Bigg Boss 19 Show Update: ನಾನು ಸೀರೆಯುಟ್ಟು ಈ ಮಟ್ಟಕ್ಕೆ ಬಂದಿದ್ದೇನೆ, ಆಧ್ಯಾತ್ಮಿಕ ಗುರು ಎಂದು ಹೇಳಿಕೊಳ್ಳುವ ಮಹಿಳೆ ಈಗ ಬಿಗ್ ಬಾಸ್ ಮನೆಯ ಸ್ಪರ್ಧಿ. ಕ್ಯಾಮರಾ ಮುಂದೆ ಬ್ಲೌಸ್ ಬದಲಾಯಿಸೋ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ತನ್ನ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ( Bigg Boss 19 Show ) ಬಿಲ್ಡಪ್ ಕೊಟ್ಟಿಕೊಳ್ತಿರೋ ಮಹಿಳೆ ತಾನ್ಯಾ ಮಿತ್ತಲ್ ಅವರೀಗ ದೊಡ್ಮನೆ ಹೊರಗಡೆ ಭಾರೀ ಟ್ರೋಲ್ ಆಗ್ತಿದ್ದಾರೆ. ಕ್ಯಾಮರಾ ಮುಂದೆ ಬ್ಲೌಸ್ ಧರಿಸೋ ರೀಲ್ಸ್ ಮಾಡಿ, ತಾನು ಆಧ್ಮಾತ್ಮಿಕ ಗುರು ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಳ್ತಿರೋ ತಾನ್ಯಾ ಮಿತ್ತಲ್‌ಗೆ ಬಟ್ಟೆ ಒಗೆಯೋದು ಸಮಸ್ಯೆಯಂತೆ, ಫ್ರಿಡ್ಜ್ ಒಪನ್ ಮಾಡೋದು ಹೇಗೆಂದು ಗೊತ್ತಿಲ್ವಂತೆ.
ಅಸಂಬದ್ಧ ಮಾತುಗಳು!
ತಾನ್ಯಾ ಮಿತ್ತಲ್ ಅವರ ಹಳೆಯ ಇನ್‌ಸ್ಟಾಗ್ರಾಮ್ ರೀಲ್ಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಇನ್ನೊಂದು ಕಡೆ ಎಲ್ಲರೂ ನನ್ನನ್ನು ಮೇಡಂ ಅಂತಲೇ ಕರೆಯಬೇಕು ಎಂದು ಷರತ್ತು ಹಾಕಿರೋ ತಾನ್ಯಾ, ಒಂದಿಷ್ಟು ಹೇಳಿಕೆಗಳನ್ನು ನೀಡಿ ಟ್ರೋಲ್‌ಗಳಿಗೆ ಆಹಾರ ಆಗಿದ್ದಾರೆ. ತನ್ನ ಸೆಕ್ಯುರಿಟಿಗಳು ಮಹಾಕುಂಭದಲ್ಲಿ ಪೊಲೀಸರನ್ನು ಸೇರಿದಂತೆ, ಅನೇಕರ ಜೀವ ಉಳಿಸಿದ್ದಾರೆ ಎಂದು ಹೇಳಿದ್ದರು. ಸಹ ಸ್ಪರ್ಧಿ ಆಶ್ನೂರ್ ಕೌರ್‌ರ ವಯಸ್ಸನ್ನು ಟೀಕಿಸಿದ್ದಾರೆ.
