- Home
- Entertainment
- TV Talk
- Bigg Boss ಕಾರ್ತಿಕ್ ಮಹೇಶ್ ಹುಟ್ಟುಹಬ್ಬ: ನಮ್ರತಾ ಗೌಡ ಪೋಸ್ಟ್ ನೋಡಿ 'ಗೊತ್ತಾಯ್ತು ಬಿಡಿ' ಎಂದ ಫ್ಯಾನ್ಸ್!
Bigg Boss ಕಾರ್ತಿಕ್ ಮಹೇಶ್ ಹುಟ್ಟುಹಬ್ಬ: ನಮ್ರತಾ ಗೌಡ ಪೋಸ್ಟ್ ನೋಡಿ 'ಗೊತ್ತಾಯ್ತು ಬಿಡಿ' ಎಂದ ಫ್ಯಾನ್ಸ್!
ಬಿಗ್ ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಜೋಡಿಯ ಬಗ್ಗೆ ಮತ್ತೆ ಗುಸುಗುಸು ಶುರುವಾಗಿದೆ. ಕಾರ್ತಿಕ್ ಹುಟ್ಟುಹಬ್ಬಕ್ಕೆ ನಮ್ರತಾ ಮಾಡಿಸಿದ ವಿಶೇಷ ಫೋಟೋಶೂಟ್ ಈ ಚರ್ಚೆಗೆ ಕಾರಣವಾಗಿದ್ದು, ಇವರಿಬ್ಬರ ಸ್ನೇಹಕ್ಕೆ ನೆಟ್ಟಿಗರು ಪ್ರೀತಿಯ ಬಣ್ಣ ಬಳಿಯುತ್ತಿದ್ದಾರೆ.

ಬಿಗ್ಬಾಸ್ ಎಂದರೆ ಜೋಡಿಗೆ ಬರವಿಲ್ಲ!
ಬಿಗ್ಬಾಸ್ (Bigg Boss) ಅಂದ್ರೆನೇ ಹಾಗೆ. ಅಲ್ಲಿ ಕೆಲವು ಜೋಡಿಗಳು ಸಕತ್ ಸದ್ದು ಮಾಡುತ್ತವೆ. ಮೊದಲೇ ಹೇಳಿ ಮಾಡಿಸೋದು, ತಾನಾಗೇ ಆಗೋದೋ... ಇದು ಬೇರೆಯ ವಿಷ್ಯ. ಆದರೆ ಕೆಲವು ಭಾಷೆಗಳ ಬಿಗ್ಬಾಸ್ನಲ್ಲಿ ಈ ಜೋಡಿಗಳು ಗಡಿಯನ್ನು ಮೀರಿ ಹೋಗುವುದೂ ಇದೆ. ಟಿಆರ್ಪಿ ಕಡಿಮೆಯಾಗುತ್ತಿದ್ದಂತೆಯೇ ಬಿಗ್ಬಾಸ್ ಮನೆಯಲ್ಲಿಯೇ ಈ ಜೋಡಿಗಳ ಬೆಡ್ರೂಮ್ ದೃಶ್ಯಗಳನ್ನೂ ವೈರಲ್ ಮಾಡಿರುವ ಉದಾಹರಣೆಗಳು ಈ ಹಿಂದೆ ಬೇರೆ ಭಾಷೆಗಳ ಬಿಗ್ಬಾಸ್ನಲ್ಲಿ ಆಗಿದ್ದೂ ಇದೆ. ಕುಟುಂಬದವರ ಜೊತೆ ಕೂತುಕೊಂಡು ನೋಡುವ ಷೋ ಇದಲ್ಲ ಎನ್ನುತ್ತಲೇ, ಇಂಥ ದೃಶ್ಯಗಳನ್ನು ಪದೇ ಪದೇ ನೋಡುವ ದೊಡ್ಡ ವರ್ಗ ಇದೆ ಎನ್ನುವುದು ಬಿಗ್ಬಾಸ್ಗೂ ಗೊತ್ತಿದೆ.
