- Home
- Entertainment
- TV Talk
- BBK 12: ಬಾಕಿ ಟೈಮ್‌ನಲ್ಲಿ ಜಗಳ ಆಡೋದು, ಕಿಚ್ಚ ಸುದೀಪ್ ಮುಂದೆ ಸೈಲೆಂಟ್ ಆಗೋದು; ರಕ್ಷಿತಾ ಶೆಟ್ಟಿ ಏನಂದ್ರು?
BBK 12: ಬಾಕಿ ಟೈಮ್‌ನಲ್ಲಿ ಜಗಳ ಆಡೋದು, ಕಿಚ್ಚ ಸುದೀಪ್ ಮುಂದೆ ಸೈಲೆಂಟ್ ಆಗೋದು; ರಕ್ಷಿತಾ ಶೆಟ್ಟಿ ಏನಂದ್ರು?
Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಕೆಲವು ಕಡೆ ದನಿ ಏರಿಸಿ, ತಮ್ಮ ಅರ್ಹತೆ ಏನು? ತಮ್ಮ ಐಡೆಂಟಿಟಿ ಏನು? ತಮ್ಮ ವ್ಯಕ್ತಿತ್ವ ಏನು ಎಂದು ತೋರಿಸಿಕೊಡುವ ಪ್ರಯತ್ನ ಮಾಡಿದ್ದರು. ಈಗ ಮೊದಲ ವಾರದ ಫಿನಾಲೆಯೊಳಗಡೆ ನಡೆದ ಸುದ್ದಿಗೋಷ್ಠಿಯಲ್ಲಿ ಏನು ಹೇಳಿದರು?

ರಕ್ಷಿತಾ ಶೆಟ್ಟಿಗೆ ಅಶ್ವಿನಿ ಗೌಡ ಪ್ರಶ್ನೆ
ಬಿಗ್ ಬಾಸ್ ಮನೆ ಅಂದ್ರೆ ಏನು?
ಇಲ್ಲಿ ಟಾಸ್ಕ್ ಆಡೋದು ಗೇಮ್ ಅಲ್ಲ. ಇಲ್ಲಿ ಸಂಬಂಧಗಳು ಇರುತ್ತವೆ. ಇಲ್ಲಿ ದಯೆ, ಕರುಣೆ, ಸ್ವಲ್ಪ ಸ್ವಾರ್ಥ ಇರುತ್ತದೆ.
ಇಲ್ಲಿ ಬರೋ ಬದಲು ಜ್ಯೂನಲ್ಲಿ ಇರಬಹುದಿತ್ತು. ಅಲ್ಲಿ ಎಲ್ಲವೂ ಸಿಗ್ತಿತ್ತು
ನಾನು ಅಲ್ಲಿಯೂ ಹೀಗೆ ಇರುತ್ತಿದ್ದೆ.
ಎಲ್ಲ ಟೈಮ್‌ನಲ್ಲಿ ರಕ್ಷಿತಾ ಮಾತನಾಡಲ್ಲ
ಸುಲಭವಾಗಿ ಜಗಳ ಆಡ್ತೀರಾ? ಯಾರೋ ಬಂದಾಗ, ಬಿಗ್ ಬಾಸ್ ಮುಂದೆ, ಕಿಚ್ಚ ಸುದೀಪ್ ಮುಂದೆ ಮಾತನಾಡಲ್ಲ ಯಾಕೆ. ಓವರ್ ಎಕ್ಸ್‌ಪ್ರೆಸ್ ಮಾಡ್ತೀರಾ, ಇಲ್ಲವೇ ಸೈಲೆಂಟ್ ಆಗ್ತೀರಾ.
ಇದು ನನ್ನ ಪರ್ಸನಾಲಿಟಿ. ಒನ್ & ಆಫ್ ಆಗ್ತೀನಿ.
ಕರುಣೆ, ದಯೆ, ಡಿಸ್ಟರ್ಬ್ ಮಾಡಬಾರದು ಎನ್ನೋದು ನಿಮಗೆ ಗೊತ್ತಾ? ಬರತ್ತಾ?
