Salman Khan Bigg Boss Show: ಸ್ಟ್ಯಾಂಡಪ್‌ ಕಾಮಿಡಿ ಮಾಡುವಾಗ ತನ್ನ ಹೆಸರು ಬಳಸಿ ಕಾಮಿಡಿ ಮಾಡಿದವನಿಗೆ ಬಿಗ್‌ ಬಾಸ್‌ ಮನೆಯಲ್ಲಿ ಸಲ್ಮಾನ್‌ ಖಾನ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಮೊದಲ ವೀಕೆಂಡ್‌ನಲ್ಲಿ ಮಹಾಪೂಜೆ ಆಗಿದೆ. 

ಭಾರತದಲ್ಲಿರುವ ಬಿಗ್‌ ಬಾಸ್‌ ಶೋಗಳಲ್ಲಿ ಅತಿ ಹೆಚ್ಚು ಜನರು ಹಿಂದಿ ಭಾಷೆಯ ಶೋವನ್ನು ( Bigg Boss 19 Show) ನೋಡುತ್ತಾರೆ. ಉಳಿದ ನಿರೂಪಕರಿಗೆ ಹೋಲಿಸಿದರೆ ಸಲ್ಮಾನ್‌ ಖಾನ್‌ ಅವರು ಸಾಕಷ್ಟು ಬಾರಿ ಕೂಗಾಡಿದ್ದುಂಟು, ನೇರವಾಗಿ ನಿಂದಿಸಿದ್ದೂ ಇದೆ. ಬಿಗ್‌ ಬಾಸ್‌ ಮನೆಯ ಹೊರಗಡೆ ತನ್ನ ಬಗ್ಗೆ ಕಾಮಿಡಿ ಮಾಡಿದ್ದ ವ್ಯಕ್ತಿಯನ್ನು ಈಗ ಅವರು ದೊಡ್ಮನೆಯೊಳಗಡೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಗ್‌ ಬಾಸ್‌ 19 ಶೋ ಮೊದಲ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ ಅವರು ಸ್ಟ್ಯಾಂಡಪ್‌ ಕಾಮಿಡಿಯನ್‌ ಪ್ರಣೀತ್‌ ಮೋರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಗ್‌ ಬಾಸ್‌ ಮನೆಗೆ 16 ಸ್ಪರ್ಧಿಗಳು ಹೋಗಿದ್ದಾರೆ. ಆಗಸ್ಟ್‌ 24ರಿಂದ ಈ ಶೋ ಪ್ರಸಾರ ಆಗ್ತಿದ್ದು, ಅವರಲ್ಲಿ ತಾನ್ಯಾ ಮಿತ್ತಲ್‌, ಗೌರವ್‌ ಖನ್ನಾ, ಅಮಾಲ್‌ ಮಲಿಕ್‌ ಮುಂತಾದವರಿದ್ದಾರೆ. ದೊಡ್ಮನೆಯೊಳಗಡೆ ತಾನ್ಯಾ ಮಿತ್ತಲ್‌ಗೆ, ಪ್ರಣೀತ್‌ ಮೋರ್‌ ಸಿಕ್ಕಾಪಟ್ಟೆ ಕಾಮಿಡಿ ಮಾಡಿ ನಕ್ಕಿದ್ದಾರೆ. ಈ ವಿಷಯವನ್ನು ಅಡ್ರೆಸ್‌ ಮಾಡಿ, ಸಲ್ಮಾನ್‌ ಖಾನ್‌ ನಿಂದಿಸಿದ್ದಾರೆ.

ತಾನ್ಯಾ ಮಾತ್ರ ನಿಮ್ಮ ಪ್ರಚಂಚ!

“ನಿಮಗೆ ತಾನ್ಯಾ ಈಗ ಒನ್‌ ಮ್ಯಾನ್‌ ಆರ್ಮಿ ಆಗಿದ್ದಾರೆ. ನೀವು ತಾನ್ಯಾಗೆ ಮಾಧ್ಯಮ ಆಗಿದ್ದೀರಿ. ತಾನ್ಯಾ ಸುತ್ತಲೇ ನಿಮ್ಮ ಪ್ರಪಂಚ ಸುತ್ತುತ್ತಿದೆ. ತಾನ್ಯಾ ಬಿಟ್ಟು ಯಾರೂ ನಿಮಗೆ ಗೌರವ ಕೊಡೋದಿಲ್ಲ. ತಾನ್ಯಾ ಬಿಟ್ಟು ಬೇರೆ ಯಾರ ಮುಂದೆಯೂ ನೀವು ಮಾತನಾಡೋದಿಲ್ಲ. ಜೈಶನ್‌, ಗೌರವ್‌, ಅಮಾಲ್‌ ಬಗ್ಗೆ ನೀವು ಜೋಕ್‌ ಮಾಡೋದಿಲ್ಲ. ನಿಮ್ಮನ್ನು ಫ್ರೆಂಡ್‌ ಅಂತ ಭಾವಿಸೋದಿಕ್ಕೆ ನೀವು, ಅವರ ಬಗ್ಗೆ ಜೋಕ್ ಮಾಡಿದ್ರೂ ಕೂಡ ಬೇಸರ ಮಾಡಿಕೊಳ್ಳೋದಿಲ್ಲ” ಎಂದು ಸಲ್ಮಾನ್‌ ಖಾನ್‌ ಹೇಳಿದ್ದಾರೆ.

