- Home
- Entertainment
- TV Talk
- ಜಾಹ್ನವಿ ನನಗೆ ಆದ್ಯತೆ ಕೊಡದೆ, ಬೇರೆ ಪುರುಷನಿಗೆ ಕೊಟ್ರೆ ನಾನು ಕುಡಿಯಬೇಕಾಗತ್ತೆ: BBK 12 ಜಾಹ್ನವಿ ಮಾಜಿ ಪತಿ
ಜಾಹ್ನವಿ ನನಗೆ ಆದ್ಯತೆ ಕೊಡದೆ, ಬೇರೆ ಪುರುಷನಿಗೆ ಕೊಟ್ರೆ ನಾನು ಕುಡಿಯಬೇಕಾಗತ್ತೆ: BBK 12 ಜಾಹ್ನವಿ ಮಾಜಿ ಪತಿ
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಯಾಗಿರುವ ನಿರೂಪಕಿ ಜಾಹ್ನವಿ ಅವರು “ಪತಿ ಮೊದಲೇ ಮದುವೆಯಾಗಿ ಮಗು ಮಾಡಿಕೊಂಡಿದ್ದರು. ಕುಡಿದು ಹೊಡೆಯುತ್ತಿದ್ದರು, ಹೀಗಾಗಿ ಡಿವೋರ್ಸ್ ಕೊಟ್ಟೆ” ಎಂದು ಆರೋಪ ಮಾಡಿದ್ದರು. ಇದಕ್ಕೆ ಅವರ ಮಾಜಿ ಪತಿ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ತಿಕ್ ಎಲ್ಲಿಯವರು?
ಕಾರ್ತಿಕ್ ಮೂಲತಃ ಚಿತ್ರದುರ್ಗದವರು, ತಾಯಿ ಮಡಿಕೇರಿಯವರು. ನನ್ನ ತಂದೆಯವರು ಪೆಟ್ರೋಲ್ ಬ್ಯಾಂಕ್, ಕೃಷಿ, ಟ್ರಾನ್ಸ್‌ಪೋರ್ಟ್ ಉದ್ಯಮವನ್ನು ಮಾಡುತ್ತಿದ್ದಾರೆ. “ಇಂಜಿನಿಯರಿಂಗ್ ಮಾಡಿದ್ದು, ಬೆಂಗಳೂರಿನಲ್ಲಿಯೇ ಐಟಿ ಕೆಲಸ ಮಾಡುತ್ತಿದ್ದೇನೆ. ಇಡೀ ಕುಟುಂಬ ಇಲ್ಲಿಗೆ ಶಿಫ್ಟ್ ಆಗಿದ್ದು, ಊರಿನಲ್ಲಿರುವ ಉದ್ಯಮದಿಂದ ಹಣ ಬರುತ್ತದೆ” ಎಂದು ಕಾರ್ತಿಕ್ ಹೇಳಿದ್ದಾರೆ.
ಮದುವೆ ಹೇಗಾಯ್ತು?
“ನಾನು, ಜಾಹ್ನವಿ ಅವರದ್ದು ಅರೇಂಜ್ ಮ್ಯಾರೇಜ್. 2010ರಲ್ಲಿ ಜಾಹ್ನವಿ ಹಾಗೂ ನಮ್ಮ ಕುಟುಂಬದ ಭೇಟಿ ಆಯ್ತು. 2011ರಲ್ಲಿ ಮದುವೆಯಾಗಿ, ಒಂದು ವರ್ಷದಲ್ಲೇ ಗಂಡು ಮಗು ಆಯ್ತು. ಮದುವೆಗೂ ಮುನ್ನ ಜಾಹ್ನವಿ ಓದುತ್ತಿದ್ದಳು, ಮಗು ಆದ್ಮೇಲೆ ಜಾಹ್ನವಿಗೆ ಮೀಡಿಯಾದಲ್ಲಿ ಕೆಲಸ ಮಾಡು, ಸೀರಿಯಲ್‌ನಲ್ಲಿ ನಟಿಸೋದು ಬೇಡ ಅಂತ ಕಂಡೀಶನ್ ಹಾಕಿಯೇ ನಾನು ಮದುವೆ ಆಗಿದ್ದೇನೆ. ಎರಡೂ ಕುಟುಂಬದವರ ಒಪ್ಪಿಗೆ ಪಡೆದು, ನಾವು ಮದುವೆಯಾದೆವು” ಎಂದು ಕಾರ್ತಿಕ್ ಹೇಳಿದ್ದಾರೆ.
