MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • "ಲಕ್ಷಣವಾಗಿ ಕಾಣಿಸ್ತಿದ್ದೀರಿ, ಹೀಗೆ ಇರಿ"..ತಾಳಿಯಲ್ಲಿ ಕಾಣಿಸಿಕೊಳ್ತಿರೋ ಅನುಶ್ರೀಗೆ ವೀಕ್ಷಕರಿಂದ ಸಿಕ್ತಿದೆ ಭಾರೀ ಮೆಚ್ಚುಗೆ

"ಲಕ್ಷಣವಾಗಿ ಕಾಣಿಸ್ತಿದ್ದೀರಿ, ಹೀಗೆ ಇರಿ"..ತಾಳಿಯಲ್ಲಿ ಕಾಣಿಸಿಕೊಳ್ತಿರೋ ಅನುಶ್ರೀಗೆ ವೀಕ್ಷಕರಿಂದ ಸಿಕ್ತಿದೆ ಭಾರೀ ಮೆಚ್ಚುಗೆ

Anushree in Mangalya: ಸೆಲೆಬ್ರಿಟಿಗಳು ಮದುವೆಯಾದ ನಂತರ ತಾಳಿ ತೆಗೆದು ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಶೋ ಮುಗಿದ ಮೇಲೆ ಮತ್ತೆ ತಾಳಿ ಹಾಕಿಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಕೆಲವು ನಟಿಯರು ಡಿಫರೆಂಟ್. ಅದರಲ್ಲಿ ನಮ್ಮ ಅನುಶ್ರೀ ಕೂಡ ಒಬ್ಬರು. 

1 Min read
Ashwini HR
Published : Sep 21 2025, 01:31 PM IST
Share this Photo Gallery
  • FB
  • TW
  • Linkdin
  • Whatsapp
15
ಅನುಶ್ರೀ ಲುಕ್
Image Credit : Facebook

ಅನುಶ್ರೀ ಲುಕ್

ಖ್ಯಾತ ಕನ್ನಡ ನಿರೂಪಕಿ ಅನುಶ್ರೀ ಆಗಸ್ಟ್ 28, 2025 ರಂದು ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅನುಶ್ರೀ ಮದುವೆಯಾಗಿದ್ದಕ್ಕೆ ಅವರ ಕುಟುಂಬದವರಷ್ಟೇ ಖುಷಿಪಟ್ಟಿದ್ದು ಅಭಿಮಾನಿಗಳು. ಇದೇ ಅಭಿಮಾನಿಗಳು ಈಗ ಮದುವೆಯಾದ ನಂತರ ಅನುಶ್ರೀ ಲುಕ್ ನೋಡಿಯೂ ಖುಷಿಪಡುತ್ತಿದ್ದಾರೆ.

25
ಮಹಾನಟಿ ಶೋ
Image Credit : Facebook

ಮಹಾನಟಿ ಶೋ

ಹೌದು. ಅನುಶ್ರೀ ಮದುವೆಯಾದ ನಂತರ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಾರೋ ಇಲ್ಲವೋ ಎಂಬ ಕುತೂಹಲವಿತ್ತು. ಆದರೆ ಅನು ಮದುವೆಯಾದ ನಂತರ ಮತ್ತೆ ಮಹಾನಟಿ ಶೋನಲ್ಲಿ ಕಾಣಿಸಿಕೊಂಡರು. ಜೀ ವಾಹಿನಿಯೂ ಕೂಡ ಅವರನ್ನು ಅದ್ದೂರಿಯಾಗೇ ಮತ್ತೆ ಬರಮಾಡಿಕೊಂಡಿತು.

