Anchor Anushree Wedding: ನಿರೂಪಕಿ ಅನುಶ್ರೀ ಹಾಗೂ ರೋಶನ್‌ ಮದುವೆಯಾಗಿದೆ. ಈ ಮದುವೆಯಲ್ಲಿ ಸ್ವಂತ ಅಣ್ಣನಾಗಿ ಓಡಾಡಿದ ವರುಣ್‌ ಗೌಡ ಬಗ್ಗೆ ಅನೇಕರಿಗೆ ಮಾಹಿತಿ ಇರಲಿಕ್ಕಿಲ್ಲ. 

ನಿರೂಪಕಿ ಅನುಶ್ರೀ ಅವರು ರೋಶನ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಮಹಾನಟಿ’, ‘ನಮ್ಮವರು’ ಶೋ ಮಹಾಸಂಗಮದಲ್ಲಿ ಅನುಶ್ರೀ ಅವರಿಗೆ ಎಲ್ಲರೂ ಶುಭಾಶಯಗಳನ್ನು ತಿಳಿಸಿದ್ದಾರೆ. ಆ ವೇಳೆ ಅನುಶ್ರೀ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ.

“ನನಗೆ ಬಹಳ ಸರಳವಾಗಿ ಮದುವೆ ಆಗೋ ಯೋಚನೆ ಆಗಿತ್ತು. ದೇವಸ್ಥಾನದಲ್ಲಿ ಮದುವೆ ಆಗಬೇಕು ಎಂದುಕೊಂಡಿದ್ದೆವು. ಆದರೆ ವರುಣ್‌ ಮಾತ್ರ ನನ್ನ ತಂಗಿ ಮದುವೆ ಹೀಗೆ ಆಗಬೇಕು ಅಂತ ಹೇಳಿದ್ದನು. ಅವನು ನನ್ನ ಮಾತು ಕೇಳಲಿಲ್ಲ. ನಾನು ಎಲ್ಲರನ್ನು ಕರೆಯೋಕೆ ಆಗಲಿಲ್ಲ. ನನ್ನ ಮದುವೆಗೆ ಬಂದವರು ಯಾರೂ ಸೆಲೆಬ್ರಿಟಿಗಳಲ್ಲ, ಅವರೆಲ್ಲ ನನ್ನ ಆತ್ಮೀಯರು. ನಮ್ಮ ಮನೆಯವರಿಗಿಂತ ಹೆಚ್ಚಾಗಿ ಮದುವೆಯಲ್ಲಿ ಓಡಾಡಿದವರು ರಾಜ್‌ ಬಿ ಶೆಟ್ಟಿ” ಎಂದು ಅನುಶ್ರೀ ಹೇಳಿದ್ದಾರೆ.

ವರುಣ್‌ ಗೌಡ ಅವರು, “ಇವರೆಲ್ಲ ಹೇಳೋ ಥರ ನಾನು ಏನೂ ಮಾಡಿಲ್ಲ. ಇವತ್ತಿನವರೆಗೂ ನನಗೆ ನನ್ನ ಬಾಸ್‌ ಅಪ್ಪು ಅವರು ನಿಮ್ಮ ಬಳಿ ಆದರೆ ಒಳ್ಳೆಯದು ಮಾಡಿ, ಕೆಟ್ಟದ್ದು ಮಾಡಬೇಡಿ. ನನ್ನ ಮದುವೆಯಲ್ಲಿ ಪುನೀತ್‌ ಸರ್‌ ಮಿಸ್‌ ಮಾಡಿಕೊಂಡೆ, ನನ್ನ ತಂಗಿ ಅನುಶ್ರೀ ಮದುವೆಯಲ್ಲಿಯೂ ಮಿಸ್‌ ಮಾಡಿಕೊಂಡಿದ್ದೀನಿ” ಎಂದು ಹೇಳಿದ್ದಾರೆ.

