- Home
- Entertainment
- TV Talk
- Karna Serial: ಕೊನೆಗೂ ನಿತ್ಯಾ, ಕರ್ಣ ಮದುವೆ ಆಯ್ತು; ನಿಧಿ ಅಕ್ಕನ ಹೊಟ್ಟೇಲಿ ಮಗು! ಎಂಥ ಟ್ವಿಸ್ಟ್ ಕೊಟ್ರಪ್ಪಾ!
Karna Serial: ಕೊನೆಗೂ ನಿತ್ಯಾ, ಕರ್ಣ ಮದುವೆ ಆಯ್ತು; ನಿಧಿ ಅಕ್ಕನ ಹೊಟ್ಟೇಲಿ ಮಗು! ಎಂಥ ಟ್ವಿಸ್ಟ್ ಕೊಟ್ರಪ್ಪಾ!
ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ನಿಧಿ ನಡುವೆ ಕರ್ಣ ಯಾರನ್ನು ಮದುವೆ ಆಗ್ತಾನೆ ಎನ್ನೋದು ದೊಡ್ಡ ಪ್ರಶ್ನೆ. ಅಕ್ಕ-ತಂಗಿ ಇಬ್ಬರಿಗೂ ಕರ್ಣನ ಮೇಲೆ ಅಭಿಮಾನ, ಗೌರವ ಇದೆ. ಕರ್ಣ, ನಿಧಿ ಪರಸ್ಪರ ಪ್ರೀತಿಸುತ್ತಿದ್ದರೂ, ಇನ್ನೂ ಪ್ರೀತಿ ಹೇಳಿಕೊಂಡಿಲ್ಲ. ಈ ನಡುವೆ ಸೀರಿಯಲ್ ತಂಡವು ಭರ್ಜರಿ ಟ್ವಿಸ್ಟ್ ಕೊಟ್ಟಿದೆ.

ನಿತ್ಯಾಗೆ ಲವ್ ವಿಷಯ ಹೇಳದ ನಿಧಿ
ತೇಜಸ್ ಹಾಗೂ ನಿತ್ಯಾ ಮದುವೆ ಫಿಕ್ಸ್ ಆಗಿದ್ದು, ಎಲ್ಲ ತಯಾರಿಯೂ ನಡೆಯುತ್ತಿದೆ. ನಿಧಿ ಹಾಗೂ ಕರ್ಣ ಲವ್ ಮಾಡುತ್ತಿರುವ ವಿಷಯ ರಮೇಶ್, ನಯನತಾರಾ ಬಿಟ್ಟು ಉಳಿದವರಿಗೆ ಯಾರಿಗೂ ಗೊತ್ತಿಲ್ಲ. ಕರ್ಣನಿಂದ ಎಷ್ಟು ಒಳ್ಳೆಯದಾಗುವುದೋ ಅಷ್ಟೇ ಅವನಿಂದ, ಅವನ ಕುಟುಂಬದಿಂದ ಸಮಸ್ಯೆ ಆಗುತ್ತದೆ ಎಂದು ನಿತ್ಯಾ ನಂಬಿಕೊಂಡು ಕೂತಿದ್ದಾಳೆ. ಇದೇ ಭಯಕ್ಕೆ ನಿಧಿ ಕೂಡ ತನ್ನ ಅಕ್ಕನ ಬಳಿ ಪ್ರೀತಿ ವಿಷಯವನ್ನು ಹೇಳಿಲ್ಲ.
ತೇಜಸ್ ಹಾಗೂ ನಿತ್ಯಾ ಮದುವೆ ಆಗಲ್ಲ
ಈ ಮೊದಲೇ ಹೇಳಿದಂತೆ ನಿತ್ಯಾ ಹಾಗೂ ತೇಜಸ್ ಮದುವೆ ಫಿಕ್ಸ್ ಆದರೂ ಕೂಡ ಕಾರಣಾಂತರಗಳಿಂದ ಈ ಮದುವೆ ನಡೆಯೋದಿಲ್ಲ. ಏನೋ ಒಂದಿಷ್ಟು ಸಮಸ್ಯೆ ಎದುರಾಗಲೂಬಹುದು. ತೇಜಸ್ ಮುಖವಾಡ ಏನು ಅಂತ ಗೊತ್ತಾಗಲೂಬಹುದು. ಆಗ ಈ ಮದುವೆ ನಿಲ್ಲುತ್ತದೆ.
ನಿತ್ಯಾ, ಕರ್ಣ ಮದುವೆ ಆಗಬೇಕು ಎನ್ನೋ ಒತ್ತಡ
ಹಸೆಮಣೆ ಮೇಲೆ ಕೂತ ನಿತ್ಯಾಳನ್ನು ಯಾರಾದರೂ ಮದುವೆ ಆಗಬೇಕು. ಹಸೆಮಣೆ ಕೂತ ಮೇಲೆ ಮದುವೆ ಮುರಿದರೆ ಮತ್ತೆ ಮದುವೆ ಆಗೋದು ಕಷ್ಟ ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ನಿತ್ಯಾ ಹಾಗೂ ಕರ್ಣನ ಮದುವೆ ಆಗಬೇಕು ಅಂತ ಮನೆಯವರು ಹೇಳಬಹುದು.
