ಶಿರಡಿಯಲ್ಲಿ ಸಾರಾ ಅಣ್ಣಯ್ಯ…. ಆದಷ್ಟು ಬೇಗ ಸೀರಿಯಲ್’ಗೆ ಬರುವಂತೆ ಫ್ಯಾನ್ಸ್ ಮನವಿ
ಕನ್ನಡತಿ, ಅಮೃತಧಾರೆ ಧಾರಾವಾಹಿ ಮೂಲಕ ಕನ್ನಡ ಸಿರಿಯಲ್ ಪ್ರೇಮಿಗಳಿಗೆ ಅದ್ಭುತ ಮನರಂಜನೆ ನೀಡಿದ ನಟಿ ಸಾರಾ ಅಣ್ಣಯ್ಯ ಇದೀಗ ಸೀರಿಯಲ್ ನಿಂದ ದೂರ ಉಳಿದಿದ್ದು ಅಭಿಮಾನಿಗಳು ಮತ್ತೆ ನಟಿಸುವಂತೆ ಮನವಿ ಮಾಡಿದ್ದಾರೆ.

ಸಾರಾ ಅಣ್ಣಯ್ಯ
ಕನ್ನಡ ಕಿರುತೆರೆಯಲ್ಲಿ ತಮ್ಮ ಸ್ಟೈಲ್, ನಟನೆ, ನೆಗೆಟೀವ್ ಶೇಡ್ ನಲ್ಲಿದ್ರೂ ಜನ ತುಂಬಾ ಇಷ್ಟಪಟ್ಟ ನಟಿ ಎಂದರೆ ಅದು ಸಾರಾ ಅಣ್ಣಯ್ಯ (Sara Annaiah). ತಮ್ಮ ನಟನೆ ಮೂಲಕವೇ ಇವರು ಮನ ಗೆದ್ದಿದ್ದರು.
ಕನ್ನಡತಿಯ ವರುಧಿನಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕನ್ನಡತಿ ಧಾರಾವಾಹಿಯಲ್ಲಿ ವರುಧಿನಿ ಪಾತ್ರಕ್ಕೆ ಜೀವ ತುಂಬಿ ನಟಿಸಿದವರು ಸಾರಾ ಅಣ್ಣಯ್ಯ. ಆ ಪಾತ್ರದ ಮೂಲಕ ಜನ ಇವರನ್ನು ಇಷ್ಟಪಟ್ಟಿದ್ದರು.
ಅಮೃತಧಾರೆಯ ಮಹಿಮಾ
ಇನ್ನು ಅಮೃತಧಾರೆಯಲ್ಲೂ (Amruthadhaare)ಅಷ್ಟೇ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರವು ಸಹ ಆರಂಭದಲ್ಲಿ ನೆಗೆಟಿವ್ ಶೇಡ್ ಇದ್ದು, ಸದ್ಯ ಪಾಸಿಟಿವ್ ಆಗಿದೆ. ಆರಂಭದಲ್ಲಿ ಸಾರಾ ಈ ಪಾತ್ರದಲ್ಲಿ ನಟಿಸಿದ್ದರು.
ಇದಕ್ಕಿದ್ದಂತೆ ಸೀರಿಯಲ್ ಬಿಟ್ಟ ನಟಿ
ಸೀರಿಯಲ್ ಮಧ್ಯದಲ್ಲಿ ಸಾರಾ ಅಣ್ಣಯ್ಯ ಆ ಪಾತ್ರದಿಂದ ಹೊರ ಬಂದರು, ಸದ್ಯ ಆ ಪಾತ್ರಕ್ಕೆ ಇಶಿತಾ ವರ್ಷ (Ishitha Varsha) ಜೀವ ತುಂಬುತ್ತಿದ್ದಾರೆ. ಆದರೆ ಇದುವರೆಗೆ ಸೀರಿಯಲ್ ನಿಂದ ಹೊರಬಂದಿರೋದಕ್ಕೆ ನಟಿ ಕಾರಣ ತಿಳಿಸಿಲ್ಲ.
ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್
ಇನ್ನು ನಟನೆಯಿಂದ ದೂರ ಉಳಿದಿರುವ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ತಮ್ಮ ಟ್ರಾವೆಲ್ ಫೋಟೊ, ಫೋಟೊ ಶೂಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ.
ಶಿರಡಿಯಲ್ಲಿ ಸಾರಾ
ನಟಿ ಸಾರಾ ಅಣ್ಣಯ್ಯ ಇದೀಗ ಶಿರಡಿಗೆ (Shirdi Saibaba) ತೆರಳಿದ್ದು, ಸಾಯಿ ಬಾಬನ ಭಕ್ತೆಯಾಗಿರುವ ನಟಿ ಬಾಬನ ದರ್ಶನ ಪಡೆದು ಬಂದಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ನಂಬಿಕೆ ಶುರು, ಸಂಶಯಕ್ಕೆ ಕೊನೆ
ನಟಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶಿರಡಿಯಲ್ಲಿನ ಸುಂದರ ಫೋಟೊಗಳನ್ನು ಶೇರ್ ಮಾಡಿಕೊಂಡು Where faith begins, doubts end – Om Sai Ram ಎಂದು ಬರೆದುಕೊಂಡಿದ್ದಾರೆ.
ವೀಕ್ಷಕರಿಂದ ಮನವಿ
ಸಾರಾ ಅಣ್ಣಯ್ಯ ಫೋಟೊಗಳನ್ನು ಸಾವಿರಾರು ಜನ ಇಷ್ಟಪಟ್ಟಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿ ಮೇಡಂ ಆದಷ್ಟು ಬೇಗನೆ ಸೀರಿಯಲ್ ಗೆ ಮತ್ತೆ ಎಂಟ್ರಿ ಕೊಡಿ, ಬಿಗ್ ಬಾಸ್ ಮನೆಯಲ್ಲಿ ನಿಮ್ಮನ್ನು ಕಾಣುವ ಬಯಕೆ ಎಂದಿದ್ದಾರೆ.