Related Articles

Related image1
ನನ್ನ ಗಂಡ ಏನ್ ಅಂದ್ಕೊಳ್ಳಲ್ಲ: ವೇದಿಕೆ ಮೇಲೆ ಪತಿ ವಿಷಯ ಪ್ರಸ್ತಾಪಿಸಿದ ಆಂಕರ್ ಅನುಶ್ರೀ
Related image2
ಸ್ವಂತ ಅಣ್ಣನಂತೆ ನಿರೂಪಕಿ ಅನುಶ್ರೀ ಮದುವೆ ಮಾಡಿದ ಸೂಪರ್‌ ಹಿಟ್‌ ಸಿನಿಮಾ ನಿರ್ಮಾಪಕ ವರುಣ್‌ ಗೌಡ!
35
ಕೆಲವು ನಟಿಯರು ಡಿಫರೆಂಟ್
Image Credit : Facebook

ಕೆಲವು ನಟಿಯರು ಡಿಫರೆಂಟ್

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಲೆಬ್ರಿಟಿಗಳು, ನಟಿಯರು, ನಿರೂಪಕಿಯರು ಮದುವೆಯಾದ ನಂತರ ತಾಳಿ ತೆಗೆದು ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಶೋ ಮುಗಿದ ಮೇಲೆ ಮತ್ತೆ ತಾಳಿ ಹಾಕಿಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಕೆಲವು ನಟಿಯರು ಡಿಫರೆಂಟ್. ಅದರಲ್ಲಿ ನಮ್ಮ ಅನುಶ್ರೀ ಕೂಡ ಒಬ್ಬರು.

45
ಅಭಿಮಾನಿಗಳ ಮನಗೆದ್ದ ಅನು ಲುಕ್
Image Credit : Facebook

ಅಭಿಮಾನಿಗಳ ಮನಗೆದ್ದ ಅನು ಲುಕ್

ಸದ್ಯ ಅನುಶ್ರೀ ತಾಳಿ ಬಿಚ್ಚಿಡದೆ ಶೋ ನಡೆಸಿಕೊಡುತ್ತಿರುವುದು ವೀಕ್ಷಕರರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು, ಅನುಶ್ರೀ ಕಳೆದ ವಾರ ಸಿಲ್ಕ್ ಸೀರೆ ಧರಿಸಿ ಬಂದಿದ್ದರು. ಆಗಲೂ ನೆಕ್ಲೇಸ್ ಜೊತೆ ಕರಿಮಣಿ ಧರಿಸಿದ್ದರು. ಈ ಬಾರಿ ಸೂಪರ್ ಆಗಿರೋ ಸಲ್ವಾರ್ ಜೊತೆ ತಾಳಿ ತೆಗೆಯದೆ ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅನುಶ್ರೀ ಅವರ ಈ ಲುಕ್ ಅಭಿಮಾನಿಗಳ ಮನಗೆದ್ದಿದೆ.

55
ವೀಕ್ಷಕರ ಕಾಮೆಂಟ್ಸ್
Image Credit : Facebook

ವೀಕ್ಷಕರ ಕಾಮೆಂಟ್ಸ್

ಕೆಲವರು ಅನುಶ್ರೀ ಮದುವೆಯಾದ ನಂತರ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂದರೆ ಮತ್ತೆ ಕೆಲವರು "ಅನುಶ್ರೀ ಮದುವೆಯಾದ ಮೇಲೆ ತಾಳಿ ಸಮೇತ ಕಾಣಿಸುತ್ತಿರುವುದು ತುಂಬಾ ಖುಷಿ ವಿಷಯ. ಈ ಕಾಲದಲ್ಲಿ ತಾಳಿ ತೆಗೆದಿಟ್ಟು ಬರುವವರೇ ಜಾಸ್ತಿ. ಆದ್ರೆ ನಮ್ಮ ಸಂಸ್ಕೃತಿ ಪರಂಪರೆ ಉಳಿಸೋದು ನಮ್ಮ ಕರ್ತವ್ಯ. superb keep it up" ಎಂದರೆ, ಮತ್ತೆ ಕೆಲವರು "ದಯವಿಟ್ಟು ತಾಳಿ ತೆಗೆಯಬೇಡಿ, ತುಂಬಾ ಲಕ್ಷಣವಾಗಿ ಕಾಣಿಸುತ್ತಿದ್ದೀರಿ" "ಮಾಂಗಲ್ಯ ಸರ ತುಂಬಾ ಚೆನ್ನಾಗಿ ಕಾಣ್ತಾ ಇದೆ ಅನು ಅಕ್ಕ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ಜೀ ಕನ್ನಡ ಫೇಸ್‌ಬುಕ್ ಪೇಜ್‌ನಲ್ಲಿ ನೋಡಬಹುದು.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ
ಫ್ಯಾಷನ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved