- Home
- Entertainment
- TV Talk
- Amruthadhaare Serial: ಒಂದಾದ ಗೌತಮ್- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?
Amruthadhaare Serial: ಒಂದಾದ ಗೌತಮ್- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?
'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಪ್ರೀತಿ ಇದ್ದರೂ ಇಗೋದಿಂದಾಗಿ ದೂರವಾಗಿದ್ದಾರೆ. ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಇಬ್ಬರೂ ಒಂದಾಗುವುದನ್ನು ತೋರಿಸಲಾಗಿದ್ದು, ಇದು ಕನಸಾಗಿರಬಹುದೆಂಬ ಅನುಮಾನದಿಂದ ವೀಕ್ಷಕರು ನಿರ್ದೇಶಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಅಡ್ಡಿ ಬಂದಿದೆ 'ಇಗೊ'
ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಸದ್ಯ ಭೂಮಿಕಾಳ ಇಗೋದಿಂದಾಗಿ ಗಂಡ-ಹೆಂಡತಿ ಒಂದೇ ವಠಾರದಲ್ಲಿ ಇದ್ದರೂ ಒಂದಾಗುತ್ತಿಲ್ಲ. ಇಬ್ಬರ ಮನಸ್ಸಿನಲ್ಲಿಯೂ ಪರಸ್ಪರ ಅಗಾಧ ಪ್ರೇಮ ಇದ್ದರೂ ಮಧ್ಯೆ ಇಗೋ ಎನ್ನುವುದು ಅಡ್ಡ ಬರುತ್ತಿರುವ ಕಾರಣ, ಕೋಳಿ ಜಗಳ ಆಡುತ್ತಲೇ ಇದ್ದಾರೆ.
ಹುಸಿ ಮುನಿಸು
ಸಂದರ್ಭ ಸಿಕ್ಕಾಗಲ್ಲೆಲ್ಲಾ ಭೂಮಿಕಾ, ಮಲ್ಲಿಯ ಎದುರು ಗೌತಮ್ನನ್ನು ಹೊಗಳುತ್ತಿದ್ದರೂ, ಆತ ಬಂದಾಗ ಮಾತ್ರ ಹುಸಿ ಮುನಿಸು ತೋರಿಸುತ್ತಲೇ ಇದ್ದಾಳೆ. ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಿ ಎಂದು ವೀಕ್ಷಕರು ಗೋಗರೆಯುತ್ತಲೇ ಇದ್ದಾರೆ.
ಒಂದಾದ ದಂಪತಿ?
ಆದರೆ, ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಗೌತಮ್, ಭೂಮಿಕಾ ಮನೆಗೆ ಬಂದಿದ್ದಾನೆ. ನಿದ್ರಿಸುತ್ತಿದ್ದ ಭೂಮಿಕಾ ಎಚ್ಚರಗೊಂಡು ಇಲ್ಯಾಕೆ ಬಂದ್ರಿ ಎಂದುಪ್ರಶ್ನಿಸಿದ್ದಾಳೆ. ಆಗ ಗೌತಮ್ ನಿಮ್ಮನ್ನು ನೋಡಲು ಎಂದು ಹೇಳಿ ಹೊರಡಲು ರೆಡಿಯಾದಾಗ, ಭೂಮಿಕಾ ಅವನ ಕೈ ಹಿಡಿದುಕೊಂಡಿದ್ದಾಳೆ.
ಅಪ್ಪಿಕೊಂಡ ಭೂಮಿಕಾ
ಕೊನೆಗೆ, ಆತನನ್ನು ಅಪ್ಪಿಕೊಂಡು ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡಿ. ಇಬ್ಬರೂ ಎಲ್ಲಿಯಾದರೂ ದೂರ ಹೊರಟುಹೋಗೋಣ ಎಂದಿದ್ದಾಳೆ. ಇದರ ಪ್ರೊಮೋ ಇದೀಗ ಬಿಡುಗಡೆಯಾಗಿದೆ.
ನಿರ್ದೇಶಕರಿಗೆ ಧಮ್ಕಿ
ಆದರೆ ಇದು ನಿಜ ಅಲ್ಲ, ಕನಸು ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ನಿರ್ದೇಶಕರಿಗೆ ನೆಟ್ಟಿಗರು ಧಮ್ಕಿ ಹಾಕುತ್ತಿದ್ದಾರೆ. ಒಂದು ವೇಳೆ ಇದು ನಿಜವಲ್ಲದೇ ಅವಳ ಅಥವಾ ಅವನ ಕನಸು ಎಂದು ತೋರಿಸಿದರೆ ನಾವು ಸುಮ್ಮನೇ ಇರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ.
ಜೋಡಿಜೀವಗಳ ಬಾಳಲ್ಲಿ ಮತ್ತೆ ವಸಂತ
ಜೋಡಿಜೀವಗಳ ಬಾಳಲ್ಲಿ ಮತ್ತೆ ವಸಂತ.. ಗೌತಮ್ - ಭೂಮಿ ಪ್ರೇಮದಾರಂಭ! ಎನ್ನುವ ಶೀರ್ಷಿಕೆಯೊಂದಿಗೆ ಈ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಆದರೆ ಹೀಗೆ ಇಬ್ಬರೂ ಒಂದಾಗಿಬಿಟ್ಟರೆ ಸೀರಿಯಲ್ ಬಹುತೇಕ ಮುಗಿದಂತೆ. ಆದ್ದರಿಂದ ಇನ್ನಷ್ಟು ದಿನ ಓಡಿಸಲು ಇದು ಕನಸು ಎಂದು ತೋರಿಸಲಾಗುತ್ತದೆ ಎನ್ನುವುದು ನೆಟ್ಟಿಗರ ಅಭಿಮತ.
ಜೈದೇವ್ನಿಂದ ಹುಡುಕಾಟ
ಅದೇ ಇನ್ನೊಂದೆಡೆ, ಜೈದೇವ್ ಭೂಮಿಕಾ ಮತ್ತು ಗೌತಮ್ ಹುಡುಕಾಟದಲ್ಲಿದ್ದಾನೆ. ಆಸ್ತಿಗೆ ಸಹಿ ಹಾಕಿಸಿಕೊಳ್ಳಲು ಆತ ತಡಕಾಡುತ್ತಿದ್ದಾನೆ. ಇದಕ್ಕಾಗಿ ರೌಡಿಗಳನ್ನು ಬಿಟ್ಟಿದ್ದಾನೆ. ಮಲ್ಲಿ ಅದೇ ಜಾಗದಲ್ಲಿ ಓಡಾಡುತ್ತಿರುವುದು ಆ ರೌಡಿಗಳಿಗೆ ತಿಳಿದಿದೆ. ಅಲ್ಲಿಗೆ ಬಂದ ಶಕುನಿ ಮಾಮಾ ಈ ವಿಷಯವನ್ನು ಹೇಗಾದರೂ ಗೌತಮ್ಗೆ ತಿಳಿಸಬೇಕು ಎಂದು ಸ್ಕೆಚ್ ಹಾಕುತ್ತಿದ್ದಾನೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