ಮಗನ ವಯಸ್ಸು ಏರ್ತಾ ಇದೆ… ಆದ್ರೆ ಇನ್ನೂ ಟೀನೇಜ್ ಹುಡುಗಿ ಥರ ಕಾಣಿಸ್ತಾರೆ ಅಮ್ಮ ಮಯೂರಿ
ಅಶ್ವಿನಿ ನಕ್ಷತ್ರದ ಮೂಲಕ ಖ್ಯಾತಿ ಪಡೆದಿದ್ದ ನಟಿ ಮಯೂರಿ ಕ್ಯಾತರಿ ತಮ್ಮ ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಮ್ಮ-ಮಗನ ಮುದ್ದಾದ ಫೋಟೊ ಶೇರ್ ಮಾಡಿದ್ದು, ಮಯೂರಿ ಲುಕ್ ಗೆ ಫ್ಯಾನ್ಸ್ ಮನಸೋತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮಯೂರಿ ಕ್ಯಾತರಿ (Mayuri Kyatari) ತಮ್ಮ ಮುದ್ದು ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಗ ಆರವ್ ಜೊತೆ ಮುದ್ದಾದ ಫೊಟೊ ಶೂಟ್ ಮಾಡಿ ಶೇರ್ ಮಾಡಿದ್ದು, ಫ್ಯಾನ್ಸ್ ಕಣ್ಣು ಮಾತ್ರ ಮಯೂರಿಯ ಎವರ್ ಗ್ರೀನ್ ಲುಕ್ ಮೇಲಿದೆ.
ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಮಯೂರಿ ಕ್ಯಾತರಿ ತಮ್ಮ ಬಹುಕಾಲದ ಗೆಳೆಯ ಅರುಣ್ ಎನ್ನುವವರನ್ನು 2020 ರಲ್ಲಿ ಕೋವಿಡ್ ಮಧ್ಯದಲ್ಲೇ ಮದುವೆಯಾಗಿದ್ದರು. ಈ ಜೋಡಿಯ ಮುದ್ದಿನ ಪುತ್ರ ಆರವ್. ಇದೀಗ ಹುಟ್ಟುಹಬ್ಬ ಆಚರಿಸುತ್ತಿರುವ ಆರವ್ ಗೆ ನಟಿ ಭಾವನಾತ್ಮಕ ಪತ್ರದ ಮೂಲಕ ಶುಭ ಕೋರಿದ್ದಾರೆ.
ಆರವ್, ಮೈ ಲವ್, ನೀನು ಹುಟ್ಟಿದ ದಿನ ಈ ಜಗತ್ತು ನನಗೆ ಕೇವಲ ಮಗುವನ್ನು ನೀಡಲಿಲ್ಲ, ಅದು ನನ್ನ ಆತ್ಮಕ್ಕೆ ಕನ್ನಡಿಯನ್ನೂ ನೀಡಿತು. ನನಗೆ ಸಾಧ್ಯ ಎಂದು ತಿಳಿಯದ ರೀತಿಯಲ್ಲಿ ನೀನು ನನ್ನನ್ನು ತೆರೆದಿಟ್ಟಿದ್ದೀಯ. ನೀನು ಬರುವ ಮುಂಚೆ ನಾನು ಬದುಕುತ್ತಿದೆ, ಆದರೆ ನಿನ್ನ ಜೊತೆ ನಾನು ಬೆಳೆಯುತ್ತಿದ್ದೇನೆ ಎಂದಿದ್ದಾರೆ.
ನಾನು ನಿನ್ನನ್ನು ರೂಪಿಸುತ್ತಿದ್ದೇನೆ ಎಂದು ನಾನು ಭಾವಿಸಿದ್ದೆ, ಆದರೆ ನಿನ್ನೊಂದಿಗಿನ ಪ್ರತಿ ಉಸಿರು ನನ್ನನ್ನು ಪುನರ್ರೂಪಿಸುತ್ತದೆ. ನೀನು ನನಗೆ ತಾಳ್ಮೆಯನ್ನು ಕಲಿಸುತ್ತಿರುವುದು ಪದಗಳಿಂದಲ್ಲ, ಬದಲಾಗಿ ನೀನು ನಂಬುವ ರೀತಿಯಿಂದ. ನೀನು ನನಗೆ ಪ್ರೀತಿಯನ್ನು ಕಲಿಸುತ್ತಿರುವುದು ಪಾಠಗಳಿಂದಲ್ಲ, ಬದಲಾಗಿ ನಿನ್ನ ಪುಟ್ಟ ಕೈ ನನ್ನ ಕಡೆಗೆ ತಲುಪುವ ರೀತಿಯಿಂದ. ನೀನು ನನಗೆ ಇರುವಿಕೆಯನ್ನು ಕಲಿಸುತ್ತಿದ್ದೀಯ - ಏಕೆಂದರೆ ನೀನು ನಗುವಾಗ, ಇಡೀ ಪ್ರಪಂಚವೇ ಕಣ್ಮರೆಯಾಗುತ್ತದೆ ಮತ್ತು ಬೇರೇನೂ ಮುಖ್ಯವಲ್ಲ.
