ಲಕ್ಷ್ಮೀ ಬಾರಮ್ಮ ಗಂಗಕ್ಕಾ ಮನೆಗೆ ಮಹಾಲಕ್ಷ್ಮಿಯ ಆಗಮನ… ತಾಯಿಯಾದ ಸಂಭ್ರಮದಲ್ಲಿ ನಟಿ
ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗಂಗಕ್ಕಾ ಪಾತ್ರದ ಮೂಲಕ ಮಿಂಚಿದ ನಟಿ ಹರ್ಷಿತಾ ಹೆಣ್ಣು ಮಗುವಿಗೆ ತಾಯಿಯಾಗಿದ್ದು, ಸದ್ಯ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ. ನಟಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಗಂಗಾ ಪಾತ್ರಕ್ಕೆ ಜೀವ ತುಂಬಿದ್ದ ಹರ್ಷಿತಾ ಕಾಮಿಡಿ ಟೈಮಿಂಗ್ ಅನ್ನು ಜನ ಇಷ್ಟಪಟ್ಟಿದ್ದರು.

ಲಕ್ಷ್ಮೀ ಬಾರಮ್ಮ ಗಂಗಕ್ಕಾ
ಕಲರ್ಸ್ ಕನ್ನಡದಲ್ಲಿ (Colors Kannada)ಪ್ರಸಾರವಾಗುತ್ತಿದ್ದ ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ಗಂಗಕ್ಕಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಹರ್ಷಿತಾ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದು, ಜನ ನಟಿಗೆ ಶುಭಾಶಯ ಕೋರಿದ್ದಾರೆ.
ಕಾಮಿಡಿ ಪಂಚಿಂಗ್
ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ಗಂಗಾ ಪಾತ್ರಕ್ಕೆ ಜೀವ ತುಂಬಿದ್ದ ಹರ್ಷಿತಾ ಅವರ ಕಾಮಿಡಿ ಟೈಮಿಂಗ್ ಅನ್ನು ಜನ ಇಷ್ಟಪಟ್ಟಿದ್ದರು. ನಂತರ ಇದ್ದಕ್ಕಿದ್ದಂತೆ ಸೀರಿಯಲ್ ನಿಂದ ಹೊರ ನುಡಿದಿದ್ದರು.
ನಟಿ ಹರ್ಷಿತಾ
ನಟಿ ಹರ್ಷಿತಾ (Harshitha) ಅವರು ಲಕ್ಷ್ಮಿ ಬಾರಮ್ಮ ಅಲ್ಲದೇ, ಶ್ರಾವಣಿ ಸುಬ್ರಹ್ಮಣ್ಯ ಹಾಗೂ ರಾಧಿಕಾ ಸೀರಿಯಲ್ ನಲ್ಲಿ ನಟಿಸಿದ್ದರು. ಎಲ್ಲಾ ಸೀರಿಯಲ್ ಗಳು ಹರ್ಷಿತಾ ಅವರು ತಮ್ಮ ಕಾಮಿಡಿ ಮೂಲಕ ಗಮನ ಸೆಳೆದಿದ್ದರು. ನಂತರ ಗರ್ಭಿಣಿಯಾದ ಕಾರಣ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಿಂದ ಹೊರ ನಡೆದಿದ್ದರು.
ಮಜಾಭಾರತ ನಟಿ
ಇನ್ನು ಹರ್ಷೀತಾ ಅವರು ಸೀರಿಯಲ್ ಗಳಲ್ಲಿ ನಟಿಸುವ ಮೊದಲು ‘ಮಜಾಭಾರತ’ ಎನ್ನುವ ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಇದರ ನಂತರವೇ ಹರ್ಷಿತಾಗೆ ಸೀರಿಯಲ್ ಅವಕಾಶಗಳು ಒಂದಾದ ಮೇಲೆ ಒಂದು ಹುಡುಕಿಕೊಂಡು ಬಂತು.
ಅದ್ಧೂರಿ ಸೀಮಂತ
ಹರ್ಷಿತಾ ಅವರ ಪತಿ ಸಂದೀಪ್ ಆಚಾರ್ (Sandeep Achar) ಅವರು ರೈಟರ್ ಆಗಿದ್ದು, ಅವರು ಮಜಾಭಾರತ ಸೇರಿ ಹಲವು ಕಾಮಿಡಿ ಶೋಗಳಲ್ಲಿ ನಾಟಕಗಳಿಗೆ ಸ್ಕ್ರೀಪ್ಟ್ ಬರೆಯುತ್ತಿದ್ದರು. ಹರ್ಷಿತಾ ಮಧುಗಿರಿಯ ಹುಡುಗಿಯಾಗಿದ್ದು, ಅವರ ಪತಿ ಸಂದೀಪ್ ಮಂಗಳೂರಿನವರಾಗಿದ್ದಾರೆ. ಹಾಗಾಗಿ ಅವರ ಸೀಮಂತವನ್ನು ಮಂಗಳೂರಿನ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ಮಾಡಲಾಗಿತ್ತು.
ಫೋಟೊ ಶೂಟ್ ವೈರಲ್
ನಟಿ ಹರ್ಷಿತಾ ಅವರು ಹಲವಾರು ರೀತಿಯಲ್ಲಿ ಪ್ರೆಗ್ನೆನ್ಸಿ ಫೋಟೊ ಶೂಟ್ ಗಳನ್ನು ಮಾಡಿಸುತ್ತಿದ್ದು, ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ಅಭಿಮಾನಿಗಳು ಸಹ ಅದನ್ನು ತುಂಬಾನೆ ಇಷ್ಟಪಡುತ್ತಿದ್ದರು.
ಪ್ರೆಗ್ನೆನ್ಸಿ ಜರ್ನಿ
ಹರ್ಷಿತಾ ಅವರು ಸದ್ಯ ತಮ್ಮ ತಾಯಿ ಮನೆಯಾದ ಮಧುಗಿರಿಯಲ್ಲೇ ನೆಲೆಸಿದ್ದು, ಅಲ್ಲಿಂದಲೇ ಪ್ರೆಗ್ನೆನ್ಸಿ ಜರ್ನಿ ಬಗ್ಗೆ ವಿಡಿಯೋ ಮಾಡಿ, ತಮ್ಮ ಅನುಭವ, ಊಟ, ತಿಂಡಿಯ ಬಗ್ಗೆ ತಿಳಿಸುತ್ತಿದ್ದರು. ಇದೀಗ ತಾಯಿಯಾದ ಸಂಭ್ರಮದಲ್ಲಿರುವ ಹರ್ಷಿತಾ, ಮಗುವಿನ ಜೊತೆ ತಾಯ್ತನ ಸುಖ ಅನುಭವಿಸುತ್ತಿದ್ದಾರೆ.