ಮದುವೆಯಾದ ಒಂದೇ ವರ್ಷಕ್ಕೆ ಗಂಡನಿಗೆ ವಿಚ್ಛೇದನ ನೀಡಿದ ಯುವ ಸೀರಿಯಲ್ ನಟಿ?
Marathi Actress Yogita Chavan Files for Divorce from Saorabh Chaughule 'ಜೀವ್ ಮಝಾ ಗುಂತಲಾ' ಖ್ಯಾತಿಯ ನಟಿ ಯೋಗಿತಾ ಚವಾಣ್ ಮತ್ತು ನಟ ಸೌರಭ್ ಚೌಘುಲೆ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿದೆ. ಮದುವೆಯಾಗಿ ಒಂದು ವರ್ಷವಾಗುವ ಮುನ್ನವೇ ಇಬ್ಬರೂ ಪ್ರತ್ಯೇಕವಾಗಿದ್ದಾರೆ.

ಕೆಲವು ಸಮಯದಿಂದ, ಅನೇಕ ಜೋಡಿಗಳು ಬೇರ್ಪಡುತ್ತಿರುವ ಸುದ್ದಿಗಳು ಹೊರಬರುತ್ತಿವೆ. ಮಹಿ ವಿಜ್ ಮತ್ತು ಜಯ್ ಭಾನುಶಾಲಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದ್ದರೆ, ಮರಾಠಿ ಇಂಡಸ್ಟ್ರಿಯಲ್ಲೂ ಧಾರಾವಾಹಿಗಳಲ್ಲಿ ಜನಪ್ರಿಯರಾದ ಜೋಡಿ ಬೇರ್ಪಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಯೋಗಿತಾ ಚವಾಣ್ ಮತ್ತು ಸೌರಭ್ ಚೌಘುಲೆ ಮದುವೆಯಾಗಿ ಒಂದು ವರ್ಷ ಕೂಡ ಆಗಿಲ್ಲ ಮತ್ತು ಅವರ ಸಂಬಂಧ ಹದಗೆಟ್ಟಿದೆ ಎಂಬ ವದಂತಿಗಳಿವೆ.
ಕಲರ್ಸ್ ಮರಾಠಿಯಲ್ಲಿ ಪ್ರಸಾರವಾಗುತ್ತಿದ್ದ'ಜೀವ್ ಮಝಾ ಗುಂತಲಾ' ಸೀರಿಯಲ್ ಮೂಲಕ ಮನೆಮಾತಾದ ನಟಿ ಯೋಗಿತಾ ಚವಾಣ್. ಯೋಗಿತಾ 2024 ರಲ್ಲಿ ನಟ ಸೌರಭ್ ಚೌಘುಲೆ ಅವರನ್ನು ವಿವಾಹವಾದರು. ಆದರೆ ಈಗ ಅವರ ಸಂಬಂಧ ಹಳಸಿದೆ ಎಂಬ ವದಂತಿಗಳಿವೆ.
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ಯೋಗಿತಾ, ಕಳೆದ ಕೆಲವು ತಿಂಗಳುಗಳಿಂದ ಸೌರಭ್ ಜೊತೆಗಿನ ಯಾವುದೇ ಫೋಟೋಗಳು ಅಥವಾ ರೀಲ್‌ಗಳನ್ನು ಹಂಚಿಕೊಂಡಿಲ್ಲ. ದೀಪಾವಳಿ ಸಮಯದಲ್ಲೂ ಕೂಡ ಅವರು ಗಂಡನ ಜೊತೆ ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ.
ಯೋಗಿತಾ ಅವರ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಕೇವಲ ಗ್ರೂಪ್ ಫೋಟೋಗಳು, ಹಳೆಯ ರೀಲ್‌ಗಳು ಮತ್ತು ಸಂದರ್ಶನಗಳಿಂದ ತುಂಬಿದ್ದು, ಇದು ವಿಚ್ಛೇದನದ ವದಂತಿಗಳನ್ನು ಹುಟ್ಟುಹಾಕಿದೆ.
ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ಯೋಗಿತಾ ಮತ್ತು ಸೌರಭ್ ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ಅವರಿಬ್ಬರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಈ ಜೋಡಿ ತಮ್ಮ ಮದುವೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿಹಾಕಿದ್ದಾರೆ. ಈ ಜೋಡಿ 2024 ಮಾರ್ಚ್ 3 ರಂದು ವಿವಾಹವಾದರು. ಆದರೆ ಅವರ ವಿವಾಹ ಸಮಾರಂಭದ ಒಂದೇ ಒಂದು ಫೋಟೋ ಅಥವಾ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿಲ್ಲ.
ಅದರೊಂದಿಗೆ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ ಎನ್ನುವುದೂ ಗೊತ್ತಾಗಿದೆ.
ಸಿರೀಸ್ ಚಿತ್ರೀಕರಣದ ಸಮಯದಲ್ಲಿ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ, ಅವರು ಮದುವೆಯಾಗಲು ನಿರ್ಧರಿಸಿದರು. ಮದುವೆಯ ನಂತರ, ಯೋಗಿತಾ ಬಿಗ್ ಬಾಸ್ ಮರಾಠಿ ಸೀಸನ್ 5 ರಲ್ಲಿ ಭಾಗವಹಿಸಿದರು ಆದರೆ ಬೇಗನೆ ಎಲಿಮಿನೇಟ್ ಆಗಿದ್ದರು.