ಪತ್ನಿ ಜೊತೆ ಬೇರೆ ಮನೆ ಮಾಡಿದೆ!
“ಜಾಹ್ನವಿ ಕೆಲಸ ಮಾಡುವಾಗ ನಾನು, ನನ್ನ ತಾಯಿ ಮಗುವನ್ನು ನೋಡಿಕೊಳ್ಳುತ್ತಿದ್ದರು. ನನ್ನ ತಾಯಿ, ಜಾಹ್ನವಿ ಮಧ್ಯೆ ಮನಸ್ತಾಪ ಬಂತು. ಹೀಗಾಗಿ ನಾನು, ಜಾಹ್ನವಿ, ಮಗನ ಜೊತೆ ಬೇರೆ ಮನೆ ಮಾಡಿದೆ. ಆಮೇಲೆ ಎರಡು ವರ್ಷ ಸಕಲೇಶಪುರದಲ್ಲಿ ಮಗನನ್ನು ಓದಲು ಕಳಿಸಿದ್ದಳು. ಆಮೇಲೆ ಬಿಟ್ಟಿರೋಕೆ ಆಗೋದಿಲ್ಲ ಅಂತ ಬೆಂಗಳೂರಿಗೆ ಕರೆಸಿಕೊಂಡಳು” ಎಂದು ಜಾಹ್ನವಿ ಮಾಜಿ ಪತಿ ಕಾರ್ತಿಕ್ ಹೇಳಿದ್ದಾರೆ.
ಸ್ವಂತ ಮನೆ ಮಾಡಿದೆ
“ತಂದೆ-ತಾಯಿಯನ್ನು ಬಿಟ್ಟು ನಾವು ಬಾಡಿಗೆ ಮನೆಗೆ ಶಿಫ್ಟ್ ಆದೆವು. ಆಮೇಲೆ ಸ್ವಂತ ಮನೆ ಬೇಕು ಅಂತ ಜಾನು ಹಠ ಮಾಡಿದಳು. ತಕ್ಷಣ ಸ್ವಂತ ಮನೆ ಆಗಬೇಕು ಅಂತ ಹಠ ಮಾಡಿದಾಗ ಅಪಾರ್ಟ್‌ಮೆಂಟ್ ತಗೊಂಡೆವು. ಆಗ ನನಗೆ ಕೆಲಸ ಇರಲಿಲ್ಲ, ಉದ್ಯಮ ಕೂಡ ನಷ್ಟ ಆಯ್ತು. ತಂದೆ ಆಸ್ತಿ ತಗೊಳೋದು ಬೇಡ ಅಂತ ನಾನು ಸ್ವಂತ ಮನೆ ಮಾಡಿದ್ದೆ. ನನಗೆ ಆಗಿದ್ದ ಸಾಲವನ್ನು ಮ್ಯಾನೇಜ್ ಮಾಡೋದು ಕಷ್ಟ ಆಗಿತ್ತು. ಒಂದು ವರ್ಷದ ಕಾಲ ಜಾಹ್ನವಿಯೇ ಇಎಂಐ ಕಟ್ಟಿದ್ದಳು” ಎಂದು ಕಾರ್ತಿಕ್ ಹೇಳಿದ್ದರು.
ಡಿವೋರ್ಸ್ ಯಾಕೆ ಆಯ್ತು?
