- Home
- Entertainment
- TV Talk
- Amruthadhaare Serial: ಭೂಮಿಯೇ ಇಬ್ಭಾಗ ಆಗೋ ಶಾಕ್ ಸಿಕ್ಕಮೇಲೆ ಗೌತಮ್‌ನಿಂದ ದೂರ ಹೋಗ್ತಾಳಾ ಭೂಮಿಕಾ?
Amruthadhaare Serial: ಭೂಮಿಯೇ ಇಬ್ಭಾಗ ಆಗೋ ಶಾಕ್ ಸಿಕ್ಕಮೇಲೆ ಗೌತಮ್‌ನಿಂದ ದೂರ ಹೋಗ್ತಾಳಾ ಭೂಮಿಕಾ?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಮಹಾಸತ್ಯ ಗೊತ್ತಾಗಿದೆ. ಮುಂದೆ ಅವಳು ಏನ್ ಮಾಡ್ತಾಳೆ? ಗೌತಮ್‌ನಿಂದ ದೂರ ಆಗ್ತಾಳಾ? ಮನೆ ಬಿಟ್ಟು ಹೋಗ್ತಾಳಾ ಎಂಬ ಪ್ರಶ್ನೆ ಎದುರಾಗಿದೆ.

ಅಮೃತಧಾರೆ ಧಾರಾವಾಹಿಯಲ್ಲಿ ಮಗನಿಗೆ ಸಣ್ಣ ಸಮಸ್ಯೆ ಆದರೂ ಕೂಡ ದೊಡ್ಡದೇನೋ ಆಯ್ತು ಅಂತ ಭೂಮಿ ಗಾಬರಿಯಾಗಿದ್ದನ್ನು ಎಲ್ಲರೂ ನೋಡಿದ್ದಾರೆ. ಹೀಗಿರುವಾಗ ಭೂಮಿಗೆ ತನಗೆ ಮಗಳು ಹುಟ್ಟಿರೋದು ಗೊತ್ತಾಗಿದೆ, ಅದನ್ನು ಶಕುಂತಲಾ ಮುಗಿಸಿರೋದು ಗೊತ್ತಾಗಿದೆ. ಹಾಗಾದರೆ ಈಗ ಅವಳ ಮುಂದಿನ ನಡೆ ಏನು?
ಭೂಮಿಗೆ ಅವಳಿ ಮಕ್ಕಳು ಹುಟ್ಟಿದ್ದರು. ಹೆಣ್ಣು ಮಗುವನ್ನು ಶಕುಂತಲಾ ಕದ್ದು ಕಾಡಿನಲ್ಲಿ ಬಿಟ್ಟರು. ಹುಲಿಯೋ ಇನ್ಯಾವುದೋ ಪ್ರಾಣಿಯೋ ತಿಂದಿರಬಹುದು ಎಂದು ಬಹಳ ಸುಲಭವಾಗಿ ಶಕುಂತಲಾ ಹೇಳಿದ್ದಾಳೆ. ಇದನ್ನು ಕೇಳಿ ಭೂಮಿಗೆ ನಡುಕ ಬಂದಿದೆ.
ನನ್ನ ಹಾಗೂ ಗಂಡನ ಮಧ್ಯೆ ಯಾವುದೇ ಸೀಕ್ರೇಟ್ ಇಲ್ಲ ಎಂದು ಯಾವಾಗಲೂ ಬೀಗುತ್ತೀಯಾ. ಆದರೆ ಸತ್ಯ ಹಾಗಿಲ್ಲ. ನಿನಗೆ ಮಗು ಹುಟ್ಟಿರೋದು, ಆ ಮಗುವನ್ನು ಕಳೆದುಕೊಂಡಿರೋದನ್ನು ಗೌತಮ್ ನಿನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ಭೂಮಿ ಬಳಿ ಶಕುಂತಲಾ ಹೇಳಿದ್ದಾಳೆ.
ಇನ್ನೊಂದು ಕಡೆ ಗೌತಮ್ ವಿದೇಶಕ್ಕೆ ಟ್ರಿಪ್ ಹೋಗಿದ್ದಾನೆ. ಈಗ ಭೂಮಿಕಾ ಮತ್ತೆ ಮಗಳ ಬಗ್ಗೆ ಹುಡುಕಾಟ ಮಾಡಿದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಅಳುತ್ತ ಭೂಮಿ ಹಾಗೆ ಕೂರೋದು ಡೌಟ್ ಎನ್ನಬಹುದು.
ಗಂಡನೇ ಇಷ್ಟು ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದಾನೆ, ಮಗಳ ಬಗ್ಗೆ ತಿಳಿದುಕೊಳ್ಳೋ ಹಕ್ಕು ನಮಗೆ ಇಲ್ವಾ ಎಂದು ಬೇಸರ ಮಾಡಿಕೊಂಡು ಅವಳು ತವರು ಮನೆಗೆ ಹೋಗಿ ಕೂತರೂ ಆಶ್ಚರ್ಯವಿಲ್ಲ. ಮಗಳ ಜೀವಕ್ಕೆ ಹಾನಿ ಮಾಡಿದ ಶಕುಂತಲಾ, ಜಯದೇವ್‌ಗೆ ಭೂಮಿ ತಕ್ಕ ಪಾಠ ಕಲಿಸಿದರೂ ಕಲಿಸಬಹುದು. ಇನ್ನೊಂದು ಕಡೆ ಭೂಮಿಯ ನಡೆ ಹೇಗಿರಬಹುದು? ಏನಾಗಿರಬಹುದು ಎಂಬ ಕುತೂಹಲ ಶುರುವಾಗಿದೆ.