ನೀನು ನನ್ನ ಮಗ ಆರವ್ ಮಾತ್ರವಲ್ಲ. ನೀನು ನನ್ನ ಗುರು, ನನ್ನ ರಿಮೈಂಡರ್, ನನ್ನ ಜಾಗೃತಿ. ನಿನ್ನ ಮೂಲಕ, ನಾನು ಭಯ ಪಡೋದನ್ನು ಬಿಡುತ್ತಿದ್ದೇನೆ, ಆತುರವನ್ನು ಬಿಡುತ್ತಿದ್ದೇನೆ, ಈ ಪ್ರಪಂಚದ ಶಬ್ದವನ್ನು ಕಲಿಯುತ್ತಿದ್ದೇನೆ. ನಿನ್ನ ಮೂಲಕ, ನಾನು ಮೃದುತ್ವ, ಆಶ್ಚರ್ಯ ಮತ್ತು ಮುಕ್ತ ಹೃದಯದಿಂದ ಬದುಕುವ ಧೈರ್ಯವನ್ನು ಕಲಿಯುತ್ತಿದ್ದೇನೆ.
ನಾನು ನಿನ್ನನ್ನು ಬೆಳೆಸಲು ಇಲ್ಲಿದ್ದೇನೆಯೋ ಅಥವಾ ನನ್ನನ್ನು ಬೆಳೆಸಲು ನಿನ್ನನ್ನು ಇಲ್ಲಿಗೆ ಕಳುಹಿಸಲಾಗಿದೆಯೋ ನನಗೆ ಗೊತ್ತಿಲ್ಲ. ಬಹುಶಃ ಅದು ಎರಡೂ ಆಗಿರಬಹುದು. ನನಗೆ ತಿಳಿದಿರುವುದು. ನಿನ್ನಿಂದಾಗಿ ನಾನು ಜೀವನವನ್ನು ನೋಡುವ ರೀತಿಯೇ ಬದಲಾಯ್ತು. ಶಾಶ್ವತವಾಗಿ ಬದಲಾಗಿದೆ. ಯಾವಾಗಲೂ ನಿನ್ನೊಂದಿಗಿರುವ ಅಮ್ಮ ಎಂದು ಭಾವನಾತ್ಮಕವಾಗಿ ಬರೆದುಕೊಂಡು ಫೋಟೊಗಳನ್ನು ಹಂಚಿದ್ದಾರೆ.
ಈ ಫೋಟೊ ಶೂಟ್ ತುಂಬಾನೆ ಮುದ್ದಾಗಿದೆ. ಮಯೂರಿ ಚೆಕ್ಡ್ ಮಿನಿ ಸ್ಕರ್ಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ಮತ್ತು ಜಾಕೆಟ್ ಧರಿಸಿದ್ದರೆ, ಮಗ ಆರವ್ ಬ್ಲ್ಯಾಕ್ ಡ್ರೆಸಲ್ಲಿ ಮಿಂಚುತ್ತಿದ್ದಾರೆ. ಅಮ್ಮ -ಮಗ ಮುದ್ದಾಡುತ್ತಾ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕನ್ನಡದ ಸೀರಿಯಲ್ ಪ್ರಿಯರ ಮನಸು ಗೆದ್ದ ನಟಿ ಮಯೂರಿ ಕ್ಯಾತರಿ, ಮತ್ತೊಂದಿಷ್ಟು ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದರು ನಟಿ ಅಷ್ಟೊಂದು ಖ್ಯಾತಿ ಪಡೆಯಲಿಲ್ಲ. ಕೊನೆಯದಾಗಿ ಮಯೂರಿ ನನ್ನ ದೇವರು ಧಾರಾವಾಹಿಯಲ್ಲಿ ನಟಿಸಿದ್ದರು.