- Home
- Entertainment
- TV Talk
- ಬಿಗ್ ಬಾಸ್ ಆರಂಭ… ಒಂದಲ್ಲ, ಎರಡಲ್ಲ 3 ಧಾರಾವಾಹಿ ಮುಕ್ತಾಯ… 1000 ಸಂಚಿಕೆಗೆ ಜನಪ್ರಿಯ ಸೀರಿಯಲ್ ಅಂತ್ಯ
ಬಿಗ್ ಬಾಸ್ ಆರಂಭ… ಒಂದಲ್ಲ, ಎರಡಲ್ಲ 3 ಧಾರಾವಾಹಿ ಮುಕ್ತಾಯ… 1000 ಸಂಚಿಕೆಗೆ ಜನಪ್ರಿಯ ಸೀರಿಯಲ್ ಅಂತ್ಯ
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾಗುವ ಮುನ್ನ ಒಂದಲ್ಲ, ಎರಡಲ್ಲ ಮೂರು ಧಾರಾವಾಹಿಗಳು ಮುಕ್ತಾಯವಾಗಲಿವೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಇತ್ತೀಚೆಗೆ ಶುರುವಾದ ಎರಡು ಧಾರಾವಾಹಿ ಹಾಗೂ ಮತ್ತೊಂದು ಜನಪ್ರಿಯ ಧಾರಾವಾಹಿ 1000 ಎಪಿಸೋಡ್ ಗೆ ಮುಕ್ತಾಯಗೊಳ್ಳಲಿದೆ.

ಬಿಗ್ ಬಾಸ್ ಆರಂಭ
ಕಿರುತೆರೆಯೆಲ್ಲೆಡೆ ಬಿಗ್ ಬಾಸ್ ಹವಾ ಶುರುವಾಗಿದೆ . ಈಗಾಗಲೇ ಕಿಚ್ಚ ಸುದೀಪ್ ಪ್ರೊಮೋಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ. ಶೀಘ್ರದಲ್ಲೇ ಅಂದರೆ ಸೆಪ್ಟೆಂಬರ್ 28 ರಂದು ಬಿಗ್ ಬಾಸ್ ಶುರುವಾಗಲಿದೆ. ಅದಕ್ಕಾಗಿ ಕೆಲವು ಸೀರಿಯಲ್ ಗಳು ಅಂತ್ಯ ಕಾಣಲಿವೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಮೂರು ಧಾರಾವಾಹಿಗಳು ಅಂತ್ಯ ಕಾಣಲಿವೆ.
ಮೂರು ಧಾರಾವಾಹಿಗಳು ಅಂತ್ಯ
ಬಿಗ್ ಬಾಸ್ ಆರಂಭವಾಗೋದಕ್ಕೂ ಮುನ್ನ ಯಾವ ಧಾರಾವಾಹಿಗಳು ಅಂತ್ಯವಾಗಲಿವೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ದೃಷ್ಟಿ ಬೊಟ್ಟು, ಯಜಮಾನ, ರಾಮಾಚಾರಿ ಧಾರಾವಾಹಿಗಳು ಅಂತ್ಯ ಕಾಣಲಿವೆ ಎನ್ನಲಾಗುತ್ತಿದೆ.
ದೃಷ್ಟಿ ಬೊಟ್ಟು
ದೃಷ್ಟಿ ಬೊಟ್ಟು (Drusti Bottu)ಧಾರಾವಾಹಿಯಲ್ಲಿ ಎಲ್ಲವೂ ಸರಿಯಾಲಿದೆ ಎನ್ನುವಷ್ಟರಲ್ಲಿ ಇದೀಗ ದತ್ತ ಭಾಯ್ ಕಾಣೆಯಾಗಿದ್ದಾರೆ. ದೃಷ್ಟಿ ದತ್ತನಿಗಾಗಿ ಪರಿತಪಿಸುತ್ತಿದ್ದಾರೆ. ದತ್ತ ಭಾಯ್ ಪಾತ್ರಧಾರಿ ವಿಜಯ್ ಸೂರ್ಯ ದಿಢೀರ್ ಆಗಿ ಸೀರಿಯಲ್ ನಿಂದ ಹೊರ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ದೃಷ್ಟಿ ಬೊಟ್ಟು ಧಾರಾವಾಹಿ ಕೂಡ ಮುಕ್ತಾಯವಾಗಲಿದೆ. ದತ್ತಭಾಯ್ ಎಂಟ್ರಿ ಕೊನೆಯ ಎಪಿಸೋಡ್ ಗಳಲ್ಲಿ ಆಗಲಿದೆ ಎನ್ನಲಾಗುತ್ತಿದೆ.
ಯಜಮಾನ
ಯಜಮಾನ ಧಾರಾವಾಹಿ (Yajamana Serial) ಅದ್ಭುತವಾಗಿ ಮೂಡಿ ಬರುತ್ತಿತ್ತು, ಸದ್ಯ ಅನಿತಾ ಮತ್ತು ಝಾನ್ಸಿ ನಡುವೆ ರಾಘವೇಂದ್ರನಿಗಾಗಿ ಪೈಪೋಟಿ ಸ್ಪರ್ಧೆ ನಡೆಯುತ್ತಿದೆ. ಇದರಲ್ಲಿ ವಿಜೇತರಾಗುವವರೇ ಕೊನೆಗೆ ರಾಘು ಕೈ ಹಿಡಿಯಲಿದ್ದಾರೆ. ಸದ್ಯ ಧಾರಾವಾಹಿಗೆ ರಾಮಾಚಾರಿ ಮತ್ತು ಚಾರು ಎಂಟ್ರಿಯಾಗಿದೆ. ಈ ಧಾರಾವಾಹಿ ಸುಖಾಂತ್ಯ ಕಂಡು ಇದೇ ಸೆಪ್ಟೆಂಬರ್ 27ರಂದು ಕೊನೆಯಾಗಲಿದೆ ಎನ್ನುವ ಮಾಹಿತಿ ಇದೆ
ರಾಮಾಚಾರಿ
ರಾಮಾಚಾರಿ ಧಾರಾವಾಹಿ 2022 ರಲ್ಲಿ ಆರಂಭವಾಗಿದೆ. ಈಗಾಗಲೇ ಮೂರು ವರ್ಷಗಳನ್ನು ಪೂರೈಸಿರುವ ರಾಮಾಚಾರಿಯಲ್ಲಿ ಹಲವಾರು ಟ್ವಿಸ್ಟ್, ಟರ್ನ್ ಗಳು ಬಂದು ಇದೀಗ 900 ಕ್ಕೂ ಅಧಿಕ ಎಪಿಸೋಡ್ ಗಳು ಕೂಡ ಪ್ರಸಾರವಾಗಿವೆ. ಈ ಧಾರಾವಾಹಿ 1000 ಸಂಚಿಕೆಗೆ ಮುಕ್ತಾಯವಾಗಲಿದೆ ಎನ್ನಲಾಗಿದೆ. ಆದರೆ ಬಿಗ್ ಬಾಸ್ ಆರಂಭವಾದ ಕೂಡಲೇ ಧಾರಾವಾಹಿ ಮುಕ್ತಾಯವಾಗೋದಿಲ್ಲ, ಇನ್ನೆರಡು ತಿಂಗಳು ಪ್ರಸಾರವಾದ ಬಳಿಕ ಅಂತ್ಯವಾಗಲಿದೆ.