- Home
- Entertainment
- TV Talk
- ಇಷ್ಟುದಿನ ಕಾದಿದ್ದು ಸಾಕ್ರೀ...! ಕಿಚ್ಚ ಸುದೀಪ್ Bigg Boss Kannada Season 12 ಬಗ್ಗೆ ಅಪ್‌ಡೇಟ್ ಕೊಟ್ಟ ವಾಹಿನಿ! ಏನದು?
ಇಷ್ಟುದಿನ ಕಾದಿದ್ದು ಸಾಕ್ರೀ...! ಕಿಚ್ಚ ಸುದೀಪ್ Bigg Boss Kannada Season 12 ಬಗ್ಗೆ ಅಪ್‌ಡೇಟ್ ಕೊಟ್ಟ ವಾಹಿನಿ! ಏನದು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗೋದು ಪಕ್ಕಾ. ಈಗ ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿ ಮಾಹಿತಿ ನೀಡಿದೆ. ಹೀಗಾಗಿ ಇಷ್ಟುದಿನದ ಕಾಯುವಿಕೆಗೆ ಉತ್ತರ ಸಿಕ್ಕಿದೆ.

ಯಾವಾಗ ಬಿಗ್ ಬಾಸ್ ಶುರು ಆಗಲಿದೆ?
ಸೆಪ್ಟೆಂಬರ್ ಅಂತ್ಯದಲ್ಲಿ ಬಿಗ್ ಬಾಸ್ ಕನ್ನಡ ಶೋ ಶುರುವಾಗುವುದು ಎನ್ನಲಾಗಿದೆ. ಈ ವಿಷಯವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಸೆಪ್ಟೆಂಬರ್ 28ಕ್ಕೆ ಶೋ ಆರಂಭ ಎನ್ನಲಾಗ್ತಿದೆ. ಸಾಮಾನ್ಯವಾಗಿ ನೂರು ದಿನಗಳ ಕಾಲ ಈ ಶೋ ಇರುವುದು.
ಪ್ರೋಮೋ ರಿಲೀಸ್ ಆಗಬೇಕು
ಅಂದಹಾಗೆ ಇನ್ನು ಕಿಚ್ಚ ಸುದೀಪ್ ಅವರಿರುವ ಪ್ರೋಮೋ ಶೂಟ್ ಕೂಡ ಮಾಡಬೇಕಿದೆ. ಬಿಗ್ ಬಾಸ್ ಶೋಗೆ ಸಂಬಂಧಿಸಿದಂತೆ ಎರಡು-ಮೂರು ಪ್ರೋಮೋ ರಿಲೀಸ್ ಮಾಡಲಾಗುವುದು. ಪ್ರತಿ ಬಾರಿ ಕೂಡ ವಿಭಿನ್ನವಾಗಿ ಕಾನ್ಸೆಪ್ಟ್ ಇಟ್ಟುಕೊಂಡು, ಪ್ರೋಮೋ ಶೂಟ್ ಮಾಡಲಾಗುತ್ತದೆ.
ಸ್ಪರ್ಧಿಗಳು ಯಾರು? ಯಾರು?
ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರು? ಯಾರು ಇರಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ಕೆಲ ಸ್ಪರ್ಧಿಗಳ ಹೆಸರಿರುವ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಲೋಗೋ ಲಾಂಚ್ ಆಗಿದೆ!
“ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ... ಈ ಸಲ ಕಿಚ್ಚು ಮಾತ್ರ ಹೆಚ್ಚು!” ಎಂಬ ಟೈಟಲ್ ಅಡಿಯಲ್ಲಿ ಬಿಗ್ ಬಾಸ್ ತಂಡವು ಲೋಗೋ ಲಾಂಚ್ ಮಾಡಿ, ರಿಲೀಸ್ ಮಾಡಿದೆ.
ಕಿಚ್ಚ ಸುದೀಪ್ ನಿರೂಪಣೆ
ಈ ಬಾರಿ ಕೂಡ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ. ಮುಂದಿನ ನಾಲ್ಕು ಸೀಸನ್‌ಗಳ ಕಾಲ ನಿರೂಪಣೆ ಮಾಡೋದಾಗಿ ಅವರು ಹೇಳಿಕೊಂಡಿದ್ದಾರೆ. ಈ ಬಾರಿ ಯಾವ ರೀತಿ ಶೋ ಮೂಡಿ ಬರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.