ಸದ್ದು ಮಾಡಿದ್ದ ಈ ಬಿಗ್ಬಾಸ್ ಜೋಡಿ
ಅದೇನೇ ಇರಲಿ. ಕನ್ನಡದಲ್ಲಿ ಅಂಥ ಅಶ್ಲೀಲತೆಯ ಪರಮಾವಧಿ ಆಗಿಲ್ಲ ಎನ್ನುವುದೇ ನೆಮ್ಮದಿಯ ಸಂಗತಿ. ಆದರೆ ಬಿಗ್ಬಾಸ್ನ ಕೆಲವು ಸೀಸನ್ಗಳಲ್ಲಿ ಕೆಲವು ಜೋಡಿಗಳು ಒಂದಷ್ಟು ಮಟ್ಟಿಗೆ ಸದ್ದು ಮಾಡುತ್ತವೆ. ಅವುಗಳಲ್ಲಿ ಒಂದು ಬಿಗ್ ಬಾಸ್ ಸೀಸನ್ 10 ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ (Namratha Gowda) ಅವರ ಹೆಸರು. ಹಾಗೆಂದು ಇದು ಬಿಗ್ಬಾಸ್ ಮನೆಯೊಳಕ್ಕೆ ಕೇಳಿ ಬಂದ ಹೆಸರಲ್ಲ. ಕಾರ್ತಿಕ್ ಮಹೇಶ್ (Karthik Mahesh) ಹೆಸರು ಬಿಗ್ ಬಾಸ್ ಆರಂಭವಾದಾಗ ಸಂಗೀತ ಶೃಂಗೇರಿ ಜೊತೆ ಕೇಳಿ ಬಂದಿತ್ತು, ಕೊನೆಯಾಗ್ತಿದ್ದಂಗೆ ತನಿಷಾ ಕುಪ್ಪಂಡ ಜೊತೆ ಕೇಳಿ ಬಂದಿತ್ತು. ಹೊರ ಬಂದ ನಂತರ ಒಂದು ಬಾರಿ ಅನುಪಮಾ ಗೌಡ ಜೊತೆ ಸಂಬಂಧ ಕಲ್ಪಿಸಲಾಗಿತ್ತು.
ಜೊತೆಯಲ್ಲಿದ್ದ ನಮ್ರತಾ-ಕಾರ್ತಿಕ್
ಇವೆಲ್ಲವುಗಳ ಬಳಿಕ ಕಾರ್ತಿಕ್ ಹಾಗೂ ನಮ್ರತಾ ಗೌಡ ಹೆಸರು ಭಾರಿ ಸದ್ದು ಮಾಡಿತ್ತು. ಕಾರ್ತಿಕ್ ಮತ್ತು ನಮ್ರತಾ ತುಂಬಾ ಕಡೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಮ್ರತಾ ಹುಟ್ಟುಹಬ್ಬ, ಕಾರ್ತಿಕ್ ಮಹೇಶ್ ತಂಗಿ ಮಗ ಹುಟ್ಟು ಹಬ್ಬ ಇರಬಹುದು, ನಮ್ರತಾ ಮನೆಯ ವರಮಹಾಲಕ್ಷ್ಮೀ ಪೂಜೆ, ಜಾಹಿರಾತಿಗಳಲ್ಲಿ, ಇತ್ತೀಚೆಗೆ ದುಬೈನಲ್ಲೂ ಈ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣ.
ಜಾಹೀರಾತಿನಲ್ಲಿ ಜೋಡಿ
ಈ ಹಿಂದೆ ನಮ್ರತಾ ಹಾಗೂ ಕಾರ್ತಿಕ್ ಜೊತೆಯಾಗಿ ಒಂದು ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು, ಅದರಲ್ಲಿ ಇವರಿಬ್ಬರು ಹಸೆಮಣೆ ಏರುವಂತಹ ಸೀನ್ ಸಖತ್ ವೈರಲ್ ಆಗಿತ್ತು. ಇಬ್ಬರೂ ಸದ್ದಿಲ್ಲದೇ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡಿತ್ತು. ಆದರೆ ಆಮೇಲೆ ಅದು ಜಾಹೀರಾತು ಶೂಟ್ (advertisement shoot) ಎಂದು ಗೊತ್ತಾದಮೇಲೆ ಸಂಗತಿ ತಣ್ಣಗಾಗಿತ್ತು.
