BBK 12: ಸಿಕ್ಕಾಪಟ್ಟೆ ಫೈಟ್ ಕೊಟ್ರೂ ಕೂಡ ಈ ವಾರ ಮನೆಯಿಂದ ಹೊರಗಡೆ ಹೋಗೋರು ಯಾರು?
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ಈ ವಾರ ಯಾರು ಔಟ್ ಆಗಬಹುದು ಎಂದು ಸ್ಪರ್ಧಿಗಳು ತಲೆ ಬಿಸಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಉಳಿದುಕೊಳ್ಳಲು ಅವರು ಭರ್ಜರಿ ಫೈಟ್ ಕೂಡ ಮಾಡುತ್ತಿದ್ದಾರೆ. ಆದರೆ ಅವರಿಗೆ ಅಸಲಿ ವಿಷಯವೇ ಗೊತ್ತಿಲ್ಲ.

ದೊಡ್ಡ ಗಿಫ್ಟ್
ಈ ವಾರ ದೀಪಾವಳಿ ಹಬ್ಬ ಇತ್ತು, ಅವರಿಗೆ ಬಿಗ್ ಬಾಸ್ ವಿಶೇಷವಾದ ಗಿಫ್ಟ್ ಕೊಟ್ಟಿರೋದು ಗೊತ್ತೇ ಆಗಿಲ್ಲ. ಇದು ನಿಜಕ್ಕೂ ಅವರೆಲ್ಲರಿಗೂ ದೊಡ್ಡ ಗಿಫ್ಟ್ ಎನ್ನಬಹುದು. ಹಾಗಾದರೆ ಏನದು? ನಿಮಗೂ ಕೂಡ ಸಂದೇಹ ಬಂದಿರಬಹುದು.
ಮನೆಯಲ್ಲಿದ್ದವರಿಗೆ ಚಿಂತೆ
ಹೌದು, ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಅಂದಹಾಗೆ ನಾಮಿನೇಶನ್ ಆಗ್ತೀವಿ ಎಂದು ಸ್ಪರ್ಧಿಗಳು ಸಿಕ್ಕಾಪಟ್ಟೆ ಫೈಟ್ ಮಾಡಿದ್ದರು, ಕಷ್ಟಪಟ್ಟು ಟಾಸ್ಕ್ ಕೂಡ ಆಡಿದ್ದರು. ನಾವು ಈ ವಾರ ಮನೆಯಿಂದ ಹೊರಹೋಗ್ತೀವಾ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಈ ವಾರ ಎಲಿಮಿನೇಶನ್ ಇಲ್ಲ
ನಾಮಿನೇಶನ್ ಟಾಸ್ಕ್ ಆಡಿದ ಬಳಿಕ, ನಾಮಿನೇಟ್ ಆಗಿದ್ದೀವಿ ಎಂದು ಸ್ಪರ್ಧಿಗಳು ಟೆನ್ಶನ್ ಅಲ್ಲಿದ್ದಾರೆ. ಆದರೆ ಈ ವಾರ ಎಲಿಮಿನೇಶನ್ ಇರೋದಿಲ್ಲ ಎಂದು ಅವರಿಗೆ ಗೊತ್ತೇ ಇಲ್ಲ. ವೋಟಿಂಗ್ ಲೈನ್ಸ್ ಒಪನ್ ಆಗಿಲ್ಲ.
ಮುಂದಿನ ವಾರ ಎಲಿಮಿನೇಶನ್?
ಮಿಡ್ ವೀಕ್ ಎಲಿಮಿನೇಶನ್ ನಡೆಯಲಿದೆಯಾ ಅಥವಾ ಮುಂದಿನ ವಾರಕ್ಕೆ ಎಲಿಮಿನೇಶನ್ ಕಂಟಿನ್ಯೂ ಆಗತ್ತಾ ಎಂದು ಕಾದು ನೋಡಬೇಕಿದೆ. ಅಂದಹಾಗೆ ಈ ವಾರವಂತೂ ಸ್ಪರ್ಧಿಗಳು ಬಚಾವ್ ಆದರೂ ಎನ್ನಬಹುದು.
ಸ್ಪರ್ಧಿಗಳು ಯಾರಿದ್ದಾರೆ?
ಸ್ಪಂದನಾ ಸೋಮಣ್ಣ, ಮಾಳು ನಿಪನಾಳ, ಧನುಷ್ ಗೌಡ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್, ಗಿಲ್ಲಿ ನಟ, ಕಾವ್ಯ ಶೈವ, ಜಾಹ್ನವಿ, ರಘು ಮ್ಯೂಟೆಂಟ್, ಸೂರಜ್, ರಾಶಿಕಾ ಶೆಟ್ಟಿ, ರಿಷಾ ಗೌಡ, ಮಲ್ಲಮ್ಮ, ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮುಂದಿನ ವಾರ ಯಾರು ಹೊರಗಡೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.