BBK 12: ರಕ್ಷಿತಾಗೆ ಗಿಲ್ಲಿ ಮೇಲೆ ಲವ್ ಆಗಿದ್ಯಾ? ಹೌದು ಅಂತಿದ್ದಾರೆ ಫ್ಯಾನ್ಸ್!
BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಜಗಳ, ಕಾಮಿಡಿ, ಕಾಂಪೀಟೀಶನ್, ಮನರಂಜನೆ ನೀಡುವುದರ ಜೊತೆಗೆ ಭರ್ಜರಿಯಾಗಿ ಪ್ರಸಾರವಾಗುತ್ತಿದ್ದು, ಈ ನಡುವೆ ಟ್ರೋಲ್ ಪೇಜಸ್ ಗಳಲ್ಲಿ ಗಿಲ್ಲಿ-ಕಾವ್ಯಾ ಜೋಡಿಯನ್ನು ಬಿಟ್ಟು, ಗಿಲ್ಲಿ-ರಕ್ಷಿತಾ ಜೋಡಿ ಮಾಡೋದಕ್ಕೆ ಹೊರಟಿದ್ದಾರೆ ಜನ.

ಬಿಗ್ ಬಾಸ್ ಕನ್ನಡ
ಬಿಗ್ ಬಾಸ್ ಕನ್ನಡ 12ನೇ ಸೀಸನ್ ಭರ್ಜರಿಯಾಗಿ ಸಾಗುತ್ತಿದೆ. ನಾಲ್ಕು ವಾರಗಳಲ್ಲಿ ವೀಕ್ಷಕರಿಗೆ ಭರಪೂರ ಮನರಂಜನೆ ಸಿಕ್ಕಿದೆ. ಅದರಲ್ಲೂ ರಕ್ಷಿತಾ, ಗಿಲ್ಲಿ ಮಾತುಗಳು ಬಿಗ್ ಬಾಸ್ ಮನೆಯ ಹೈಲೈಟ್ ಗಳಲ್ಲಿ ಒಂದಾಗಿದೆ. ಆದರೆ ಈಗ ರಕ್ಷಿತಾಗೆ ಲವ್ ಆಗಿದೆ ಎನ್ನುತ್ತಿದ್ದಾರೆ ಜನರು.
ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಎಲ್ಲರೂ ಇವಳು ಯಾಕೆ ಬಂದಳು ಅಂತಾನೆ ಕೇಳುತ್ತಿದರು. ಆದರೆ ಆಕೆಯ ಮಾತು, ಕಪಟ ಇಲ್ಲದ ನಡೆ ನೋಡಿ ರಕ್ಷಿತಾಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಆದರೆ ಈಗ ಸೋಶಿಯಲ್ ಮೀಡಿಯಾ ಟ್ರೋಲ್ ಪೇಜ್ ಗಳು ರಕ್ಷಿತಾಗೆ ಲವ್ ಆಗಿದೆ ಎನ್ನುತ್ತಿವೆ.
ಗಿಲ್ಲಿ-ಕಾವ್ಯಾ ಜೋಡಿ
ಈ ಮೊದಲು ಅಂದ್ರೆ ಜಂಟಿಯಾಗಿರುವಾಗ ಮಾತ್ರವಲ್ಲ , ಈವಾಗಲೂ ಕೂಡ ಜನರು ಗಿಲ್ಲಿ ಮತ್ತು ಕಾವ್ಯಾ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಗಿಲ್ಲಿಗೆ ಕಾವ್ಯ ಅಂದ್ರೆ ಇಷ್ಟ ಅನ್ನೋ ಸುದ್ದಿಯೂ ಕೇಳಿ ಬರುತ್ತಿತ್ತು. ಆದರೆ ಇದೀಗ ರಕ್ಷಿತಾಗೆ ಗಿಲ್ಲಿಗೆ ಮೇಲೆ ಲವ್ ಆಗಿದೆ ಎನ್ನುತ್ತಿದ್ದಾರೆ ಜನ.
ನಿಜವಾಗ್ಲೂ ಗಿಲ್ಲಿ ಮೇಲೆ ರಕ್ಷಿತಾಗೆ ಲವ್ ಆಗಿದ್ಯಾ?
ಕಳೆದ ವಾರ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಯಾರು ಲೀಡಲ್ಲಿ ಇದ್ದಾರೆ ಅನ್ಸುತ್ತೆ ಎಂದಾಗ ಗಿಲ್ಲಿ ರಕ್ಷಿತಾ ಹೆಸರು ಹೇಳಿದ್ದು, ಕೇಳಿ ರಕ್ಷಿತಾ ಮುಖದಲ್ಲಿ ಮೂಡಿದ ನಗುವನ್ನು ನೋಡಿನೆ ಜನ ರಕ್ಷಿತಾಗೆ ಲವ್ ಆಗಿದೆ ಎನ್ನುತ್ತಿದ್ದಾರೆ. ಅಲ್ಲದೇ ಹಲವಾರು ಸಂದರ್ಭಗಳಲ್ಲಿ ರಕ್ಷಿತಾ ಗಿಲ್ಲಿಗೆ ತುಂಬಾನೆ ಕೇರ್ ಮಾಡೋದು ಕೂಡ ಕಾಣಿಸ್ತಿದೆ.
ತ್ರಿಕೋನ ಪ್ರೇಮಸರಣಿ
ಈಗ ನಡೆಯುತ್ತಿರುವ ಕಾಲೇಜು ಟಾಸ್ಕ್ ನಲ್ಲೂ ಅಷ್ಟೇ, ರಕ್ಷಿತಾ ಬಂದು ಗಿಲ್ಲಿಗೆ ಕಾವ್ಯನ ಮೇಲೆ ಲವ್, ಆದ್ರೆ ನಂಗೆ ಗಿಲ್ಲಿ ಮೇಲೆ ಲವ್ ಆಗಿರೋ ಥರ ಡ್ರಾಮಾ ಮಾಡುವ ಎನ್ನುವುದಾಗಿಯೂ ಹೇಳಿದ್ದು. ಇದನ್ನೆಲ್ಲಾ ನೋಡಿ ರಕ್ಷಿತಾಗೆ ಲವ್ ಆಗಿರೋದು ಖಚಿತಾ ಎನ್ನುತ್ತಿದ್ದಾರೆ. ನಿಮಗೂ ಹಾಗೇ ಅನಿಸ್ತಿದೆಯೆ?
ಅಣ್ಣ -ತಂಗಿ ಸಂಬಂಧ
ಮತ್ತೊಂದಿಷ್ಟು ಜನ ಇವರನ್ನು ನೋಡಿ ಇಲ್ಲ ಇವರಿಬ್ಬರದು ಅಣ್ಣ ತಂಗಿ ಸಂಬಂಧ ಇಬ್ಬರ ಸಂಬಂಧದ ಮೇಲೆ ಕಪ್ಪು ಚುಕ್ಕೆ ಇಡಬೇಡಿ ಎನ್ನುತ್ತಿದ್ದಾರೆ. ಎಲ್ಲವೂ ನೋಡುಗರ ದೃಷ್ಟಿಯಲ್ಲೇ ಇದೆ. ರಕ್ಷಿತಾಗೆ ಗಿಲ್ಲಿ ಮೇಲೆ ಒಳ್ಳೆಯ ಭಾವನೆ ಇದೆ ಅನ್ನೋದು ನಿಜಾ.