- Home
- Entertainment
- TV Talk
- Bigg Boss ಮನೆಯಿಂದ ಹೊರಹೋಗುವಂತೆ ಮಾಡಿದ್ದ ಆ ಪದ ಈ ಬಾರಿಯೂ ಬಳಕೆಯಾಯ್ತು! ಏನ್ರಪ್ಪಾ ಅದರರ್ಥ?
Bigg Boss ಮನೆಯಿಂದ ಹೊರಹೋಗುವಂತೆ ಮಾಡಿದ್ದ ಆ ಪದ ಈ ಬಾರಿಯೂ ಬಳಕೆಯಾಯ್ತು! ಏನ್ರಪ್ಪಾ ಅದರರ್ಥ?
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಕಾಕ್ರೋಚ್ ಸುಧಿ ಅವರು ಕ್ಲೀನಿಂಗ್‌ಗೆ ಸಂಬಂಧಪಟ್ಟ ಮಾತುಕತೆ ವೇಳೆ, ರಕ್ಷಿತಾ ಶೆಟ್ಟಿಗೆ ಸೆಡೆ ಎಂದು ಹೇಳಿದ್ದರು. ಈಗ ಸೆಡೆ ಪದದ ಅರ್ಥ ಏನು ಎಂದು ಬಿಗ್ ಬಾಸ್ ಮನೆಯಲ್ಲಿದ್ದವರು ಕೂಡ ತಲೆ ಬಿಸಿ ಮಾಡಿಕೊಂಡಿದ್ದಾರೆ. ಇದರ ಅರ್ಥ ಏನು?

ಕಳೆದ ಸೀಸನ್‌ನಲ್ಲೂ ಸೌಂಡ್ ಮಾಡಿತ್ತು
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ರಜತ್ ಅವರು ಗೋಲ್ಡ್ ಸುರೇಶ್‌ಗೆ ಸೆಡೆ ಎಂದು ಹೇಳಿದ್ದರು. ಸೆಡೆ ಪದ ಕೇಳಿ, ಸುರೇಶ್ ಅವರು ಮನೆಯಿಂದ ಹೊರಗಡೆ ಹೋಗುವ ನಿರ್ಧಾರಕ್ಕೆ ಬಂದಿದ್ದರು. ಈಗ ಮತ್ತೆ ಸೆಡೆ ಪದ ಸೌಂಡ್ ಮಾಡುತ್ತಿದೆ.
ಸೆಡೆ ಪದಕ್ಕೆ ಕಾಕ್ರೋಚ್ ಸುಧಿ ಕೊಟ್ಟ ಸಮರ್ಥನೆ ಏನು?
ಸೆಡೆ ಅಂದರೆ ಚಿಕ್ಕ ಹುಡುಗಿ, ಚೈಲ್ಡ್ ಎಂದು ಅರ್ಥ ಎಂದು ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ಹೇಳಿದ್ದಾರೆ. “ನೀವು ಬೇರೆ ಯಾರದ್ದೋ ಮಾತನ್ನು ಕೇಳಿ ನಮ್ಮ ಮೇಲೆ ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ಅಣ್ಣ, ನಿಮಗೂ ಕೂಡ ಕನ್ನಡ ಗೊತ್ತಿಲ್ಲ. ದಯವಿಟ್ಟು ನಿಮ್ಮ ಅಣ್ಣನಿಗೆ ಜಾಸ್ತಿ ಆಕ್ಟಿಂಗ್ ಮಾಡಬೇಡಿ” ಎಂದು ಹೇಳಿದ್ದಾರೆ.
ಅಶ್ಲೀಲ ಪದವಲ್ಲ
ಸೆಡೆ ಎಂದರೆ ಕಂಪ್ಲೀಟ್ ಅಶ್ಲೀಲ ಪದವಲ್ಲ, ಅಸಮರ್ಥ ಅಥವಾ ಕೈಯಲ್ಲಾಗದವನು, ವೇಸ್ಟ್ ಎಂದು ಹೇಳಲಾಗುವುದು. ಎಲ್ ಬೋರ್ಡ್ ಎಂದು ಕೂಡ ಕರೆಯಲಾಗುವುದು.
ಸೆಡೆ ಪದದ ಅರ್ಥ ಏನು?
ಸೆಡೆ ಪದವನ್ನು ಮೈಸೂರು ಸೀಮೆಯಲ್ಲಿ ಬಳಸಲಾಗುತ್ತಿದೆ ಎನ್ನಲಾಗಿದೆ. ಸೆಟೆ, ಸೆದೆ, ಸೆತ್ತೆ, ಶ್ಯಾಡೆ, ಸೇಡೆ, ಶೇಡೆ ಎಂದು ಕೂಡ ಹೇಳಲಾಗುವುದು.
ಸೆಡೆ ಪದದ ಅರ್ಥ ಏನು?
ಉಬ್ಬುವುದು, ದಪ್ಪವಾಗುವುದು, ಗರ್ವಿಸುವುದು ಅಥವಾ ಅಹಂಕಾರ ತೋರುವುದು, ನಿಗುರುವುದು, ನೆಟ್ಟಗಾಗುವುದು, ಕುಗ್ಗುವುದು, ವಕ್ರವಾಗುವುದು, ಸಂಕೋಚಗೊಳ್ಳುವುದು, ಮುದುರುವುದು, ನಡುಗುವುದು, ಅದುರುವುದು, ತೂಗುವುದು, ತೊನೆ ಅಥವಾ ಹೆದರುವುದು, ಭಯಪಡುವುದು