ಅನುಶ್ರೀ ಅವರು ಮಾತನಾಡಿ, “ಪುನೀತ್‌ ಸರ್‌ ಎಲ್ಲಿಯೂ ಹೋಗಿಲ್ಲ, ಆ ಮದುವೆಗೆ ಬಂದ ಶಿವರಾಜ್‌ಕುಮಾರ್-ಗೀತಕ್ಕ ಸೇರಿ ಎಲ್ಲ ಒಳ್ಳೆಯ ಮನಸ್ಸಿನಲ್ಲಿಯೂ ಇದ್ದಾರೆ” ಎಂದು ಹೇಳಿದ್ದಾರೆ. ನಟಿ ಅಮೂಲ್ಯ ಅವರು ಮಾತನಾಡಿ, “ನಿಮ್ಮಬ್ಬರ ಬಾಂಧವ್ಯ ಚೆನ್ನಾಗಿದೆ” ಎಂದಿದ್ದಾರೆ.

“ಅನುಶ್ರೀ ಮದುವೆಗೆ ಹೋಗಿ ಶುಭಾಶಯ ಹೇಳಿದ್ದು ಸಾಕಾಗಲಿಲ್ಲ. ಎರಡು ದಿನಗಳ ಕಾಲ ಫೋನ್‌ ಮಾಡಿದ್ರೂ ಕೂಡ ಅನುಶ್ರೀ ಫೋನ್ ಸ್ವಿಚ್‌ಆಫ್‌‌ ಬಂತು. ಮೂರನೇ ದಿನ ಫೋನ್‌ ಮಾಡಿದಾಗ ಅವರಿಗೆ ವಿಶ್‌ ಮಾಡಿದೆ, ಆಗ ನಾನು ಡಿಸ್ಟರ್ಬ್‌ ಮಾಡಿದೆ ಅನಿಸತ್ತೆ ಅಂತ ಹೇಳಿದೆ” ಎಂದು ಶರಣ್‌ ಅವರು ಹೇಳಿದ್ದಾರೆ.

ವರುಣ್‌ ಗೌಡ ಯಾರು?

ವರುಣ್‌ ಗೌಡ ಅವರು ಪುನೀತ್‌ ರಾಜ್‌ಕುಮಾರ್‌ ಕುಟುಂಬದ ಆಪ್ತರು. ಅಪ್ಪು ಅಂದರೆ ವರುಣ್‌ಗೆ ತುಂಬ ಇಷ್ಟ. ವರುಣ್‌ ಅವರು ಜೀ ಕನ್ನಡದ ಅನೇಕ ಇವೆಂಟ್‌ಗಳನ್ನು ಮಾಡಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳ ಜೊತೆ ಉತ್ತಮ ಒಡನಾಟ ಹೊಂದಿರುವ ವರುಣ್‌ ಗೌಡ ಅವರು ಪಬ್‌ ಮಾಲೀಕರು ಕೂಡ ಹೌದು. ಅಷ್ಟೇ ಅಲ್ಲದೆ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಎನ್ನುವ ಸಿನಿಮಾಕ್ಕೆ ಹಣ ಕೂಡ ಹೂಡಿದ್ದಾರೆ. ಅಷ್ಟೇ ಅಲ್ಲದೆ ಅವರು ನಟಿ ಕಾವ್ಯಾ ಶಾ ಪತಿ ಕೂಡ ಹೌದು.

ಆಗಸ್ಟ್‌ 28ರಂದು ಬೆಂಗಳೂರಿನ ಹೊರವಲಯದಲ್ಲಿ ಅನುಶ್ರೀ ಮದುವೆ ನಡೆದಿತ್ತು. ಐಟಿ ಉದ್ಯಮಿ ರೋಶನ್‌ ಜೊತೆ ಅನುಶ್ರೀ ಮದುವೆಯಾಗಿದೆ. ಅನುಶ್ರೀ, ರೋಶನ್‌ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಶನ್‌ ಭೇಟಿ ಆಗಿತ್ತಂತೆ. ಈ ಮದುವೆಯಲ್ಲಿ ಚಿತ್ರರಂಗದ ಕೆಲ ಗಣ್ಯರು ಆಗಮಿಸಿದ್ದರು.