- Home
- Entertainment
- TV Talk
- Brahmagantu: ಚಿರು- ದಿಶಾ ಕ್ಯೂಟ್ ಫೋಟೋಶೂಟ್: ದೀಪಾಗೆ ತೋರಿಸ್ಬೇಡಿ, ಹುಷಾರ್ ಎಂದ ಫ್ಯಾನ್ಸ್
Brahmagantu: ಚಿರು- ದಿಶಾ ಕ್ಯೂಟ್ ಫೋಟೋಶೂಟ್: ದೀಪಾಗೆ ತೋರಿಸ್ಬೇಡಿ, ಹುಷಾರ್ ಎಂದ ಫ್ಯಾನ್ಸ್
'ಬ್ರಹ್ಮಗಂಟು' ಧಾರಾವಾಹಿಯಲ್ಲಿ, ದೀಪಾ ಈಗ ದಿಶಾಳಾಗಿ ತನ್ನ ಅತ್ತೆ ಸೌಂದರ್ಯಳ ಸೊಕ್ಕನ್ನು ಮುರಿಯುತ್ತಿದ್ದಾಳೆ. ಸೌಂದರ್ಯಕ್ಕಿಂತ ಗುಣವೇ ಮೇಲು ಎಂದು ಸಾಬೀತುಪಡಿಸಲು ಹೊರಟಿರುವ ಈ ಸೀರಿಯಲ್‌ನಲ್ಲಿ, ನಾಯಕಿ ದಿಯಾ ಪಾಲಕ್ಕಲ್ ಮತ್ತು ನಾಯಕ ಭುವನ್ ಸತ್ಯ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಚಮಕ್ ಕೊಡ್ತಿರೋ ದೀಪಾ
ಸದ್ಯ ಬ್ರಹ್ಮಗಂಟು (Brahmagantu) ಸೀರಿಯಲ್‌ನಲ್ಲಿ ದೀಪಾ ದಿಶಾ ಆಗಿ ಎಲ್ಲರಿಗೂ ಚಮಕ್ ಕೊಡುತ್ತಿದ್ದಾಳೆ. ಹೆಜ್ಜೆ ಹೆಜ್ಜೆಗೂ ಸೌಂದರ್ಯಗಳಿಗೆ ಅವಮಾನ ಮಾಡುತ್ತಾ, ಆಕೆಯ ಸೊಕ್ಕನ್ನು ಅಡಗಿಸುತ್ತಿದ್ದಾಳೆ. ದಿಶಾಳ ಜೊತೆ ಒಂದೇ ಒಂದು ಮಾತನಾಡಲು ಸೌಂದರ್ಯ ಕಾದು ಕುಳಿತುಕೊಳ್ಳುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾಳೆ ದೀಪಾ.
ಸೌಂದರ್ಯ ಸೊಕ್ಕಡಗಿಸ್ತಿರೋ ದೀಪಾ
ಇದೀಗ ಕಾಡಿ ಬೇಡಿದ ಮೇಲೆ ಚಿರು ಕಂಪೆನಿಯಲ್ಲಿ ಕೆಲಸ ಮಾಡಲು ದಿಶಾ ಒಪ್ಪಿಕೊಂಡಿದ್ದಾಳೆ. ಮೊದಲ ಬಾರಿಗೆ ಸೌಂದರ್ಯ ಕ್ಯಾಬಿನ್‌ಗೆ ಬಂದಿದ್ದಾಳೆ. ಈ ಸಮಯದಲ್ಲಿಯೂ ಸೌಂದರ್ಯಳ ಸೊಕ್ಕನ್ನು ಎಷ್ಟು ಮುರಿಯಬೇಕೋ ಅಷ್ಟನ್ನು ಮುರಿಯುತ್ತಿದ್ದಾಳೆ. ದಿಶಾಳಿಗಾಗಿ ವಿಶೇಷ ಟೀ ರೆಡಿ ಮಾಡಿಸಿರುವುದಾಗಿ ಸೌಂದರ್ಯ ಹೇಳಿದಾಗ, ನನಗೆ ಕೆಲಸ ಮುಖ್ಯ ಇವೆಲ್ಲಾ ಬೇಡ ಎಂದು ತಿರುಗೇಟು ಕೊಟ್ಟಿದ್ದಾಳೆ. ಹೀಗೆ ಹಂತ ಹಂತಕ್ಕೂ ಅವರ ಮುಖಕ್ಕೆ ಮಂಗಳಾರತಿ ಮಾಡ್ತಿದ್ದಾಳೆ ದೀಪಾ.
ಸೌಂದರ್ಯ v/s ಗುಣ
ಸೌಂದರ್ಯಕ್ಕಿಂತ ಗುಣನೇ ಮೇಲು ಎಂದು ಹೇಳಹೊರಟಿರುವ ಈ ಸೀರಿಯಲ್‌ನಲ್ಲಿ ಗೆಲ್ಲುವುದು ಯಾವುದು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇಲ್ಲಿ ಸೋಡಾ ಗ್ಲಾಸ್, ಎಣ್ಣೆ ಕೂದಲು, ಹಲ್ಲಿಗೆ ಕ್ಲಿಪ್, ಜಡೆಗೆ ರಿಬ್ಬನ್, ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡಿರೋ ದೀಪಾಳೆ ಇದಕ್ಕೆ ನಾಯಕಿ. ಯಾವುದೋ ಒಂದು ಸನ್ನಿವೇಶದಲ್ಲಿ ಸುರಸುಂದರಾಂಗ ಚಿರುನ್ನ ಮದ್ವೆಯಾಗ್ತಾಳೆ. ಅಲ್ಲಿಂದ ಇಲ್ಲಿಯವರೆಗೂ ಅವಳು ಎದುರಿಸಿದ್ದು ಬಾಡಿ ಶೇಮಿಂಗೇ. ಆದರೆ ಸೌಂದರ್ಯ ಮುಖ್ಯವಲ್ಲ, ಗುಣ ಮುಖ್ಯ ಎಂದು ಸಾಧಿಸಲು ಹೊರಟಿದ್ದಾಳೆ ದೀಪಾ. ಆದರೆ ಸೌಂದರ್ಯ ಮುಖ್ಯ ಎನ್ನೋದು ವಿಲನ್ ಅತ್ತಿಗೆ ಸೌಂದರ್ಯಳ ಮಾತು. ಸದ್ಯ ಇದು ಸೌಂದರ್ಯ v/s ಗುಣ ಎಂದಾಗಿದೆ.