“ಜಾಹ್ನವಿ ಬೇರೆ ಪುರುಷರ ಜೊತೆ ಕಾಂಟ್ಯಾಕ್ಟ್‌ನಲ್ಲಿದ್ದಳು. ಅವಳು ಏನೇನೋ ಹೇಳಿಕೆ ಕೊಟ್ಟಳು. ಅವಳು ಬೇರೆ ವ್ಯಕ್ತಿ ಜೊತೆ ಮಾತನಾಡಿದಾಗ ನಾನು ಕುಡಿದು ಹೊಡೆದಿದ್ದೇನೆ. ಇನ್ನು ವೈಯಕ್ತಿಕವಾಗಿ ಹೇಳಲು ಆಗೋದಿಲ್ಲ. ಯಾರೋ ಹೇಳಿದಳು ಅಂತ ಜಾಹ್ನವಿ ಮೇಲೆ ಅನುಮಾನಪಟ್ಟಿಲ್ಲ, ನಾನು ಜಾಹ್ನವಿ ಮಾಡಿರೋ ಕೆಲಸವನ್ನು ನೇರವಾಗಿ ನೋಡಿದ್ದೇನೆ. ಮನೆಗೆಂದು ಕೋಟಿ ರೂಪಾಯಿ ಸಾಲ, ಮನೆಯಲ್ಲಿ ನೆಮ್ಮದಿ ಇಲ್ಲ ಎಂದರೆ ಏನು ಮಾಡಬೇಕು, ಗಂಡನ ಬದಲು ಬೇರೆಯವರಿಗೆ ಆದ್ಯತೆ ಕೊಟ್ಟರೆ ಹೇಗೆ ಸಹಿಸಿಕೊಳ್ಳಬೇಕು?” ಎಂದು ಕಾರ್ತಿಕ್ ಹೇಳಿದ್ದಾರೆ.
ಡಿವೋರ್ಸ್ ಆಗುವಂಥದ್ದು ಏನಾಗಿತ್ತು?
“ನನ್ನ ಆದಾಯ ಚೆನ್ನಾಗಿದ್ದಾಗ ಅವಳು ಚೆನ್ನಾಗಿದ್ದಳು. ಆಮೇಲೆ ನನಗೆ ಕೆಲಸ ಇರಲಿಲ್ಲ, ಬೇರೆ ಉದ್ಯಮ ಕೂಡ ಹಾಳಾಗಿತ್ತು. ಆಗ ಜಾಹ್ನವಿ ಡೈವೆರ್ಟ್ ಆದಳು ಅಂತ ಅನಿಸುತ್ತದೆ. ನಾನು ಕೂಡ ಸ್ವಲ್ಪ ತಪ್ಪು ಮಾಡಿದ್ದೆ, ಅದನ್ನು ಜಾಹ್ನವಿ ಬಳಿ ಹೇಳಿಕೊಂಡಿದ್ದು, ಕ್ಷಮೆ ಕೂಡ ಕೇಳಿದೆ. ಆಮೇಲೆ 3-4 ದಿನಗಳ ಕಾಲ ಮಗನ ಜೊತೆ ಮನೆಗೆ ಬರಲಿಲ್ಲ, ನೀನು ಮನೆಯಲ್ಲಿದ್ರೆ ಮನೆಗೆ ಬರೋದಿಲ್ಲ ಎಂದು ಹೇಳಿದ್ದಳು. ಅವಳು ಹೆಣ್ಣು, ಮಗ ಇದ್ದಾನೆ ಅಂತ ಅಂದುಕೊಂಡು, ಬಟ್ಟೆ ತಗೊಂಡು ಹೊರಗಡೆ ಬಂದೆ. ಒಂದೂವರೆ ವರ್ಷಗಳ ಕಾಲ ನಾನು ಮನೆಗೆ ಹೋಗಲಿಲ್ಲ. ತುಂಬ ಜನರು ಮಾತನಾಡಿದರೂ ಕೂಡ ಅವಳು ಯಾವುದಕ್ಕೂ ಒಪ್ಪಲಿಲ್ಲ, ನನ್ನ ಜೊತೆ ಸಂಸಾರ ಮಾಡಲು ಒಪ್ಪಲಿಲ್ಲ” ಎಂದು ಕಾರ್ತಿಕ್ ಹೇಳಿದ್ದಾರೆ.
