- Home
- Entertainment
- TV Talk
- Amruthadhaare Serial: ಜೊತೆಗಿದ್ದುಕೊಂಡೇ ಜಯದೇವ್‌ಗೆ ಖೆಡ್ಡಾ ತೋಡಿದ ದಿಯಾ! ಮಾಡಿದ್ದುಣ್ಣೋ ಮಾರಾಯ!
Amruthadhaare Serial: ಜೊತೆಗಿದ್ದುಕೊಂಡೇ ಜಯದೇವ್‌ಗೆ ಖೆಡ್ಡಾ ತೋಡಿದ ದಿಯಾ! ಮಾಡಿದ್ದುಣ್ಣೋ ಮಾರಾಯ!
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ನನ್ನು ದಿಯಾ ಪ್ರೀತಿಸಿ ಮದುವೆಯಾಗಿಲ್ಲ. ಆ ಮನೆಗೆ ಅವಳು ಬರೋಕೆ ಬೇಎಎ ಕಾರಣವೇ ಇದೆ. ಈಗ ಅವಳ ನಿಜವಾದ ಉದ್ದೇಶ ಏನು ಎನ್ನೋದು ಬಹಿರಂಗ ಆಗ್ತಿದೆ.

ಮುಖವಾಡ ಬಯಲು
ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ನನ್ನು ಮದುವೆಯಾಗಿರೋ ದಿಶಾ, ಬೇರೆ ಕುತಂತ್ರವನ್ನು ಮಾಡಿದ್ದಾಳೆ. ದೊಡ್ಡ ಹುನ್ನಾರ ನಡೆಸಿ, ಅವಳು ಜಯದೇವ್‌ನನ್ನು ಬುಟ್ಟಿಗೆ ಬೀಳಿಸಿಕೊಂಡಳು, ಮದುವೆಯಾದಳು. ಈಗ ಅವಳ ಮುಖವಾಡ ಬಯಲಾಗ್ತಿದೆ.
ಜಯದೇವ್ ಹೊಸ ಪ್ಲ್ಯಾನ ಏನು?
ಈಗಾಗಲೇ 600 ಕೋಟಿ ರೂಪಾಯಿ ಸಾಲ ಇದೆ. ಈಗ ಇರುವ ಪ್ರಾಪರ್ಟಿಯನ್ನು ಮಾರಿ ಸಾಲ ತೀರಿಸಬಹುದು. ಆದರೆ ಇದೇ ಆಸ್ತಿ ಮುಂದೆ ಎರಡು ವರ್ಷಗಳಲ್ಲಿ ಇನ್ನಷ್ಟು ಡಬಲ್ ಆಗುತ್ತದೆ. ಬ್ಯಾಂಕ್‌ನಿಂದ ಸಾಲ ತೀರಿಸೋಕೆ ಸ್ವಲ್ಪ ಟೈಮ್ ತಗೊಂಡರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಕೇಡಿ ಜಯದೇವ್ ಪ್ಲ್ಯಾನ್ ಮಾಡಿದ್ದಾನೆ.
ಜಯದೇವ್ ಕುತಂತ್ರ
ಈ ರೀತಿ ಸಾಲ ಮಾಡಿರೋದು, ಇನ್ನೊಂದು ಕಡೆ ಮನಸ್ಸಿಗೆ ಬಂದಂತೆ ಹಣ ಖಾಲಿ ಮಾಡ್ತಿರೋದು ನೋಡಿ ಪಾರ್ಥ, ಅಪೇಕ್ಷಾಗೆ ಬೇಸರ ತಂದಿದೆ. ಗೌತಮ್ ಹೆಸರು ಹೇಳಿಕೊಂಡು ಬದುಕಬೇಕಿರೋ ಇವರು, ಇನ್ನೊಂದಿಷ್ಟು ಮೋಸ ಮಾಡಲು ರೆಡಿಯಾಗಿದ್ದಾರೆ ಎಂದು ಅಪೇಕ್ಷಾ ಆಕ್ರೋಶ ಹೊರಹಾಕಿದ್ದಳು.