ಬರತ್ತೆ
ನೀವು ಎಲ್ಲರ ಜೊತೆ ಯಾಕೆ ಮಾತನಾಡ್ತಿಲ್ಲ
ನಾನು ಒಂದೇ ಮಾತನಾಡೋಕೆ ಆಗೋದಿಲ್ಲ. ಬೇರೆಯವರು ಕೂಡ ನನ್ನ ಜೊತೆ ಮಾತನಾಡೋಕೆ ಬರಬೇಕು. ರಿಯಲ್ ಆಗಿ ಒಳ್ಳೆಯವರು ಅಂತ ಅನಿಸಿಲ್ಲ ಅಂದ್ರೆ ನಾನು ಅವರಿಂದ ದೂರ ಆಗ್ತೀನಿ
ಬಾತ್‌ರೂಮ್‌ನಲ್ಲಿ ಹೆಚ್ಚಿನ ಸಮಯ ಕಳೆದ್ರು
ನೀವು ಸ್ಪರ್ಧಿಗಳ ಜೊತೆ ಮಾತನಾಡೋ ಬದಲು ಬಾತ್‌ರೂಮ್‌ನಲ್ಲಿ ಸಮಯ ಕಳೆಯುತ್ತೀರಾ
ಹೌದು, ನಾನು ಕಾಲೇಜು ಟೈಮ್‌ನಿಂದ ವ್ಲಾಗಿಂಗ್‌ನಲ್ಲಿ ಸಮಯ ಕಳೆಯುತ್ತೇನೆ. ನಾನು ಮನುಷ್ಯರ ಜೊತೆ ಜಾಸ್ತಿ ಸಮಯ ಕಳೆಯಲಿಲ್ಲ. ಮನುಷ್ಯರು ಒಳಗಡೆ, ಹೊರಗಡೆ ಒಂದೇ ಥರ ಇರ್ತಾರೆ ಅಂತ ಹೇಳೋಕೆ ಆಗೋದಿಲ್ಲ. ಇಲ್ಲಿ ದೊಡ್ಡ ಕ್ಯಾಮರಾ ಇದೆ, ಹೀಗಾಗಿ ಮಾತಾಡೋಕೆ ಇಷ್ಟ.
ಕೇಕ್ ಮಾತ್ರ ತಿಂದಿದ್ದು ಯಾಕೆ?
ಟಾಸ್ಕ್‌ನಲ್ಲಿ ನೀವು ಭಾಗವಹಿಸಲಿಲ್ಲ
ನನಗೆ ನಿಮ್ಮನ್ನು ಕನ್ವಿನ್ಸ್ ಮಾಡೋಕೆ ಇಷ್ಟ ಇರಲಿಲ್ಲ. ಬಿಗ್ ಬಾಸ್ ಹೇಳಿದ್ರು ಅಂತ ಆ ಚಟುವಟಿಕೆಯಲ್ಲಿ ನೀಡಿದ ಕೇಕ್ ತಿಂದೆ
ನಿಮಗೆ ಬೇರೆಯದು ಅರ್ಥ ಆಗತ್ತೆ, ಇದೆಲ್ಲ ಯಾಕೆ ಅರ್ಥ ಆಗಲ್ಲ, ನೀವು ಮುಗ್ಧೆ ಥರ ತೋರಿಸೋದು ಯಾಕೆ?
ನನ್ನ ಮುಖವೇ ಮುಗ್ಧತೆಯಿಂದ ಕೂಡಿದೆ
ಫೇರ್ ಗೇಮ್ ಆಡ್ತಿರೋದಿಕ್ಕೆ ಇಲ್ಲಿ ಇರ್ತೀನಿ
ಜಾಹ್ನವಿ ನಿಮ್ಮನ್ನು ನಾಮಿನೇಟ್ ಮಾಡಿದಾಗ ಹೇಗೆ ಪರ್ಸನಲ್ ಆಗತ್ತೆ?
ಪಾತ್ರೆ ತೊಳೆಯಲಿಲ್ಲ ಅಂತ ಕಾರಣ ಹೇಳಿದರು, ಪಾತ್ರೆ ತೊಳೆದಿಲ್ಲ ಅಂತ ಅವರಿಗೆ ಯಾರು ಹೇಳಿದರು?
ಬಿಗ್ ಬಾಸ್ ಮನೆಯಲ್ಲಿ ನಿಮಗೆ ಇರಲು ಅರ್ಹತೆಗಳು ಏನು?
ಕ್ಯಾಮರಾ ಮುಂದೆ ಮಾತನಾಡೋಕೆ ನನಗೆ ಅರ್ಹತೆ ಇದೆ. ನಾನು ಒಳ್ಳೆಯ ರೀತಿಯಲ್ಲಿ ಆಟ ಆಡ್ತೀನಿ, ನಿಮಗೆ ಮನರಂಜನೆ ಕೊಡಲು ಇಷ್ಟ ಇರಲಿಲ್ಲ, ಹೀಗಾಗಿ ನಾನು ಆಟ ಆಡಲಿಲ್ಲ