ಜಾಹ್ನವಿಯನ್ನು ಸಮರ್ಥಿಸಿಕೊಂಡಿದ್ದೆ
“ಜಾಹ್ನವಿಗೆ ಅಪಾರ್ಟ್‌ಮೆಂಟ್ ಬೇಕಿತ್ತು, ಡಿವೋರ್ಸ್ ಬೇಕಿತ್ತು ಅಷ್ಟೇ. ಡಿವೋರ್ಸ್ ಆಗಿ ಒಂದು ವರ್ಷದ ಮೇಲಾಯ್ತು. ಹೀಗಿದ್ದರೂ ಅವಳು ನನ್ನ ತೇಜೋವಧೆ ಮಾಡುತ್ತಿದ್ದಾಳೆ. ಯಾರೋ ವ್ಯಕ್ತಿ ಜಾಹ್ನವಿ ವಿರುದ್ಧ ಎಲ್ಲ ಚಾನೆಲ್‌ಗಳಿಗೆ ಪತ್ರ ಬರೆದಿದ್ದನು, ಆಮೇಲೆ ರವಿ ಬೆಳಗೆರೆ ಅವರ ಪೇಪರ್‌ನಲ್ಲಿ ಕೂಡ ಜಾಹ್ನವಿ ಬಗ್ಗೆ ಬಂದಿತ್ತು. ಅದನ್ನೆಲ್ಲ ನಾನು ಸಮರ್ಥಿಸಿಕೊಂಡಿದ್ದೆ” ಎಂದು ಕಾರ್ತಿಕ್ ಹೇಳಿದ್ದಾರೆ.
ನಾನು ತಪ್ಪು ಮಾಡಿದ್ದೀನಿ
“ಜಾಹ್ನವಿ ನನಗೆ ಗಂಡನ ಸ್ಥಾನ ಕೊಟ್ಟಿಲ್ಲ, ಅವಳದ್ದು ತುಂಬ ತಪ್ಪಿದ್ದಾಗ ನಾನು ಹೇಗೆ ಕ್ಷಮಿಸಲಿ, ಹೆಂಡ್ತಿ ಅಂತ ಹೇಗೆ ಒಪ್ಪಿಕೊಳ್ಳಲಿ? ನಾನು ತಪ್ಪು ಮಾಡಿದ್ದೀನಿ ಅಂತ ಒಪ್ಪಿಕೊಳ್ತೀನಿ. ಯಾವ ಪುರುಷನೂ ಕೂಡ ತಪ್ಪು ಮಾಡಿದ್ದೀನಿ ಅಂತ ಒಪ್ಪಿಕೊಳ್ಳಲ್ಲ. ಡಿವೋರ್ಸ್ ಆದ್ಮೇಲೆ ನಾನು ಬೇರೆ ಮದುವೆಯಾದೆ. ಈಗ ನನ್ನ ಮಗಳಿಗೆ ಹತ್ತು ತಿಂಗಳು. ಅವಳು ಹೇಳೋ ಪ್ರಕಾರ ನನಗೆ ಮದುವೆಯಾಗಿ, ಮಗಳು ಹುಟ್ಟಿ ಎರಡೂವರೆ ವರ್ಷ ಆಗಬೇಕಿತ್ತು. ಆದರೆ ನನ್ನ ಮಗಳಿಗೆ ಈಗ ಹತ್ತು ತಿಂಗಳು. ನನ್ನ ಮದುವೆಗೆ ಬಾ ಅಂತ ಜಾಹ್ನವಿಗೆ ಕರೆದಿಲ್ಲ, ಹೇಗೆ ನನ್ನ ಮದುವೆಯಾಗಿ ಎರಡು ವರ್ಷ ಆಗಿದೆ ಅಂತ ಹೇಳ್ತಾಳೆ?” ಎಂದು ಕಾರ್ತಿಕ್ ಹೇಳಿದ್ದಾರೆ.