ನಿಧಿ ಹೃದಯ ಒಡೆಯಿತು
ಒಂದು ಕಡೆ ಮನೆಯವರ ಆಸೆಗೆ ಇಲ್ಲ ಎಂದು ಹೇಳಲಾಗದೆ, ನಿಧಿಯನ್ನು ಮರೆಯಲಾಗದೆ ಕರ್ಣ ಈ ಮದುವೆಗೆ ಒಪ್ಪಿಗೆ ಸೂಚಿಸುತ್ತಾನೆ. ಸದ್ಯ ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು, ಅದರಲ್ಲಿ ಕರ್ಣ ಹಾಗೂ ನಿತ್ಯಾ ಬಂಗಾರದ ಬಣ್ಣದ ಉಡುಗೆಯಲ್ಲಿ ವಧು-ವರರಾಗಿ ಕಂಗೊಳಿಸಿದ್ದಾರೆ. ನಿಧಿಯನ್ನು ಮದುವೆ ಆಗಬೇಕು ಎಂದು ಕನಸು ಕಂಡಿದ್ದ ಕರ್ಣನಿಗೆ ಈಗ ನಿತ್ಯಾಳನ್ನು ವರಿಸುವ ಸಮಯ ಬಂದಿದೆ. ಕೊನೆಗೂ ನಿಧಿ ಮುಖ ನೋಡಿಕೊಂಡು ಅವನು ನಿತ್ಯಾಗೆ ತಾಳಿ ಕಟ್ಟುತ್ತಾನೆ. ಈ ಮದುವೆಯಿಂದ ಕರ್ಣ, ನಿಧಿ, ನಿತ್ಯಾಗೂ ಕೂಡ ಬೇಸರ ಆಗಿದೆ.
ನಿತ್ಯಾ ಪ್ರಗ್ನೆಂಟ್ ಎನ್ನೋದು ಕರ್ಣನಿಗೆ ಗೊತ್ತಾಯ್ತು
ಇನ್ನೇನು ಸಪ್ತಪದಿ ತುಳಿಯುವಾಗ ಬೈಮಿಸ್ಟೇಕ್ ಆಗಿ ಕರ್ಣ, ನಿತ್ಯಾಳ ಕೈ ಹಿಡಿಯುತ್ತಾನೆ, ಆಗ ಅವನಿಗೆ ನಾಡಿ ಮಿಡಿತ ಗೊತ್ತಾಗುವುದು. ಆ ನಾಡಿಮಿಡಿತದಿಂದ ನಿತ್ಯಾ ಪ್ರಗ್ನೆಂಟ್ ಎನ್ನೋ ವಿಷಯ ಡಾಕ್ಟರ್ ಕರ್ಣನಿಗೆ ಅರಿವಾಗುತ್ತದೆ. ಒಟ್ಟಿನಲ್ಲಿ ತೇಜಸ್ ಮಗುವಿಗೆ ಕರ್ಣ ತಂದೆಯಾಗಬಹುದು. ಆದರೆ ಈ ವಿಷಯವನ್ನು ಅವನು ಈಗ ಯಾರಿಗೂ ಹೇಳೋದಿಲ್ಲ. ಈ ವಿಷಯವನ್ನು ರಿವೀಲ್ ಮಾಡಿದರೆ ನಿತ್ಯಾ ಇಮೇಜ್ ಡ್ಯಾಮೇಜ್ ಆಗಬಹುದು ಎಂಬುದಿರುತ್ತದೆ.
ನಿಧಿ ಫ್ಯಾನ್ಸ್‌ಗೆ ಬೇಸರ
ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂಬ ಕುತೂಹಲ ಮೂಡಿದೆ. ನಿತ್ಯಾ-ಕರ್ಣ ಮದುವೆಯು ನಿಧಿ ಅಭಿಮಾನಿಗಳಿಗೆ ಬೇಸರ ತರೋದರಲ್ಲಿ ಯಾವುದೇ ಅಚ್ಚರಿ ಇಲ್ಲ. ಈಗಾಗಲೇ ನಿಧಿ-ಕರ್ಣ ಜೋಡಿ ಅನೇಕರ ಮನಸ್ಸು ಗೆದ್ದಿದೆ.
ಕರ್ಣನನ್ನು ನಿತ್ಯಾ ಒಪ್ಪುತ್ತಾಳಾ?
ಮದುವೆಯಾದಬಳಿಕ ಕರ್ಣನನ್ನು ನಿತ್ಯಾ ಒಪ್ಪುತ್ತಾಳಾ? ಅವನ ಜೊತೆ ಬಾಳುತ್ತಾಳಾ? ದಿನದಿಂದ ದಿನಕ್ಕೆ ಕರ್ಣನ ಮೇಲೆ ನಿತ್ಯಾಗೆ ಪ್ರೀತಿ ಹುಟ್ಟುವುದಾ?
ಕರ್ಣನ ಲವ್ ಫೆಲ್ಯೂಯರ್
ಕರ್ಣ ಮೊದಲ ಬಾರಿಗೆ ಲವ್ ಮಾಡಿದ್ದನು. ದೊಡ್ಡ ಮನೆಯಲ್ಲಿದ್ರೂ ಅನಾಥನಂತೆ ಅವನು ಬೆಳೆದಿದ್ದನು. ಆದರೆ ಅವನ ಜೀವನದಲ್ಲಿ ನಿಧಿಯಿಂದ ಒಂದಷ್ಟು ಬದಲಾವಣೆ ಆಗಿತ್ತು. ಆದರೆ ಈಗ ನಿಧಿಯೇ ಅವನ ಬದುಕಿನಲ್ಲಿ ಇಲ್ಲದಂತಾಗಿದೆ.
ಮುಂದೆ ಏನು ಕಥೆ?
ಕರ್ಣ ಹಾಗೂ ನಿಧಿ ಲವ್ ವಿಷಯ ಈಗ ನಿತ್ಯಾಗೆ ಗೊತ್ತಾದರೆ ಏನಾಗುವುದು ಎಂಬ ಪ್ರಶ್ನೆ ಕಾಡಿದೆ.
ಕರ್ಣ ಪಾತ್ರದಲ್ಲಿ ಕಿರಣ್ ರಾಜ್, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ, ನಿಧಿ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ.