- Home
- Entertainment
- TV Talk
- Bigg Boss Kannada Season 12 ಶುರುವಾಗೋ ಟೈಮ್ ಬಂತು! ಹಾಗಿದ್ರೆ ಸ್ಪರ್ಧಿಗಳು ಯಾರು? ಯಾರು?
Bigg Boss Kannada Season 12 ಶುರುವಾಗೋ ಟೈಮ್ ಬಂತು! ಹಾಗಿದ್ರೆ ಸ್ಪರ್ಧಿಗಳು ಯಾರು? ಯಾರು?
ಆದಷ್ಟು ಬೇಗ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಸಾರ ಆಗಲಿದೆ. ಹಾಗಿದ್ರೆ ಸ್ಪರ್ಧಿಗಳು ಯಾರು? ಯಾರು?

ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗುವುದು. ಈ ಶೋನಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ?
ಯುಟ್ಯೂಬ್ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿರುವ ಡಾ ಬ್ರೋ ಅವರು ಈ ಬಾರಿ ಬಿಗ್ ಬಾಸ್ ಶೋಗೆ ಆಗಮಿಸಲಿದ್ದಾರಂತೆ.
ಮಡೆನೂರು ಮನು ಅವರು ಕಾಮಿಡಿ ರಿಯಾಲಿಟಿ ಶೋ ಹಾಗು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇವರು ಕೂಡ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರಂತೆ.
ವರ್ಷಾ ಕಾವೇರಿ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಬೇಕು ಎಂದು ಆಸೆಪಟ್ಟಿದ್ದಾರೆ. ಕಳೆದ ಎರಡು ಸೀಸನ್‌ಗಳಿಂದಲೂ ಇವರ ಹೆಸರು ಕೇಳಿ ಬರ್ತಿದೆ.
ವರುಣ್ ಆರಾಧ್ಯ ಅವರು ಕೂಡ ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರಂತೆ. ಬೃಂದಾವನ ಧಾರಾವಾಹಿಯಲ್ಲಿ ನಟಿಸಿರುವ ವರುಣ್, ಸದ್ಯ ಯುಟ್ಯೂಬ್ ಚಾನೆಲ್‌ಗೆ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಾರೆ.
ರೀಲ್ಸ್ ಮೂಲಕ ಫೇಮಸ್ ಆಗಿರೋ ರೇಷ್ಮಾ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರಂತೆ.
ಆನಂದ್ ಗುರೂಜಿ ಅವರು ಈ ಬಾರಿ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರಂತೆ. ಜನರಿಗೆ ಹತ್ತಿರ ಆಗುವ ಕಾರಣಕ್ಕೆ ಅವರು ಈ ಶೋನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗ್ತಿದೆ.
ನಟಿ ಭವ್ಯಾ ಗೌಡ ಸಹೋದರಿ ದಿವ್ಯಾ ಗೌಡ ಕೂಡ ಈ ಶೋನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಹಿಂದೆಯೇ ಅವರು ಬಿಗ್ ಬಾಸ್ ನನಗೆ ಸೆಟ್ ಆಗೋದಿಲ್ಲ ಎಂದಿದ್ದರು.
ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿರೋ ಮಿಂಚು ಅವರು ಈ ಬಾರಿ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಸಾಧ್ಯತೆ ಜಾಸ್ತಿ ಇದೆ.
ಕಳೆದ ಎರಡು ಸೀಸನ್‌ಗಳಿಂದಲೂ ನಿರೂಪಕಿ ಜಾಹ್ನವಿ ಹೆಸರು ಕೇಳಿ ಬರುತ್ತಿತ್ತು. ಈ ಬಾರಿ ಬಿಗ್ ಬಾಸ್ ಶೋ ಹೋಗೋದು ಪಕ್ಕಾ ಅಂತೆ.
ಅಶೋಕ್ ಶರ್ಮಾ ಅವರು ಕೂಡ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಸಾಧ್ಯತೆ ಜಾಸ್ತಿ ಇದೆ.
ಸ್ಟ್ಯಾಂಡಪ್ ಕಾಮಿಡಿ ಮೂಲಕ ಹೆಸರು ಮಾಡಿರೋ ರಾಘವೇಂದ್ರ ಆಚಾರ್ಯ ಕೂಡ ಈ ಬಾರಿ ಬಿಗ್ ಬಾಸ್ ಶೋ ಭಾಗ ಆಗಿರಲಿದ್ದಾರಂತೆ.