ತುಂಡು ಉಡುಗೆ ವಿಡಿಯೋ ವೈರಲ್
ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ತಾನ್ಯಾ ಈಗ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 19 ಸ್ಪರ್ಧಿ. ದೊಡ್ಮನೆಯಲ್ಲಿ ಅವಕಾಶ ಸಿಗಲಿ, ಸಿಗದೇ ಇರಲಿ ತನ್ನ ಹೋರಾಟದ ಬಗ್ಗೆ ಮಾತನಾಡುತ್ತಿರುತ್ತಾರೆ. ಪುಟ್ಟ ಹಳ್ಳಿಯಿಂದ ಬಂದೆ, ನನ್ನ ಮನೆಯಲ್ಲಿ ಹುಡುಗಿಯರು ಹೊರಗೆ ಹೋಗುವಂತಿರಲಿಲ್ಲ, ನಾನು ಸೀರೆ ಉಟ್ಟು ಈ ಮಟ್ಟಕ್ಕೆ ಬಂದಿದ್ದೇನೆ, ಸಂಸ್ಕೃತಿ ಬಿಡಲಿಲ್ಲ ಎಂದೆಲ್ಲ ಹೇಳಿದ್ದರು. ಈ ಮಧ್ಯೆ ಅವರು ತುಂಡು ಉಡುಗೆ ಧರಿಸಿರುವ ಹಳೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಕ್ಯಾಮೆರಾ ಮುಂದೆ ಬಂದು ಬ್ಲೌಸ್ ಬದಲಾಯಿಸೋದು, ಬ್ಯಾಕ್‌ಲೆಸ್ ಬ್ಲೌಸ್ ಹಾಕೋ ವಿಡಿಯೋಗಳು ಈಗ ವೈರಲ್ ಆಗ್ತಿವೆ.
ಐಷಾರಾಮಿ ಬದುಕು ಬದುಕ್ತಿರೋ ನಟಿ
ಅಂದಹಾಗೆ ತಾನ್ಯಾ ಮಿತ್ತಲ್ ಅವರು ಬಿಗ್ ಬಾಸ್ ಮನೆಗೆ 800 ಸೀರೆ, 50kg ಜ್ಯುವೆಲರಿ ತಂದಿದ್ದಾರೆ. ಐಷಾರಾಮಿ ಬದುಕನ್ನು ಬಿಡಲು ರೆಡಿ ಇಲ್ಲ ಎಂದು ಹೇಳುವ ಅವರು, ದಿನಕ್ಕೆ ನಾನು 3 ಸೀರೆ ಧರಿಸುವೆ ಎಂದಿದ್ದಾರೆ.
ಮೇಡಂ ಅಂತ ಕರೆಯಿರಿ
“ಮನೆಯಲ್ಲಿ ಕೂಡ ನನ್ನನ್ನು ಬಾಸ್ ಅಂತ ಕರೆಯುತ್ತಾರೆ, ಅದೇ ನನಗೆ ಇಷ್ಟವಾಗುತ್ತದೆ. ಸಮಾಜದಲ್ಲಿ ಸುಲಭವಾಗಿ ನಮ್ಮ ಹೆಣ್ಣುಮಕ್ಕಳಿಗೆ ಗೌರವ ಎನ್ನೋದು ಸಿಗೋದಿಲ್ಲ, ಅದನ್ನು ಒತ್ತಡದಿಂದಲಾದರೂ ಸರಿ ಪಡೆಯಬೇಕಾಗುತ್ತದೆ. ವರ್ಷಗಳಿಂದ ನೀವು ಆ ಗೌರವವನ್ನು ಪಡೆಯುತ್ತೀರಿ. ನನಗೆ ವಯಸ್ಸು 50 ವರ್ಷ ಆದಾಗ ಮಾತ್ರ ಆ ಗೌರವ ಪಡೆಯಲು ಇಷ್ಟಪಡಲ್ಲ. ಆ ಗೌರವ ನನಗೆ ಈಗಲೇ ಬೇಕುʼ ಎಂದು ಹೇಳಿದ್ದರು.
ಅಂದಹಾಗೆ ತಾನ್ಯಾ ಮಿತ್ತಲ್ ಅವರು ದೊಡ್ಡಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಬಿಗ್ ಬಾಸ್ ಎನ್ನುವ ವೇದಿಕೆ ಅವರಿಗೆ ನೆಗೆಟಿವಿಟಿ ತಂದುಕೊಡುತ್ತಿರೋದರಲ್ಲಿ ಎರಡು ಮಾತಿಲ್ಲ.