ನೀವು ಹೇಗೆ ರಿಯಾಕ್ಟ್‌ ಮಾಡ್ತಿದ್ರಿ?

“ಬಿಗ್‌ ಬಾಸ್‌ ಮನೆಯಿಂದಾಚೆ ನೀವು ನನ್ನ ಬಗ್ಗೆ ಮಾಡಿದ ಜೋಕ್‌ ನಾನು ನೋಡಿದ್ದೇನೆ. ಅದನ್ನೆಲ್ಲ ಈಗ ಬಿಡೋಣ. ಆದರೆ ಓರ್ವ ವ್ಯಕ್ತಿ ಸೇಫ್‌ ಜಾಗದಲ್ಲಿದ್ದಾಗ ಮಾತನಾಡೋದು ಸುಲಭ. ಈ ರೀತಿ ನನ್ನ ಬಗ್ಗೆ ಅಥವಾ ಬೇರೆಯವರ ಬಗ್ಗೆ ಮಾತನಾಡಿದ ಜೋಕ್‌ಗಳ ಬಗ್ಗೆ ಆಲೋಚಿಸಿ. ನೀವು ನನ್ನ ಜಾಗದಲ್ಲಿ ಇದ್ದಿದ್ರೆ ಹೇಗೆ ರಿಯಾಕ್ಟ್‌ ಮಾಡ್ತಿದ್ರಿ? ನೀವು ನನ್ನ ಬಗ್ಗೆ ಮಾತನಾಡಿದ್ದೆಲ್ಲವೂ ತಪ್ಪು, ನಿಮಗೆ ಪಂಚ್‌ ಲೈನ್‌ ಬೇಕಿತ್ತು, ನನ್ನ ಹೆಸರು ಬಳಸಿಕೊಂಡ್ರಿ, ಅದು ನಿಮ್ಮ ಕೆಲಸ, ಮಾಡಿದ್ರಿ” ಎಂದು ಹೇಳಿದ್ದಾರೆ.

ನನ್ನಿಂದ ನಿಮಗೆ ಊಟ ಸಿಕ್ಕರೆ ಖುಷಿಯಿದೆ!

“ತಪ್ಪಿರಲಿ, ಸರಿಯಿರಲಿ ನನ್ನ ಹೆಸರು ಹೇಳಿಕೊಂಡು ನಿಮ್ಮ ಊಟ ಆಗುತ್ತದೆ ಎಂದಾದರೆ ಅದಕ್ಕೆ ನಾನು ಖುಷಿಪಡ್ತೀನಿ. ನಿಮ್ಮಂಥವರು ಮಾಡೋದಿಕ್ಕೆ ನಾನು ಬೇಸರ ಮಾಡಿಕೊಳ್ಳೋದಿಲ್ಲ. ಕಪಿಲ್‌ ಶರ್ಮಾ, ಕೃಷ್ಣ ಅಭಿಷೇಕ್‌, ಕಿಉ ಶಾರದಾ ಅಂಥವರು ಅತ್ಯುತ್ತಮವಾಗಿ ಕಾಮಿಡಿ ಮಾಡಿದ್ರೂ ಕೂಡ, ಈ ರೀತಿ ಕಾಮಿಡಿ ಮಾಡೋದಿಲ್ಲ. ನಿಮ್ಮ ಹೆಸರನ್ನು ಮುಂದಕ್ಕೆ ತರಲು ನನ್ನ ಹೆಸರು ಹೇಳಬೇಕು ಅಂತಿದ್ರೆ ದಯವಿಟ್ಟು ಹೇಳಿ. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ನೀವು ಚೆನ್ನಾಗಿ ಆಟ ಆಡಬೇಕು, ಬಿಲೋ ದಿ ಬೆಲ್ಟ್‌ ನೀವು ಹೋಗಬಾರದು. ನೀವು ಆ ರೀತಿ ಮಾಡಿದ್ರೆ, ಉಳಿದವರು ಕೂಡ ಹಾಗೆ ಮಾಡ್ತಾರೆ. ನಾನು ಅರ್ಥ ಮಾಡಿಕೊಂಡಷ್ಟು ಉಳಿದವರು ಅರ್ಥ ಮಾಡಿಕೊಂಡಿಲ್ಲ” ಎಂದು ಸಲ್ಮಾನ್‌ ಖಾನ್‌ ಹೇಳಿದ್ದಾರೆ.