- Home
- Entertainment
- TV Talk
- Amruthadhaare Serial: ದಿಯಾ ಬೇಬಿ ಕೈಕೊಟ್ಮೇಲೆ, ಜಯದೇವ್ ಇವರ ಜೊತೆಯೇ ಬಾಳೋದು ಗ್ಯಾರಂಟಿ!
Amruthadhaare Serial: ದಿಯಾ ಬೇಬಿ ಕೈಕೊಟ್ಮೇಲೆ, ಜಯದೇವ್ ಇವರ ಜೊತೆಯೇ ಬಾಳೋದು ಗ್ಯಾರಂಟಿ!
ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಮನೆಯನ್ನು ತಾನೇ ಕಂಟ್ರೋಲ್ ಮಾಡಬೇಕು ಎನ್ನೋದು ದಿಯಾ ಆಸೆ. ಹೀಗಾಗಿ ಅವಳು ದಿನದಿಂದ ದಿನಕ್ಕೆ ಹೊಸ ಆಟ ಶುರು ಮಾಡಿದ್ದಾಳೆ. ಹಾಗಾದರೆ ಕೊನೆತನಕ ಜಯದೇವ್‌ಗೆ ಹೆಂಡ್ತಿ ಆಗಿ ಇರೋರು ಯಾರು?

ಜಯದೇವ್‌ಗೆ ಮಲ್ಲಿ ಮೇಲೆ ಲವ್
ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿ ಮೇಲೆ ಜಯದೇವ್ ಕಣ್ಣು ಬಿತ್ತು. ಪ್ರೀತಿ ನಾಟಕ ಮಾಡಿ, ಅವನು ಅವಳನ್ನು ಗರ್ಭಿಣಿ ಮಾಡಿದನು. ಅದಾದ ಬಳಿಕ ಭೂಮಿಕಾ ತಂಗಿ ಅಪೇಕ್ಷಾ ಜೊತೆ ಮದುವೆ ಆಗಬೇಕು ಅಂತ ಪ್ಲ್ಯಾನ್ ಮಾಡಿದ್ದನು. ಇದು ಭೂಮಿಗೆ ಗೊತ್ತಾಗಿ, ಅವಳು ಈ ಮದುವೆ ತಡೆದಳು. ಕೊನೆಗೂ ಮಲ್ಲಿ ಜೊತೆ ಜಯದೇವ್ ಮದುವೆ ಆಯ್ತು.
ಜಯದೇವ್‌ಗೆ ಹೆಣ್ಣು ಮಕ್ಕಳ ಚಾಳಿ
ಜಯದೇವ್ ಮದುವೆ ಆದಬಳಿಕವೂ ಸುಧಾರಿಸಲಿಲ್ಲ. ಅವನಿಗೆ ಹೆಣ್ಣು ಮಕ್ಕಳ ಚಾಳಿ ಇತ್ತು. ಹೀಗಾಗಿ ಅವನು ದಿಯಾಳ ಜೊತೆ ಪ್ರೀತಿಯಲ್ಲಿ ಬಿದ್ದನು. ಯಾರು ಏನೇ ಹೇಳಿದರೂ ಕೂಡ ಕೇಳದೆ ದಿಯಾಳನ್ನು ಮದುವೆಯಾದನು. ಈಗ ಮಲ್ಲಿ, ಮತ್ತೊಂದು ಮದುವೆ ಆಗದೆ ಭೂಮಿಕಾ ಜೊತೆ ಬದುಕುತ್ತಿದ್ದಾಳೆ.