ದಿಯಾಗೆ ಯಾಕೆ ಸಿಟ್ಟು?
ಈಗ ಶಕುಂತಲಾ ಪ್ರೆಸ್ಟೀಜ್, ಸ್ಟೇಟಸ್ ಹೆಸರಿನಲ್ಲಿ ದಿನಕ್ಕೆ ಮೂರು ಕೋಟಿ ರೂಪಾಯಿ ಹಣವನ್ನು ಖಾಲಿ ಮಾಡಿದ್ದಾಳೆ. ಈ ರೀತಿ ಹಣ ಖರ್ಚು ಮಾಡಿದರೆ ನನ್ನ ಕಥೆ ಅಷ್ಟೇ ಅಂತ ದಿಯಾ ಫಿಕ್ಸ್ ಆಗಿದ್ದಾಳೆ. “ಸಾಲ ಇದೆ, ಹಣ ಖಾಲಿ ಮಾಡುತ್ತ ಹೋದರೆ ಹೇಗೆ? ಕ್ಲಬ್‌ಗೆ ಹೋಗಿ ದಿನಕ್ಕೆ ಮೂರು ಕೋಟಿ ರೂಪಾಯಿ ಹಾಳು ಮಾಡ್ತಾರೆ ಅಂದ್ರೆ ಹೇಗೆ? ಮೂರು ಕೋಟಿ ರೂಪಾಯಿ ದುಡಿಯೋದು ಸುಲಭದ ಕೆಲಸವೇ?” ಎಂದು ಅವಳು ಜಯದೇವ್ ಬಳಿ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಜಯದೇವ್ ಇಲ್ಲ ಸಲ್ಲದ ಉತ್ತರ ಕೊಟ್ಟಿದ್ದನು.
ದಿಯಾ ಮುಂದಿನ ಪ್ಲ್ಯಾನ್ ಏನು?
ಈಗ ದಿಯಾಗೆ ತಾನು ಮುಳುವ ಹಡಗಿನಲ್ಲಿ ಇದ್ದೀನಿ ಅಂತ ಅರ್ಥ ಆಗಿದೆ. ಹೀಗಿದ್ದರೆ ನಾನು ಈ ಮನೆ ಆಳೋಕೆ ಆಗಲ್ಲ, ನನಗೆ ಬೇಕಾದಷ್ಟು ಹಣ ಸಿಗಲ್ಲ ಅಂತ ಅವಳು ಅರಿತಿದ್ದಾಳೆ. ನನಗೆ ಎಷ್ಟು ಬೇಕೋ ಅಷ್ಟು ಹಣ ಮಾಡಿಕೊಳ್ಳಬೇಕು, ಇಲ್ಲಿಂದ ಎಸ್ಕೇಪ್ ಆಗಬೇಕು ಅಂತ ಅವಳು ಫಿಕ್ಸ್ ಆಗಿದ್ದಾಳೆ. ಒಟ್ಟಿನಲ್ಲಿ ಜಯದೇವ್ ಮೇಲೆ ದಿಯಾಗೆ ಲವ್ ಇಲ್ಲ, ಅವಳು ದುಡ್ಡಿಗೋಸ್ಕರವರೇ ಇಷ್ಟೆಲ್ಲ ಮಾಡಿದ್ದು. ಮುಂದೆ ಇವರಿಗೆಲ್ಲ ಚಳ್ಳೆಹಣ್ಣು ತಿನಿಸಿ, ಮನೆಯಿಂದ ಹೊರಟಾಗ ಮಲ್ಲಿ ಜೊತೆಯೆ ಅವನು ಸಂಸಾರ ಮಾಡಬೇಕಾಗಿಬರಬಹುದು.