ಲಕ್ಷ್ಮೀ ನಿವಾಸ ಸಿದ್ಧೇ ಗೌಡ್ರ ಪತ್ನಿ ಭಾವನಾ ಸ್ಟೈಲಿಶ್ ಲುಕ್ ವೈರಲ್
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧೇ ಗೌಡ್ರ ಪತ್ನಿ ಭಾವನಾ ಆಗಿ ನಟಿಸುತ್ತಿರುವ ನಟಿ ದಿಶಾ ಮದನ್ ರಿಯಲ್ ಲೈಫಲ್ಲಿ ಎಷ್ಟೊಂದು ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ನೀವೆ ನೋಡಿ.

ಸಿದ್ಧೇ ಗೌಡ್ರ ಪತ್ನಿ ಭಾವನಾ
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧೇ ಗೌಡ್ರ ಮುದ್ದಿನ ಹೆಂಡ್ತಿ ಹಾಗೂ ಜಾಹ್ನವಿಯ ಮುದ್ದು ಅಕ್ಕ ಭಾವನಾ ಪಾತ್ರದ ಮೂಲಕ ಮನಸೆಳೆದ ನಟಿ ದಿಶಾ ಮದನ್. ಇವರ ಸೀರಿಯಲ್ ಪಾತ್ರ ಎಷ್ಟೊಂದು ಮೆಚ್ಯೂರ್ ಆಗಿರುವಂತದ್ದು ಅನ್ನೋದು ನಿಮಗೆ ಗೊತ್ತೇ ಇದೆ. ಹೆಚ್ಚು ಮಾತಿಲ್ಲ, ಸದಾ ಸೀರೆಯುಟ್ಟು, ಎಲ್ಲರಿಗೂ ಒಳ್ಳೆಯದನ್ನೆ ಬಯಸುವ ಹುಡುಗಿ ಭಾವನಾ ಪಾತ್ರಕ್ಕೆ ದಿಶಾ ಜೀವ ತುಂಬುತ್ತಿದ್ದಾರೆ.
ದಿಶಾ ಮದನ್
ಆದರೆ ರಿಯಲ್ ಲೈಫಲ್ಲಿ ದಿಶಾ ಮದನ್ ಆ ಪಾತ್ರಕ್ಕೆ ಪೂರ್ತಿಯಾಗಿ ವಿರುದ್ಧವಾಗಿದ್ದಾರೆ. ದಿಶಾ ರಿಯಲ್ ಆಗಿ ತುಂಬಾನೆ ಬೋಲ್ಡ್ ಆಗಿರುವ, ಮಾಡರ್ನ್ ಆಗಿರುವ ಬೆಡಗಿ. ಇದೀಗ ದಿಶಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ಅದನ್ನು ನೋಡಿದ್ರೆ, ಇವರೇನಾ ನಮ್ಮ ಭಾವನಾ ಮೇಡಂ ಅಂತ ಕೇಳಬಹುದು ಅಷ್ಟೊಂದು ಸ್ಟೈಲಿಶ್ ಆಗಿ ಬಂದಿದೆ.
ಭಾವನಾ ಸ್ಟೈಲಿಶ್ ಲುಕ್ ವೈರಲ್
ಹಲವಾರು ಸಮಯದ ಹಿಂದೆ ತೆಗೆಸಿರುವಂತಹ ಫೋಟೊಗಳನ್ನು ದಿಶಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ದಿಶಾ ಕಪ್ಪು ಬಣ್ಣದ ಕ್ರಾಪ್ ಟಾಪ್ ಧರಿಸಿದ್ದು, ಇದರ ಜೊತೆಗೆ ಆಫ್ ವೈಟ್ ಬಣ್ಣದ ಪ್ಯಾಂಟ್ ಧರಿಸಿ, ವಿಭಿನ್ನ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಮೆಸ್ಸಿ ಹೇರ್ ಸ್ಟೈಲ್ ಮಾಡಿಕೊಂಡಿರುವ ದಿಶಾ ಸಖತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.
ದಿಶಾ ಮದನ್ ಕರಿಯರ್
ಕುಲ ವಧು ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟ ದಿಶಾ ಮದನ್ ಸದ್ಯ ಲಕ್ಷ್ಮೀ ನಿವಾಸದಲ್ಲಿ ಸಮಸ್ಯೆ ಮೇಲೆ ಸಮಸ್ಯೆ ಎದುರಿಸುವ ಭಾವನಾ ಆಗಿದ್ದಾರೆ. ಇವರು ಹಿಂದಿ, ಕನ್ನಡ ಸೇರಿ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದಾರೆ. ಅಷ್ಟೇ ಅಲ್ಲ ಇವರು ಫ್ರೆಂಚ್ ಬಿರಿಯಾನಿ ಹಾಗೂ ಹಂಬಲ್ ಪೊಲಿಟೀಶಿಯನ್ ನೋಗರಾಜ್ ಎನ್ನುವ ಸೀರೀಸ್ ನಲ್ಲೂ ನಟಿಸಿದ್ದರು.