ಶಕುಂತಲಾ ಕಂಡರೆ ದಿಯಾಗೆ ಆಗೋದಿಲ್ಲ
ಗೌತಮ್ ಈಗ ಮನೆಯಿಂದ ದೂರ ಆಗಿದ್ದಾನೆ, ಆದರೆ ಜಯದೇವ್-ಶಕುಂತಲಾ ಸೇರಿಕೊಂಡು ಆಸ್ತಿಯನ್ನು ಕರಗಿಸುತ್ತಿದ್ದಾರೆ. ಕ್ಲಬ್‌ಗೆ ಹೋಗಿ ದಿನಕ್ಕೆ ಮೂರು ಕೋಟಿ ರೂಪಾಯಿ ಖಾಲಿ ಮಾಡುತ್ತಿದ್ದಾರೆ. ದುಡ್ಡಿದೆ ಎಂದು ಈ ರೀತಿ ಹಣ ಖರ್ಚು ಮಾಡುತ್ತಿರೋದು ದಿಯಾಗೆ ಇಷ್ಟವೇ ಆಗ್ತಿಲ್ಲ. ಹೀಗಾಗಿ ಅವಳು ಎಚ್ಚರಿಕೆ ಕೊಟ್ಟಿದ್ದಳು.
ದಿಯಾ ಉದ್ದೇಶ ಏನು?
ತಾನು ಮನೆ ಆಳಬೇಕು ಅಂತ ದಿಯಾ ಕನಸು ಕಂಡಿದ್ದಳು. ಆದರೆ ಇಲ್ಲಿ ಶಕುಂತಲಾ ಹೇಳಿದ್ದೇ ನಡೆಯಬೇಕು. ಇದರಿಂದ ದಿಯಾ ಬೇಸರ ಮಾಡಿಕೊಂಡಿದ್ದಾಳೆ. ತನ್ನನ್ನು ತಾನು ಬಚಾವ್ ಮಾಡಿಕೊಳ್ಳಬೇಕು, ದುಡ್ಡು ಮಾಡಬೇಕು ಎಂದು ಅವಳು ನೋಡುತ್ತಿದ್ದಾಳೆ. ಹೀಗಾಗಿ ಜಯದೇವ್‌ಗೆ ಪದೇ ಪದೇ ಡ್ರಿಂಕ್ಸ್ ಕುಡಿಸುತ್ತಾಳೆ.
ದಿಯಾ ಮುಖವಾಡ ಬಯಲಾಗತ್ತೆ
ಮುಂದೊಂದು ದಿನ ದಿಯಾ ಏನು ಅಂಥ ಎಲ್ಲರಿಗೂ ಗೊತ್ತಾಗುವುದು. ಆಗ ಅವಳು ಆ ಮನೆಯಿಂದ ಹೊರಗಡೆ ಬರಬಹುದು. ದಿಯಾ ನಂಬಿದ್ದಕ್ಕೆ, ಅವಳಿಗೋಸ್ಕರ ಮಲ್ಲಿಗೆ ಮೋಸ ಮಾಡಿದ್ದಕ್ಕೆ, ದಿಯಾಳನ್ನು ಮದುವೆ ಆಗಿದ್ದಕ್ಕೆ ಜಯದೇವ್ ಪಶ್ಚಾತ್ತಾಪ ಕೂಡ ಪಡಬಹುದು. ಒಟ್ಟಿನಲ್ಲಿ ದಿಯಾಗಂತೂ ಶಿಕ್ಷೆ ಆಗುವುದು.
ಮಲ್ಲಿ ಜೊತೆ ಮತ್ತೆ ಜಯದೇವ್ ಬದುಕ್ತಾನಾ?
ಇನ್ನೊಂದು ಕಡೆ ಮಲ್ಲಿ ಮಾತ್ರ ಎರಡನೇ ಮದುವೆ ಆಗಿಲ್ಲ. ಎರಡನೇ ಮದುವೆ ಆಗು, ನಿನ್ನ ಜೀವನ ನೀನು ರೂಪಿಸಿಕೋ ಅಂತ ಭೂಮಿಕಾ ಹೇಳಿದರೂ ಕೂಡ, ಮಲ್ಲಿ ಮಾತ್ರ ಕೇಳುತ್ತಿಲ್ಲ. ಆದಷ್ಟು ಬೇಗ ದಿಯಾ ಮುಖವಾಡ ಹೊರಗಡೆ ಬಂದರೆ, ಜಯದೇವ್‌ಗೆ ತನ್ನ ತಪ್ಪು ಅರಿವಾದರೆ ಅವನು ಮಲ್ಲಿ ಜೊತೆಯೇ ಇರಬಹುದು, ಸಂಸಾರ ಮಾಡಬಹುದು.