- Home
- Entertainment
- TV Talk
- ಕಾದಿದ್ದು ಸಾಕು, ಕಿಚ್ಚ ಸುದೀಪ್ ಜನ್ಮದಿನಕ್ಕೆ Bigg Boss Kannada 12 ಪ್ರೋಮೋ ಔಟ್; ಹಬ್ಬವೋ ಹಬ್ಬ!
ಕಾದಿದ್ದು ಸಾಕು, ಕಿಚ್ಚ ಸುದೀಪ್ ಜನ್ಮದಿನಕ್ಕೆ Bigg Boss Kannada 12 ಪ್ರೋಮೋ ಔಟ್; ಹಬ್ಬವೋ ಹಬ್ಬ!
ಇಂದು ಕಿಚ್ಚ ಸುದೀಪ್ ಹುಟ್ಟುಹಬ್ಬ. ಈಗಾಗಲೇ ಅಭಿಮಾನಿಗಳ ಜೊತೆ ಅವರು ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ದಿನದಂದು ಕಲರ್ಸ್ ಕನ್ನಡ ವಾಹಿನಿಯು ಅಭಿಮಾನಿಗಳಿಗೆ ಗಿಫ್ಟ್ ನೀಡಲು ರೆಡಿಯಾಗಿದೆ.

ಸೆಪ್ಟೆಂಬರ್ 28ಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಲಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರೋಮೋ ರಿಲೀಸ್ ಆಗೋದು ಬಾಕಿ ಇದೆ. ಅಂದಹಾಗೆ ಬಿಗ್ ಬಾಸ್ ತಂಡವು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರು ಮಾಡಿದೆ ಎಂಬ ಮಾಹಿತಿಯೂ ಇದೆ.
ಈಗ ಕಿಚ್ಚ ಸುದೀಪ್ ಅವರ ಜನ್ಮದಿನಕ್ಕೆ ಕಲರ್ಸ್ ಕನ್ನಡ ವಾಹಿನಿಯು ಬಿಗ್ ಸರ್ಪ್ರೈಸ್ ನೀಡಲು ರೆಡಿಯಾಗಿದೆ. ಇಂದು ಸಂಜೆ ಆ ಸರ್ಪ್ರೈಸ್ ಏನು ಎಂದು ರಿವೀಲ್ ಆಗಲಿದೆ. ಈ ಮೂಲಕ ವೀಕ್ಷಕರ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.
ಈಗಾಗಲೇ ಕಿಚ್ಚ ಸುದೀಪ್ ಇರುವ ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರೋಮೋ ಶೂಟಿಂಗ್ ಆಗಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಈಗ ಇದು ಸತ್ಯ ಎನ್ನುವಂತೆ ವಾಹಿನಿಯು ಸುಳಿವು ನೀಡಿದೆ.
ಕಿಚ್ಚ ಸುದೀಪ್ ಈಗಾಗಲೇ ಬಿಗ್ ಬಾಸ್ ಪ್ರೋಮೋ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈಗ ಇರುವ ಅವರ ಹೇರ್‌ಸ್ಟೈಲ್‌ನಲ್ಲೇ ಪ್ರೋಮೋ ಶೂಟ್ ಆಗಿದೆ. ಪ್ರತಿ ಬಾರಿ ಒಂದೊಂದು ಥೀಮ್ ಇಟ್ಟುಕೊಂಡು ಪ್ರೋಮೋ ರೆಡಿ ಮಾಡಲಾಗುವುದು, ಹೀಗಾಗಿ ಈ ಬಾರಿ ಯಾವ ರೀತಿಯ ಪ್ರೋಮೋ ಬರಲಿದೆ ಎಂಬ ಕುತೂಹಲ ಶುರು ಆಗಿದೆ.
ಸೆಪ್ಟೆಂಬರ್ 28ಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗುವುದು. ಅಂದರೆ 20 ದಿನಗಳು ಬಾಕಿ ಉಳಿದಿವೆ. ಒಟ್ಟಿನಲ್ಲಿ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ಬರ್ತಾರೆ? ಈ ಬಾರಿ ಆಟ ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.