ಕಾರ್ತಿಕ್ ಮಹೇಶ್ ಹುಟ್ಟುಹಬ್ಬಕ್ಕೆ ವಿಷ್
ಆದರೆ ಇದೀಗ ಕಾರ್ತಿಕ್ ಮಹೇಶ್ ಅವರ ಹುಟ್ಟುಹಬ್ಬದ ನಿಮಿತ್ತ ನಮ್ರತಾ ಗೌಡ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು, ಮತ್ತೆ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ನಮ್ರತಾ ಅವರು ಕಾರ್ತಿಕ್ ಅವರಿಗೆ ವಿಷ್ ಮಾಡಿ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದರೂ ಮತ್ತೆ ಇವರ ಲವ್ ಮ್ಯಾಟರ್ ಮುನ್ನೆಲೆಗೆ ಬಂದಿದ್ದು, ನೆಟ್ಟಿಗರು ಜೋಡಿ ಚೆನ್ನಾಗಿದೆ. ನೀವು ಹೀಗೆ ಹಾಕಿದ್ದು ಯಾಕೆ ಎಂದು ತಿಳಿದಿದೆ ಬಿಡಿ, ನೀವು ಹೇಳಬೇಕೆಂದೇನೂ ಇಲ್ಲ ಎನ್ನುತ್ತಿದ್ದಾರೆ.
ಸ್ನೇಹಜೀವಿ ನಮ್ರತಾ ಗೌಡ
ಅಷ್ಟಕ್ಕೂ ನಮ್ರತಾ ಗೌಡ ಅವರು ಸ್ನೇಹಜೀವಿಯಾಗಿದ್ದು, ಹಲವಾರು ಮಂದಿಯ ಜೊತೆ ಇದೇ ರೀತಿ ಫೋಟೋಶೂಟ್, ವಿಡಿಯೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಈಕೆ ಅದ್ಭುತ ನೃತ್ಯಗಾತಿಯೂ ಆಗಿರುವ ಕಾರಣ, ಕಿಶನ್ ಬಿಳಗಲಿ ಅವರ ಜೊತೆಯೂ ರೊಮಾಂಟಿಕ್ ಸಾಂಗ್ಗೆ ಸ್ಟೆಪ್ ಹಾಕುತ್ತಿರುತ್ತಾರೆ. ಆದರೆ ಗಂಡು-ಹೆಣ್ಣು ಹೀಗೆ ಕ್ಲೋಸ್ ಆಗಿ ಅದರಲ್ಲಿಯೂ ಸೆಲೆಬ್ರಿಟಿಗಳು ಹೀಗೆ ಫೋಟೋಶೂಟ್ ಮಾಡಿಸಿಕೊಂಡರು ಎಂದರೆ ಅದಕ್ಕೆ ಬೇರೆಯದ್ದೇ ಅರ್ಥ ಕಲ್ಪಿಸುವ ಮನಸ್ಥಿತಿಗಳಿಗೂ ಕಮ್ಮಿಯೇನಿಲ್ಲ.
ತಲೆ ಕೆಡಿಸಿಕೊಳ್ಳದ ನಟಿ
ಇಲ್ಲಿಯೂ ಹಾಗೆಯೇ ಆಗಿದೆ. ಮತ್ತೆ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ಜೋಡಿಯ ಬಗ್ಗೆ ವಿವಿಧ ರೀತಿಯ ಕಮೆಂಟ್ ಹಾಕಲಾಗುತ್ತಿದೆ. ಹಾಗೆಂದು ನಮ್ರತಾ ಗೌಡ ಇಂಥದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳುವವರು ಅಲ್ಲ. ತಲೆ ಕೆಡಿಸಿಕೊಂಡದ್ದೇ ಆಗಿದ್ದರೆ, ಅವರೇ ಖುದ್ದು ಇಂಥ ವಿಡಿಯೋಗಳನ್ನು ಶೇರ್ ಮಾಡುತ್ತಲೂ ಇರಲಿಲ್ಲ ಎನ್ನುವುದು ಅವರ ಮತ್ತಷ್ಟು ಅಭಿಮಾನಿಗಳ ಮಾತು,