- Home
- Entertainment
- TV Talk
- Amruthadhaare Serial: ಅಪ್ಪ ಒಂದು ಸುಳ್ಳು ಹೇಳು ಎಂದ್ರೆ ಮಗ ನಾಲ್ಕ್ ಹೇಳ್ದ: ಭೂಮಿಕಾ ಕೈಲಿ ತಗ್ಲಾಕ್ಕೋತ್ತಾರಾ ಅಪ್ಪ-ಮಗ?
Amruthadhaare Serial: ಅಪ್ಪ ಒಂದು ಸುಳ್ಳು ಹೇಳು ಎಂದ್ರೆ ಮಗ ನಾಲ್ಕ್ ಹೇಳ್ದ: ಭೂಮಿಕಾ ಕೈಲಿ ತಗ್ಲಾಕ್ಕೋತ್ತಾರಾ ಅಪ್ಪ-ಮಗ?
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ತನ್ನ ಮಗ ಆಕಾಶ್‌ನನ್ನು ಅವನ ಹುಟ್ಟುಹಬ್ಬದಂದು ರಹಸ್ಯವಾಗಿ ಭೇಟಿಯಾಗಿ ಉಡುಗೊರೆಗಳನ್ನು ಕೊಡಿಸುತ್ತಾನೆ. ತಾಯಿ ಭೂಮಿಕಾಗೆ ಈ ವಿಷಯ ತಿಳಿಯಬಾರದೆಂದು, ಗೌತಮ್ ಹೇಳಿಕೊಟ್ಟ ಸುಳ್ಳನ್ನು ಆಕಾಶ್ ತನ್ನದೇ ಶೈಲಿಯಲ್ಲಿ ಹೇಳಿ ಪರಿಸ್ಥಿತಿಯನ್ನು ನಿಭಾಯಿಸುತ್ತಾನೆ.

ಅಪ್ಪ-ಮಗನ ಲವ್ಸ್ಟೋರಿ
ಅಮೃತಧಾರೆ (Amruthadhaare) ಸೀರಿಯಲ್ನಲ್ಲೀಗ ಗೌತಮ್ ಮತ್ತು ಭೂಮಿಕಾ ಬದಲು, ಅಪ್ಪ-ಮಗನ ಲವ್ಸ್ಟೋರಿ ಶುರುವಾಗಿದೆ. ಮಗನನ್ನು ಹುಡುಕಿ ಹುಡುಕಿ ಸಾಕಾದ ಗೌತಮ್ಗೆ ಕೊನೆಗೂ ಅವನು ಸಿಕ್ಕಿದ್ದಾನೆ. ಇಷ್ಟು ವರ್ಷಗಳ ಶ್ರಮಕ್ಕೆ ಫಲ ಸಿಕ್ಕಿದೆ. ಆದರೆ ಆತನನ್ನು ಮೀಟ್ ಆಗಲು ಗೌತಮ್ ಕಂಡರೆ ಕೊತಕೊತ ಕುದಿಯುತ್ತಿರೋ ಭೂಮಿಕಾ ಬಿಡಬೇಕಲ್ಲ, ಅದಕ್ಕಾಗಿಯೇ ಮಗನನ್ನು ಗುಟ್ಟಾಗಿ ಮೀಟ್ ಆಗ್ತಿದ್ದಾನೆ ಗೌತಮ್.
ಮಗನ ಹುಟ್ಟುಹಬ್ಬಕ್ಕೆ ಗಿಫ್ಟ್
ಆದರೆ ಅವನೇ ತನ್ನ ಅಪ್ಪ ಎಂದು ಆಕಾಶ್ಗೆ ಗೊತ್ತಿಲ್ಲ. ಹುಟ್ಟುಹಬ್ಬದ ದಿನ ಗೌತಮ್ ಮಗನನ್ನು ಕರೆದುಕೊಂಡು ಹೋಗಿ ಅವನು ಹೇಳಿದ್ದನ್ನೆಲ್ಲಾ ಕೊಡಿಸಿದ್ದಾನೆ. ಕೊನೆಗೆ ಆಕಾಶ್, ಇದನ್ನೆಲ್ಲಾ ಯಾರು ಕೊಡಿಸಿದ್ದು ಎಂದು ಕೇಳಿದ್ರೆ ಏನು ಹೇಳಬೇಕು ಎಂದಾಗ ಗೌತಮ್ಗೆ ತಲೆ ಬಿಸಿಯಾಯಿತು.
