- Home
- Entertainment
- TV Talk
- Amruthadhaare Serial: ದಿಯಾಗೆ ಬುದ್ದಿ ಹೇಳಿದ ಅಪೇಕ್ಷಾ… ದಿನ ಕಳೆದಂತೆ ಭೂಮಿಕಾ ಆಗಿ ಬದಲಾಗ್ತಿದ್ದಾಳೆ ಅಪ್ಪಿ
Amruthadhaare Serial: ದಿಯಾಗೆ ಬುದ್ದಿ ಹೇಳಿದ ಅಪೇಕ್ಷಾ… ದಿನ ಕಳೆದಂತೆ ಭೂಮಿಕಾ ಆಗಿ ಬದಲಾಗ್ತಿದ್ದಾಳೆ ಅಪ್ಪಿ
ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಅಪೇಕ್ಷಾ ಪಾತ್ರವು ತುಂಬಾನೆ ಬದಲಾಗಿದೆ. ಈ ಮೊದಲು ಭೂಮಿಕಾ ಮುಂದೆ ಎದುರು ಮಾತನಾಡುತ್ತಿದ್ದ ಅಪೇಕ್ಷಾ ಇದೀಗ ತಾನೇ ಭೂಮಿಕಾ ಆಗಿ ಬದಲಾಗಿದ್ದಾಳೆ. ದಿಯಾಗೆ ಬುದ್ದಿ ಹೇಳುವಾಗ ಇದು ಭೂಮಿಯೇ ಎನ್ನುವಂತೆ ಕಾಣಿಸಿಕೊಂಡಿದ್ದಾರೆ.

ಅಮೃತಧಾರೆ ಸೀರಿಯಲ್
ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare) ಅಪ್ಪಿ ಅಪೇಕ್ಷಾ ಪಾತ್ರ ಸಂಪೂರ್ಣವಾಗಿ ಬದಲಾಗಿದೆ. ಮದುವೆಯಾದ ಬಳಿಕ ಅಕ್ಕನ ಮುಂದೆ ಸಿಕ್ಕಾಪಟ್ಟೆ ಅಹಂಕಾರ ತೋರಿಸುತ್ತಾ, ತಾನು ನಡೆದಿದ್ದೇ ದಾರಿ ಎನ್ನುತ್ತಿದ್ದ ಅಪೇಕ್ಷಾ ಈಗ ತುಂಬಾನೆ ಸಾಫ್ಟ್ ಆಗಿದ್ದಾಳೆ.
ಭೂಮಿಕಾ ಆಗಿ ಬದಲಾದ ಅಪ್ಪಿ
ಅಪ್ಪಿ ಎಷ್ಟು ಬದಲಾಗಿದ್ದಾಳೆ ಅಂದ್ರೆ, ಆಕೆಯನ್ನು ನೋಡುತ್ತಿದ್ದರೆ ಭೂಮಿಕಾಳೆ ನೆನಪಾಗುವಂತಿದೆ. ಯಾಕಂದ್ರೆ ಅಪೇಕ್ಷಾ ಭೂಮಿಕಾಳಂತೆ ಯೋಚನೆ ಮಾಡಿ ಮಾತನಾಡುತ್ತಾಳೆ. ಅಕ್ಕನಂತೆ ನಡೆ ನುಡಿ ಎಲ್ಲವೂ ಬದಲಾಗಿದೆ.
ದಿಯಾಗೆ ಬುದ್ದಿ ಹೇಳಿದ ಅಪೇಕ್ಷಾ
ಗಂಡನಿಗೆ ಡ್ರಿಂಕ್ಸ್ ತಯಾರಿಸಿ ಕೊಡುತ್ತಿರುವ ದಿಯಾಳನ್ನು ನೋಡಿ ಅಪ್ಪಿ ಬುದ್ದಿಮಾತು ಹೇಳುತ್ತಾ, ನೀವು ಜೈದೇವ್ ಹೆಂಡ್ತಿಯಾಗಿ, ಅವರಿಗೆ ಬುದ್ದಿ ಮಾತು ಹೇಳಿ ಕಂಟ್ರೋಲಲ್ಲಿ ಇಡೋದು ಬಿಟ್ಟು, ನೀವೆ ಬೆಳಿಗ್ಗೆ ಬೆಳಿಗ್ಗೆ ಕುಡೀಯೋಕೆ ಕೊಡೋದು ಸರೀನಾ ಎನ್ನುವ ಪ್ರಶ್ನೆ ಕೇಳುತ್ತಾಳೆ.
ಮಿಡಲ್ ಕ್ಲಾಸ್ ಜನ ಎಂದ ದಿಯಾಗೆ ಎದುರೇಟು
ಅಪ್ಪಿ ಬುದ್ದಿ ಮಾತಿಗೆ ಕೋಪದಿಂದ ದಿಯಾ ನೀವು ಮಿಡಲ್ ಕ್ಲಾಸ್ ಎಂದು ಹೇಳಿದಾಗ ತಿರುಗೇಟು ನೀಡುವ ಅಪೇಕ್ಷಾ ಒಂದು ವಿಷ್ಯ ನೆನಪಿರಲಿ, ಲೋ ಕ್ಲಾಸ್ ಇರಲಿ, ಹೈ ಕ್ಲಾಸ್ ಇರಲಿ ಬದುಕೋದಕ್ಕೆ ವ್ಯಾಲ್ಯೂಸ್ ತುಂಬಾನೆ ಮುಖ್ಯ. ನಮ್ಮ ಸ್ಟೇಟಸ್ ಅನ್ನೋದು ಕ್ಲಾಸ್ ನೋಡಿ ಡಿಸೈಡ್ ಆಗೋದು ಅಲ್ಲ, ನಾವು ಹೇಗೆ ಇದ್ದೀವಿ ಅನ್ನೋದರ ಮೇಲೆ ಡಿಸೈಡ್ ಆಗೋದು ಎನ್ನುತ್ತಾಳೆ.
ಅಪೇಕ್ಷಾಗೆ ಪ್ರೇಕ್ಷಕರ ಮೆಚ್ಚುಗೆ
ಅಪ್ಪಿ ಮಾತು ಕೇಳಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದು, ನೀವು ಕಣ್ರೀ ನಮ್ ಭೂಮಿ ತಂಗಿ , ಸೂಪರ್ ಅಪ್ಪಿ, ಸೇಮ್ ಭೂಮಿ ಥರಾ, ಅದೇ ರೋಷ, ಅದೇ ಮಾತು, ಅಪೇಕ್ಷಾ ಭೂಮಿ ಥರಾನೇ ಮಾತನಾಡ್ತಿದ್ದೀಯಾ, ಖುಷಿಯಾಯ್ತು ನಿನ್ನ ನೋಡಿ ಎಂದಿದ್ದಾರೆ.
ಅಪೇಕ್ಷಾ ಪಾತ್ರದಲ್ಲಿ ಅಮೃತಾ ನಾಯ್ಕ್
ಅಪೇಕ್ಷಾ ಪಾತ್ರದಲ್ಲಿ ನಟಿ ಅಮೃತಾ ನಾಯ್ಕ್ (Amrutha Naik) ನಟಿಸಿದ್ದಾರೆ. ಇವರು ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮಾಂಗಲ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.