ಮಗನ ಮುಖ ತೋರಿಸಲಿಲ್ಲ
“ಈಗ ಜಾಹ್ನವಿ ಯಾವುದಾದರೂ ವಿಷಯಕ್ಕೆ ಮೆಸೇಜ್ ಮಾಡುತ್ತಾಳೆ, ಆದರೆ ನಾನು ರಿಯಾಕ್ಟ್ ಮಾಡಲಿಲ್ಲ. ನನ್ನ ತಾಯಿ ಕೂಡ ಮಗನನ್ನು ಕಳಿಸು ಅಂತ ಹೇಳಿದಾಗಲೂ ಕೂಡ ಕಳಿಸಲಿಲ್ಲ, ನನ್ನ ತಂದೆ ಮೊಮ್ಮಗನನ್ನು ನೋಡಬೇಕು ಎಂದು ಅಪಾರ್ಟ್‌ಮೆಂಟ್‌ಗೆ ಹೋದರೂ ಕೂಡ ನೀರು ಕೊಟ್ಟು ಕಳಿಸಲಿಲ್ಲ” ಎಂದು ಕಾರ್ತಿಕ್ ಹೇಳಿದ್ದಾರೆ.
ಅಷ್ಟು ಕಡಿಮೆ ಸಂಬಳದಲ್ಲಿ ಹೇಗೆ ಅಪಾರ್ಟ್‌ಮೆಂಟ್ ಬರತ್ತೆ?
“ಆರಂಭದಲ್ಲಿ ಜಾಹ್ನವಿಗೆ 25000 ರೂಪಾಯಿ ಸಂಬಳ ಇತ್ತು, ನಾನು ನೋಡಿದಾಗ ಅವಳಿಗೆ ತಿಂಗಳಿಗೆ 60000 ರೂಪಾಯಿ ಬಂದಿದ್ದು ನೋಡಿದೆ. ಇಷ್ಟು ಸಂಬಳ ಇಟ್ಟುಕೊಂಡು ಅವಳು ಹೇಗೆ ಅಪಾರ್ಟ್‌ಮೆಂಟ್ ಖರೀದಿ ಮಾಡುತ್ತಾಳೆ. ಆ ಅಪಾರ್ಟ್‌ಮೆಂಟ್‌ಗೆ ಒಂದು ಕೋಟಿ ರೂಪಾಯಿ ಕೊಟ್ಟು ಹೇಗೆ ಖರೀದಿ ಮಾಡ್ತಾಳೆ? ಅವಳಿಗೆ ಅಪಾರ್ಟ್‌ಮೆಂಟ್‌ನ ಡೌನ್ ಪೇಮೆಂಟ್, ಇಎಂಐ ಎಷ್ಟು ಎನ್ನೋದು ಕೂಡ ಗೊತ್ತಿಲ್ಲ” ಎಂದು ಜಾಹ್ನವಿ ಮಾಜಿ ಪತಿ ಹೇಳಿದ್ದಾರೆ.
ಕಾನೂನು ಹೋರಾಟ ಮಾಡುವೆ
“ನನ್ನ ತಾಯಿಗೆ ವಯಸ್ಸಾಗಿದೆ, ನನಗೂ ಹೆಂಡ್ತಿಯಿದ್ದಾಳೆ, ಮಗು ಇದೆ. ಜಾಹ್ನವಿ ಈ ರೀತಿ ಹೇಳಿಕೆ ಕೊಡೋದರಿಂದ ಕುಟುಂಬದಲ್ಲಿ ಸಮಸ್ಯೆ ಆಗ್ತಿದೆ. ಜಾಹ್ನವಿ ಬೆಳೆಯಲಿ, ಆದರೆ ನನ್ನ ವಿರುದ್ಧ ಮಾತನಾಡೋದು ನನಗೆ ಇಷ್ಟವಾಗ್ತಿಲ್ಲ. ಡಿವೋರ್ಸ್ ಆದ್ಮೇಲೆ ಕಾನೂನಾತ್ಮಕವಾಗಿ ಮದುವೆ ಆಗಿದ್ದೇನೆ. ಮುಂದೆ ಈ ರೀತಿ ಮಾತನಾಡಿದ್ರೆ ನಾನು ಕಾನೂನು ಹೋರಾಟ ಮಾಡ್ತೀನಿ. ನನ್ನ ಮಗನ ಶಿಕ್ಷಣವನ್ನು ನಾನು ನೋಡಿಕೊಳ್ತೀನಿ, ಅವನು ನನ್ನ ಮಗ” ಎಂದು ಜಾಹ್ನವಿ ಮಾಜಿ ಪತಿ ಹೇಳಿದ್ದಾರೆ.