Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚ ಸುದೀಪ್ ಅವರು ಬಂದು ಹೋದ್ಮೇಲೆ ಜಗಳ ಆಗತ್ತೆ, ಈ ರೀತಿ ಯಾಕೆ ಮಾತಾಡ್ತೀರಿ? ಎಂದು ಮಲ್ಲಮ್ಮ ಅವರು ಕಿಚ್ಚ ಸುದೀಪ್ ಮುಂದೆಯೇ ಸಿಡಿದೆದ್ದಿದ್ದಾರೆ. ಹಾಗಾದರೆ ಅಸಲಿಗೆ ನಡೆದಿದ್ದೇನು?
ನನಗೆ ಬಿಗ್ ಬಾಸ್ ಆಟ ಗೊತ್ತಿಲ್ಲ, ಕಿಚ್ಚ ಸುದೀಪ್ ಅವರೇ ಹೇಳಿಕೊಡಬೇಕು, ಅಲ್ಲಿ ಹೋಗಿ ಊಟ ಮಾಡಬೇಕು, ಜಗಳ ಆಡಬೇಕು ಎಂದು ಮುಗ್ಧತೆಯಿಂದ ಹೇಳಿದ್ದ ಮಲ್ಲಮ್ಮ ಆಮೇಲೆ, “ನಾನು ಯಾರ ತಂಟೆಗೂ ಹೋಗಲ್ಲ, ನನ್ನ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ” ಎಂದು ಹೇಳಿದ್ದರು. ಈಗ ಕಿಚ್ಚ ಸುದೀಪ್ ಪರವಾಗಿ ಅವರು ಬ್ಯಾಟ್ ಬೀಸಿದ್ದಾರೆ. ಮಲ್ಲಮ್ಮ ಮಾತು ಕೇಳಿ ಕಿಚ್ಚ ಸುದೀಪ್ ದಿಗ್ಭ್ರಮೆಗೊಂಡಿದ್ದಾರೆ.
ನಿಜಕ್ಕೂ ನಡೆದಿದ್ದೇನು?
ವೀಕೆಂಡ್ ಎಪಿಸೋಡ್ ಬಳಿಕ ಜಗಳ ಶುರುವಾಗುತ್ತದೆ. ಇದನ್ನೇ ಕೆಲ ಸ್ಪರ್ಧಿಗಳು ಮನೆಯೊಳಗಡೆ ಮಾತನಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್‌ರಿಂದ ಜಗಳ ಶುರುವಾಗುತ್ತದೆ ಎಂದು ಮಲ್ಲಮ್ಮ ಅವರು ಅರ್ಥಮಾಡಿಕೊಂಡಿದ್ದಾರೆ. ಇದನ್ನೇ ಅವರು ಕಿಚ್ಚ ಸುದೀಪ್ ಮುಂದೆ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮಲ್ಲಮ್ಮಗೆ ಡೌಟ್
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಬಳಿ ಎಲಿಮಿನೇಶನ್, ಇಮ್ಯುನಿಟಿ ಎಂದೆಲ್ಲ ಮಾತನಾಡಿದ್ದರು. ಅದಾದ ನಂತರ ಕಿಚ್ಚ ಸುದೀಪ್ ಅವರು, ಇವರ್ಯಾರೋ ಶನಿವಾರ ಬರ್ತಾರೆ, ಮಾತಾಡ್ತಾರೆ, ಬಾಕಿಯವರು ಎದ್ದು ನಿಲ್ತಾರೆ, ಆಮೇಲೆ ಮನೆಗೆ ಹೋಗ್ತಾರೆ ಅಂತ ನಿಮಗೆ ಅನಿಸ್ತಿದ್ಯಾ? ಎಂದು ಕೇಳಿದ್ದಾರೆ. ಆಗ ಮಲ್ಲಮ್ಮ ಅವರು “ನನಗೆ ಒಂದು ಡೌಟ್ ಶುರುವಾಗಿದೆ” ಎಂದಿದ್ದಾರೆ.
ಆಗ ಮಲ್ಲಮ್ಮ ಅವರು “ನೀವು ಬಂದ್ಮೇಲೆ ಜಗಳ ಶುರುವಾಗತ್ತೆ ಅಂತಾರೆ, ಯಾಕೆ?” ಎಂದು ಕೇಳಿದ್ದಾರೆ.
