- Home
- Entertainment
- TV Talk
- ಇಂಥ ಹೆಂಡ್ತಿ ಸಿಗೋದು ಸಿನಿಮಾ, ಧಾರವಾಹಿ, ಕಾದಂಬರಿಗಳಲ್ಲಿ ಮಾತ್ರ: ರಾಣಿ ಬಗ್ಗೆ ವೀಕ್ಷಕರು ಹೀಗಂದಿದ್ದೇಕೆ?
ಇಂಥ ಹೆಂಡ್ತಿ ಸಿಗೋದು ಸಿನಿಮಾ, ಧಾರವಾಹಿ, ಕಾದಂಬರಿಗಳಲ್ಲಿ ಮಾತ್ರ: ರಾಣಿ ಬಗ್ಗೆ ವೀಕ್ಷಕರು ಹೀಗಂದಿದ್ದೇಕೆ?
Netizens Flood Comments on Rani: ಮನುವನ್ನ ಮದುವೆಯಾಗಿ ಮನೆಗೆ ಬಂದ ಮೇಲೆ ಮೊದ ಮೊದಲು ಧೈರ್ಯದಿಂದಲೇ ಇದ್ದ ರಾಣಿ ಈಗ ದಡ್ಡಿಯ ರೀತಿ ವರ್ತಿಸುತ್ತಿದ್ದಾಳೆ ಎಂಬುದು ವೀಕ್ಷಕರ ಅನಿಸಿಕೆ. ಆದರೆ ಕೆಲವರು ರಾಣಿ ಪರವಾಗೂ ಬ್ಯಾಟ್ ಬೀಸಿರುವುದನ್ನ ನೀವಿಲ್ಲಿ ನೋಡಬಹುದು.

ಮೊದಲು ಹೀಗಿತ್ತು ರಾಣಿ ಪಾತ್ರ
'ಅಣ್ಣಯ್ಯ' ಧಾರಾವಾಹಿಯಲ್ಲಿ ಅಣ್ಣಯ್ಯನ ನಾಲ್ವರು ತಂಗಿಯರ ಪೈಕಿ ರಾಣಿ ಬಹಳ ಬುದ್ಧಿವಂತೆ ಎಂದೇ ಮೊದಲಿನಿಂದಲೂ ತೋರಿಸಲಾಗಿದೆ. ಮುಗ್ಧ ಮನುವನ್ನ ಮದುವೆಯಾಗುವ ಮುನ್ನ ಮನೆಯ ಹಣಕಾಸು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಳು ರಾಣಿ.
ದಡ್ಡಿಯ ರೀತಿ ವರ್ತನೆ
ಮನುವನ್ನ ಮದುವೆಯಾಗಿ ಮನೆಗೆ ಬಂದ ಮೇಲೆ ಮೊದ ಮೊದಲು ಧೈರ್ಯದಿಂದಲೇ ಇದ್ದ ರಾಣಿ ಈಗ ದಡ್ಡಿಯ ರೀತಿ ವರ್ತಿಸುತ್ತಿದ್ದಾಳೆ ಎಂಬುದು ವೀಕ್ಷಕರ ಅನಿಸಿಕೆ. ಅಷ್ಟೇ ಅಲ್ಲ, ಇಂಥ ಹೆಂಡತಿ ಈಗಿನ ಕಾಲದಲ್ಲಿ ಎಲ್ಲಿ ಸಿಗ್ತಾಳೆ ಅಂತಿದ್ದಾರೆ. ಅಷ್ಟಕ್ಕೂ ವೀಕ್ಷಕರು ಈ ರೀತಿ ಬೇಸರ ಹೊರಹಾಕಲು ಕಾರಣವೇನು?.
ಒಂದು ಹೊತ್ತು ಊಟಕ್ಕೂ ಪರದಾಟ
ಸದ್ಯ ರಾಣಿ ಗಂಡನ ಮನೆಯಲ್ಲಿ ಖುಷಿಯಾಗಿಲ್ಲ. ಆಕೆಯ ಅಕ್ಕ-ಭಾವ, ಅಜ್ಜಿ ಎಲ್ಲರೂ ಸೇರಿ ರಾಣಿ, ಗಂಡ ಮನು ಹಾಗೂ ಅತ್ತೆಯನ್ನು ಆಚೆ ಹಾಕಿದ್ದು, ಅವರು ಒಂದು ಮೂಲೆಯಲ್ಲಿ ಕೂರುವ ಹಾಗಿದೆ. ಅಷ್ಟೇ ಅಲ್ಲ, ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ.
ಹೊಸ ಕೆಲಸದವಳನ್ನ ತಂದಿದ್ದಾರೆ ಡೈರೆಕ್ಟರ್!
