- Home
- Entertainment
- TV Talk
- BBK 12: ಆಟವಾಡ್ಲಿಲ್ಲ, ಮನರಂಜನೆ ಕೊಡ್ಲಿಲ್ಲ: ಹಾಗಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?
BBK 12: ಆಟವಾಡ್ಲಿಲ್ಲ, ಮನರಂಜನೆ ಕೊಡ್ಲಿಲ್ಲ: ಹಾಗಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?
Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು, ತಮಗೆ ಇಷ್ಟವಾಗುವ ಹಾಗೆ ಆಟ ಆಡಿದ ಸ್ಪರ್ಧಿಗೆ ಚಪ್ಪಾಳೆ ಕೊಡುತ್ತಾರೆ, ಇದಕ್ಕೆ ಕಾರಣವನ್ನು ಕೂಡ ನೀಡುತ್ತಾರೆ. ಈ ಬಾರಿ ಅವರು ಯಾರಿಗೆ ಚಪ್ಪಾಳೆ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್‌ಗೆ ಬೇಸರ ಆಗಿದ್ದೂ ಇದೆ
ಕಿಚ್ಚ ಸುದೀಪ್ ಅವರ ಚಪ್ಪಾಳೆ ತಗೋಬೇಕು ಎಂದು ಸ್ಪರ್ಧಿಗಳು ತವಕಿಸುತ್ತಿರುತ್ತಾರೆ, ಚಪ್ಪಾಳೆ ಸಿಕ್ಕಿಲ್ಲ ಎಂದು ಬೇಸರ ಮಾಡಿಕೊಂಡಿದ್ದೂ ಉಂಟು. ಕೆಲವೊಮ್ಮೆ ಬೇಸರ ಆಗಿ ನಾನು ಚಪ್ಪಾಳೆ ಕೊಡೋದಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದೂ ಇದೆ.
ಬಳೆಗೆ ಚಪ್ಪಾಳೆ ಕೊಟ್ಟಿದ್ದರು
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಬಳೆಗೆ ಚಪ್ಪಾಳೆ ಕೊಟ್ಟಿದ್ದರು. ಆಟ ಆಡುವಾಗ ವಿನಯ್ ಗೌಡ ಅವರು, “ನಾನು ಕೈಗೆ ಬಳೆ ತೊಟ್ಕೊಂಡಿಲ್ಲ” ಎಂದು ಹೇಳಿದ್ದರು. ಹೆಣ್ಣನ್ನು ಅಬಲೆ ಎಂದು ತಿಳಿದರು ಎಂದು ವಿನಯ್ ಗೌಡ ವಿರುದ್ಧ ಸಾಕಷ್ಟು ಮಾತು ಕೇಳಿಬಂತು, ದೊಡ್ಡ ಚರ್ಚೆಯೂ ಆಯ್ತು. ಆ ವಾರ ಕಿಚ್ಚ ಸುದೀಪ್ ಅವರು ಬಳೆಗೆ ಚಪ್ಪಾಳೆ ಕೊಟ್ಟಿದ್ದರು.
ಒಂಟಿ, ಜಂಟಿ ಆಯ್ಕೆ
ಈ ಸೀಸನ್ ಶುರುವಾಗಿ ಒಂದು ವಾರ ಕಳೆದಿದೆ. ಬಿಗ್ ಬಾಸ್ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡುವಾಗ, ವೇದಿಕೆ ಕೆಳಗಿದ್ದ ಜನರು ಸ್ಪರ್ಧಿಗಳಿಗೆ ಮತ ಹಾಕಿದ್ದರು. ಈ ಮತಗಳ ಆಧಾರದ ಮೇಲೆ ಒಂಟಿ ಹಾಗೂ ಜಂಟಿ ಎಂದು ವಿಭಾಗ ಮಾಡಲಾಗಿತ್ತು. ಕಡಿಮೆ ಮತ ಬಂದವರಿಬ್ಬರನ್ನು ಜೋಡಿ ಮಾಡಿ, ಜಂಟಿ ಎಂದು, ಹೆಚ್ಚು ಮತ ಬಂದವರನ್ನು ಒಂಟಿ ಮಾಡಲಾಗಿತ್ತು.
ಟಾಸ್ಕ್ ಆಡಲಿಲ್ಲ
ಈ ವಾರ ಟಾಸ್ಕ್‌ಗಳನ್ನು ಕೂಡ ಅರ್ಥ ಮಾಡಿಕೊಳ್ಳಲಿಲ್ಲ, ಸಾಕಷ್ಟು ಸ್ಪರ್ಧಿಗಳು ಕಳೆದುಹೋದರು. ಆ ರೀತಿ ಆಟ ಆಡ್ತೀನಿ, ಈ ರೀತಿ ಆಟ ಆಡ್ತೀನಿ ಎಂದು ಕಿಚ್ಚ ಸುದೀಪ್ ಮುಂದೆ ಹೇಳಿಹೋಗಿದ್ದ ಸ್ಪರ್ಧಿಗಳು, ಒಳಗಡೆ ಹೋದಮೇಲೆ ಏನು ಮಾಡದೆ ಸುಮ್ಮನೆ ಕೂತಿದ್ದರು.
ಕಿಚ್ಚನ ಚಪ್ಪಾಳೆ
ಜಂಟಿಗಳು ಹಾಗೂ ಒಂಟಿಗಳು ಎಂದು ಜನರು ವಿಭಾಗ ಮಾಡಿದ್ದಾರೆ. ಅವರ ಜಡ್ಜ್‌ಮೆಂಟ್ ಸರಿಯಾಗಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಹೀಗಾಗಿ ಈ ವಾರದ ಕಿಚ್ಚನ ಚಪ್ಪಾಳೆ ಕರ್ನಾಟಕ ಜನತೆಗೆ ಸಿಕ್ಕಿದೆ.