ಕಿಚ್ಚ ಸುದೀಪ್: ಏನು ಮಾಡೋಣ? ನನ್ನ ಸ್ವಭಾವವೇ ಹಾಗೆ. ನಾವು ಬಂದು ಹೋದ್ಮೇಲೆ ಜನರು ನಮಗೋಸ್ಕರ ಜಗಳ ಆಡ್ತಾರೆ. ನೀವು ತುಂಬ ಚೆನ್ನಾಗಿ ಹೇಳಿದ್ರಿ. ನಾನು ಬಂದು ಹೋದ್ಮೇಲೆ ಯಾಕೆ ಜಗಳ ಆಗತ್ತೆ ಅಂತ ನೀವು ಎಲ್ಲರಿಗೂ ಕೇಳಿ
ಮಲ್ಲಮ್ಮ: ನೀವು ಯಾಕೆ ಅವರು ಬಂದು ಹೋದ್ಮೇಲೆ ಜಗಳ ಆಡ್ತೀರಿ? ನೀವು ಇದೀರಾ ಅಂತ ಯಾರೂ ಮಾತನಾಡಲ್ಲ ನೋಡ್ರಿ.. ನನ್ನ ಮಾತು ಯಾರಾದರೂ ಕೇಳ್ತಾರಾ?
ಕಿಚ್ಚ ಸುದೀಪ್: ನನ್ನ ಮುಂದೆ ಕೇಳಿ. ನಿಮ್ಮ ಪ್ರಕಾರ ಅವರು ಯಾಕೆ ಆ ಮಾತು ಹೇಳಿದ್ರು?
ಅಶ್ವಿನಿ ಎಸ್: ಕಿಚ್ಚ ಸುದೀಪ್ ಅವರಿಂದ ಜಗಳ ಆಗಿಲ್ಲ, ಕಿಚ್ಚ ಸುದೀಪ್ ಬಂದು ಹೋದ್ಮೇಲೆ ನಾವು ಜಗಳ ಆಡ್ತೀವಿ ಅಂತ ಹೇಳಿದ್ದೇವೆ
ಮಲ್ಲಮ್ಮ: ಅದೇ ಅರ್ಥ. ಅವರು ಬಂದು ಹೋದ್ಮೇಲೆ ಯಾಕೆ ಜಗಳ ಆಡಿದ್ರಿ? ಅವರು ಜಗಳ ಆಡಿ ಅಂತ ಹೇಳಿದ್ರಾ? ಅವರು ಒಳ್ಳೆಯ ಫುಡ್, ಹಣ್ಣು ಕಳಿಸ್ತಾರೆ, ಎಲ್ಲ ಕಳಿಸ್ತಾರೆ? ನಾವು ಅದನ್ನೆಲ್ಲ ತಗೊಂಡು ಹೋಗಿ ಅಲ್ಲಿಗೆ ಹಾಕೋದು, ಆಮೇಲೆ ನಾವೇ ಜಗಳ ಆಡೋದು. ನೀವು ಯಾರಾದರೂ ಕಿಚ್ಚ ಸುದೀಪ್‌ರಿಂದ ಜಗಳ ಆಯ್ತು ಅಂದ್ರೆ ನಾನಂತೂ ಸುಮ್ಮನೆ ಇರಲ್ಲ, ಹಾಗೆಲ್ಲ ಅನ್ನಬಾರದು. ಇಲ್ಲಿರೋರಿಗೆ ಮೂರು ಸಲ ಓದಿದ್ರೂ ಟಾಸ್ಕ್ ಅರ್ಥ ಆಗಲ್ಲ, ಆಟದ ಮೈದಾನಕ್ಕೆ ಹೋಗಿ ಅರ್ಥಮಾಡಿಕೊಳ್ಳಬೇಕು. ಆದರೆ ನನಗೆ ಮಾತ್ರ ಅರ್ಥ ಆಗಲ್ಲ ಅಂತ ಹೇಳ್ತಾರೆ.
ಕಿಚ್ಚ ಸುದೀಪ್; ನನ್ನ ಪರವಾಗಿ ಮಾತಾಡೋಕೆ ಮಲ್ಲಮ್ಮ ಬರಬೇಕಾಯ್ತು. ಇದಪ್ಪಾ..
ಅಂದಹಾಗೆ ಈವರೆಗೆ ಆರ್‌ಜೆ ಅಮಿತ್, ಕರಿಬಸಪ್ಪ ಅವರು ಎಲಿಮಿನೇಟ್ ಆಗಿದ್ದಾರೆ. ಈ ವಾರ ಯಾರು ಹೊರಗಡೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ಮೂರನೇ ವಾರ ಒಂದು ಫಿನಾಲೆ ನಡೆಯಲಿದ್ದು, ಮಾಸ್ ಎಲಿಮಿನೇಶನ್ ನಡೆಯಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