ಇದನ್ನೆಲ್ಲಾ ನೋಡಿದ ವೀಕ್ಷಕರಿಗೆ ಬೋರು ತರಿಸುತ್ತಿದೆ ಧಾರಾವಾಹಿ. ಹಾಗಾಗಿ ಅವರು ನಿರ್ದೇಶಕರಲ್ಲಿ ವಿನಂತಿ ಮಾಡಿಕೊಳ್ಳುವರ ಜೊತೆಗೆ ಏನೆಲ್ಲಾ ಕಾಮೆಂಟ್ ಮಾಡಿದ್ದಾರೆ ನೋಡಿ. ಕೆಲವು ಬಳಕೆದಾರರು "ಮನೆ ಆಳ ಬೇಕಿದ್ದವಳು... ಮನೆ ಆಳಿಗಿಂತ ಕಡೆ ಆಗಿದ್ದಾಳೆ!!ಒಟ್ನಲ್ಲಿ ಈ ಮದುವೆ ಮಾಡಿಸಿ ಅಮ್ಮ ಮಗನ ಜೊತೆಗೆ ಹೊಸ ಕೆಲಸದವಳನ್ನ ತಂದಿದ್ದಾರೆ ಡೈರೆಕ್ಟರ್!" ಎಂದರೆ ಮತ್ತೆ ಕೆಲವರು "ಇಂಗೆ ಕಾಲು ಒತ್ಕೊಂಡು ಹೋಗಿ.. ಇದೆ ಸರಿ ನಿಮಗೆ, ರಾಣಿ ಬುದ್ಧಿವಂತೆನ ಇಲ್ಲ ದಡ್ಡಳ" ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.
ಇಂಥ ಹೆಂಡತಿ ಸಿಗೋದು ಸಿನಿಮಾಗಳಲ್ಲಿ
ಹಾಗೆಯೇ ರಾಣಿ ಈ ರೀತಿ ಅತಿ ವಿನಯವಾಗಿ ನಡೆದುಕೊಳ್ಳುತ್ತಿರುವುದು ವೀಕ್ಷಕರಿಗೆ ಅತಿ ಅನಿಸಿದೆ. ಹಾಗಾಗಿ "ಇಂಥ ಹೆಂಡತಿ ಸಿಗೋದು ಸಿನಿಮಾ.. ಧಾರಾವಾಹಿ.. ಕಥೆ ಕಾದಂಬರಿಗಳಲ್ಲಿ ಮಾತ್ರ.. ನಿಜ ಜೀವನದಲ್ಲಿ ಸಿಗೋದು ಅಪರೂಪಕ್ಕೆ ಅಪರೂಪವೇ ಸರಿ.. ಅಲ್ವಾ?", "ಇದು ಜಾಸ್ತಿ ಆಯಿತು ಇದೆಲ್ಲ ಯಾರ್ ಮಾಡುತ್ತಾರೆ", "ನಿರ್ದೇಶಕರೇ ಈಗಿನ ಕಾಲದಲ್ಲೂ ಈ ತರ ರಾಣಿ ಇದ್ದಾಳಲ್ಲ ಎಂಬುದೇ" ಭ್ರಮೆ ಎಂದಿದ್ದಾರೆ.
ದೊರೆ ಎಂದು ಕರೆಯೋದೆ ಚೆನ್ನ
ರಾಣಿ ಪರವಾಗೂ ಬ್ಯಾಟ್ ಬೀಸಿರುವ ಪ್ರೇಕ್ಷಕರು, "ಇದು ಪ್ರೀತಿ ಅಂದ್ರೆ ಅರ್ಥ ಮಾಡಿಕೊಳ್ಳೋ ಮನಸ್ಸು ಬೇಕು", "ರಾಣಿ ದೊರೆ ಅನ್ನೋ ಕರೆಯಲ್ಲಿ ಅದೇನೋ ಆತ್ಮೀಯತೆ ಇದೆ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ತಿರುವು ಪಡೆದುಕೊಳ್ಳಲಿದೆ
ಸದ್ಯ ಧಾರಾವಾಹಿಯಲ್ಲಿ ರಾಣಿಗೆ ಈ ಪರಿಸ್ಥಿತಿ ಎದುರಾದರೂ ಮುಂದಿನ ದಿನಗಳಲ್ಲಿ ಆಕೆ ಮನುವಿನ ಜೊತೆ ರಾಣಿಯ ತರಹ ಬದುಕುತ್ತಾಳೆ ಅಂತ ಧಾರಾವಾಹಿಯಲ್ಲಿ ಹಿಂದೊಮ್ಮೆ ಜ್ಯೋತಿಷಿಗಳು ನುಡಿದ್ದನ್ನು ನಾವಿಲ್ಲಿ ಗಮನಿಸಬಹುದು. ಹಾಗಾಗಿ ಧಾರಾವಾಹಿಗಳು ಯಾವಾಗ, ಯಾವ ರೀತಿ ತಿರುವು ಪಡೆದುಕೊಳ್ಳುತ್ತವೆ ಎಂಬುದನ್ನು ಮುಂದೆ ಕಾದು ನೋಡಬೇಕಿದೆ ಅಲ್ಲವೇ.