ನಟ-ನಟಿಯರ ಕುರಿತು
ಅಂದಹಾಗೆ ದಿಶಾ ಮತ್ತು ದೀಪಾ ಪಾತ್ರಧಾರಿಯ ಹೆಸರು ದಿಯಾ ಪಾಲಕ್ಕಲ್ (Diya Palakkal) ಮತ್ತು ಚಿರು ಪಾತ್ರಧಾರಿಯ ಹೆಸರು ಭುವನ್ ಸತ್ಯ (Bhuvan Satya). ಇವರಿಬ್ಬರೂ ಈಗ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ದೀಪಾನೇ ದಿಶಾ ಆಗಿದ್ದರೂ, ಪತಿ ದಿಶಾಳನ್ನು ಹೊಗಳುವಾಗೆಲ್ಲಾ ದೀಪಾಳಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ಇದಕ್ಕೆ ಕಾರಣ ಎಲ್ಲಿ ತನ್ನ ಗಂಡ ಗುಣಕ್ಕಿಂತ ರೂಪನೇ ಮೇಲು ಎಂದುಬಿಡುತ್ತಾನೋ ಎನ್ನುವ ಭಯ.
ದೀಪಾಳಿಗೆ ಫೋಟೋ ತೋರಿಸ್ಬೇಡಿ
ಅದೇ ಇನ್ನೊಂದೆಡೆ ಪತ್ನಿಯ ಹೊಟ್ಟೆ ಉರಿಸುವುದಕ್ಕಾಗಿಯೇ ಚಿರು ಕೂಡ ದೀಪಾಳ ಮುಂದೆ ದಿಶಾಳನ್ನು ಸುಮ್ಸುಮ್ನೆ ಹೊಗಳುತ್ತಿರುತ್ತಾನೆ. ಇಂಥ ಸಮಯದಲ್ಲಿ ಗಂಡ-ಹೆಂಡತಿ ಕೋಳಿ ಜಗಳ ನೋಡುವುದು ಎಂದರೆ ವೀಕ್ಷಕರಿಗೆ ಎಲ್ಲಿಲ್ಲದ ಖುಷಿ. ಇದೇ ಕಾರಣಕ್ಕೆ ಈ ಫೋಟೋಶೂಟ್ ನೋಡಿ, ನಿಮ್ ಹೆಂಡ್ತಿ ದೀಪಾಳಿಗೆ ಮತ್ತೆ ಫೋಟೋ ತೋರಿಸ್ಬೇಡಿ ಎನ್ನುತ್ತಿದ್ದಾರೆ ಅಭಿಮಾನಿಗಳು
ದಿಯಾ ಕುರಿತು
ಇನ್ನು ದಿಯಾ ಕುರಿತು ಹೇಳುವುದಾದರೆ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್‌ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.
ಕನ್ನಡದಲ್ಲಿ ಇದೇ ಮೊದಲು
ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.
ಚಿರು ಕುರಿತು
ಚಿರು ಪಾತ್ರಧಾರಿ ಭುವನ್ ಸತ್ಯ (Bhuvan Satya) ಕುರಿತು ಹೇಳುವುದಾದರೆ, ಅವರಿಗೆ 'ಬ್ರಹ್ಮಗಂಟು' ಎರಡನೇ ಧಾರಾವಾಹಿ. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.
ಕೈಕೊಟ್ಟಿದ್ದ ಪುಣ್ಯವತಿ!
ಪುಣ್ಯವತಿ' ಧಾರಾವಾಹಿಯು ಶುರುವಾದ ಒಂದೇ ವರ್ಷಕ್ಕೆ ತನ್ನ ಪ್ರಸಾರ ನಿಲ್ಲಿಸಿತ್ತು. ಟಿಆರ್‌ಪಿ ಕಡಿಮೆ ಇದ್ದ ಕಾರಣದಿಂದಲೋ ಏನೋ, ಸುಖಾಂತ್ಯ ಕಾಣುವ ಮೂಲಕ 'ಪುಣ್ಯವತಿ' ಧಾರಾವಾಹಿ ಕೊನೆಗೊಂಡಿತ್ತು. ಅವರ ನಟನೆಗೆ ಫ್ಯಾನ್ಸ್ ಸಂಖ್ಯೆ ಹೆಚ್ಚುತ್ತಲೇ ಸಾಗಿತ್ತು. 'ಪುಣ್ಯವತಿ' ಧಾರಾವಾಹಿ ಮುಗಿದು ವರ್ಷ ಕಳೆಯುವಷ್ಟರಲ್ಲಿ ಚಿರಾಗ್ ಆಗಿ ಬ್ರಹ್ಮಗಂಟುವಿನಲ್ಲಿ ಕಾಣಿಸಿಕೊಂಡಿದ್ದಾರೆ.