ಸುಳ್ಳು ಹೇಳಿಕೊಟ್ಟ ಗೌತಮ್
ಕೊನೆಗೆ, ಸರಿ ಇದನ್ನು ಅರ್ಪಿತಾ ಅಮ್ಮ ಕೊಡಿಸಿದ್ದು ಎಂದು ಹೇಳು ಎಂದ ಗೌತಮ್. ಯಾವ ಅರ್ಪಿತಾ ಎಂದು ಆಕಾಶ್ ಕೇಳಿದಾಗ, ನಿನ್ನ ಕ್ಲಾಸ್ಮೇಟ್ ಕಣೋ ಎಂದು ಏನೋ ಒಂದು ಸುಳ್ಳು ಹೇಳಲು ಮಗನಿಗೆ ಹೇಳಿದ.
ಅಮ್ಮನ ಎದುರು ರೀಲ್ ಬಿಟ್ಟ ಆಕಾಶ
ಇನ್ನು ಈ ಮರಿಗುಂಡಣ್ಣ ಅಂದ್ರೆ ಸುಮ್ನೇನಾ? ಭೂಮಿಕಾ ಯಾರು ಕೊಡಿಸಿದ್ದು ಎಂದು ಕೇಳಿದಾಗ ಅರ್ಪಿತಾ ಅಮ್ಮ ಎಂದು ಅಪ್ಪ ಹೇಳಿಕೊಟ್ಟ ಸುಳ್ಳು ಹೇಳಿದ. ಆ ಬಳಿಕ ಭೂಮಿಕಾ, ಅವಳು ನಿನ್ನ ಫ್ರೆಂಡ್ ಆದ್ರೆ, ಅಮ್ಮ ಯಾಕೋ ಕೊಡ್ತಾರೆ ಎಂದಾಗ ಹಿಂದೂ ಮುಂದೂ ನೋಡದ ಆಕಾಶ್, ಅವರ ಮನೆಯಲ್ಲಿ ಬರೀ ಹೆಣ್ಣುಮಕ್ಕಳು ಅದಕ್ಕೇ ನನ್ನನ್ನು ಕಂಡ್ರೆ ತುಂಬಾ ಖುಷಿ ಎಂದು ಮತ್ತೊಂದು ರೀಲ್ ಬಿಟ್ಟ...
ಭೂಮಿಕಾ ಬುದ್ಧಿಮಾತು
ಹಾಗೆಲ್ಲಾ ಯಾರಾದ್ರೂ ಗಿಫ್ಟ್ ಕೊಟ್ಟರೆ ತೆಗೆದುಕೊಳ್ಳಬಾರದು ಎಂದು ಭೂಮಿಕಾ ಮಗನಿಗೆ ಬುದ್ಧಿ ಹೇಳಿದಾಗ, ಆಕಾಶ್ ನಾನು ಫಟ್ ಅಂತ ತಗೋಳಿಲ್ಲಮ್ಮಾ. ಅವರು ತುಂಬಾ ಒತ್ತಾಯ ಮಾಡಿದ್ರು ಎಂದು ಇನ್ನೊಂದು ರೀಲ್ ಬಿಡೋದುಅಷ್ಟೇ ಅಲ್ದೇ ಬೇಡಾಂದ್ರ ವಾಪಸ್ ಕೊಟ್ಟು ಬರ್ತೇನೆ ಎಂದು ಹೊರಟ ಹಾಗೆ ಮಾಡಿದ.
ರಿಯಲ್ ಗೊತ್ತಾದ್ರೆ ಅಷ್ಟೇ...
ಮಗನ ರೀಲ್ ಭೂಮಿ ಮಿಸ್ಸಿಗೆ ಗೊತ್ತೇ ಆಗ್ಲಿಲ್ಲ. ಹೋಗ್ಲಿ ಬಿಡು ಎಂದು ಅವನನ್ನು ಒಳಗೆ ಕರೆದುಕೊಂಡು ಹೋದಳು. ಇನ್ನು ಹುಟ್ಟುಹಬ್ಬದ ದಿನ ಆ ಪವಿತ್ರಾ ಬಂದು ನಿಜ ವಿಷಯ ಗೊತ್ತಾದ್ರೆ ಅಪ್ಪ-ಅಮ್ಮನ ಕಥೆ ಅಷ್ಟೇ... ಗೋವಿಂದ...