ಈ ನಟನನ್ನು ಮತ್ತೆ ತೆರೆ ಮೇಲೆ ನೋಡಲು ಕಾಯುತ್ತಿದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ಒಂದು ಅದ್ಭುತವಾದ ಪಾತ್ರ ನಿರ್ವಹಿಸುತ್ತಿರುವ ಸಂಭ್ರಮದಲ್ಲಿದ್ದಾರೆ ಯದು. ಹೌದು, ಯದು ಶ್ರೇಷ್ಠ ರಾಯರ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ.
ಧಾರಾವಾಹಿ ಭಾಗವಾಗಿರುವುದು ನನ್ನ ಸೌಭಾಗ್ಯ
ಈ ಕುರಿತು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿರುವ ಯದು ಶ್ರೇಷ್ಠ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಕಥೆಯನ್ನು ಮನೆ ಮನಗಳಿಗೆ ತಲುಪಿಸುವ ಪವಿತ್ರ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಅದ್ಭುತ ತಂಡದ ಭಾಗವಾಗಿರುವುದು ನನ್ನ ಸುಕೃತ.
ರಾಯರ ತಂದೆಯ ಪಾತ್ರದಲ್ಲಿ ಯದು
ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ರಾಯರ ಪೂರ್ವಾಶ್ರಮದ ತಂದೆ, ವೀಣೆ ತಿಮ್ಮಣ್ಣ ಭಟ್ಟರ ಪಾತ್ರವನ್ನು ನಿರ್ವಹಿಸಲು ನನಗೆ ಅವಕಾಶ ನೀಡಿದ ನಿರ್ಮಾಪಕರಾದ ಶ್ರೀ ಮಹೇಶ್ ಸುಖಧರೆ, ನನ್ನ ಮೇಲೆ ಅಕ್ಕರೆಯ ನಂಬಿಕೆ ಇಟ್ಟು ಪ್ರೋತ್ಸಾಹಿಸಿದ ನಿರ್ದೇಶಕರಾದ ಶ್ರೀ ನವೀನ್ ಕೃಷ್ಣ ಅವರಿಗೆ ಹಾಗೂ ಸಂಪೂರ್ಣ ಜೀ ಕನ್ನಡ ಹಾಗೂ ರಾಘವೇಂದ್ರ ಮಹಾತ್ಮೆತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು.
ವೀಣೆ ತಿಮ್ಮಣ್ಣ ಭಟ್ಟರು
ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9ಕ್ಕೆ, ತಿಮ್ಮಣ್ಣ ಭಟ್ಟರ ಪಾತ್ರದಲ್ಲಿ ನಿಮ್ಮೆದುರು ಕಾಣಿಸಿಕೊಳ್ಳಲಿದ್ದೇನೆ. ನೋಡಿ, ಹರಸಿ, ಹಾರೈಸಿ! ನಿಮ್ಮೆಲ್ಲರ ಪ್ರೀತಿ ಆಶೀರ್ವಾದಗಳು ಸದಾ ನಮ್ಮ ತಂಡದ ಮೇಲಿರಲಿ ಎಂದು ಹೇಳಿದ್ದಾರೆ. ಈಗಾಗಲೇ ಧಾರಾವಾಹಿಯಲ್ಲಿ ತಿಮ್ಮಣ್ಣ ಭಟ್ಟರ ಪಾತ್ರ ಪ್ರಸಾರವಾಗುತ್ತಿದ್ದು, ಜನರು ಕೂಡ ತುಂಬಾನೆ ಇಷ್ಟ ಪಟ್ಟಿದ್ದಾರೆ.