- Home
- Entertainment
- TV Talk
- Karna Promo ನೋಡಿ ಸಿಡಿದೆದ್ದ ವೀಕ್ಷಕರು… ನಮ್ಮ ಫೀಲಿಂಗ್ಸ್’ಗೆ ಬೆಲೆ ಕೊಡದ ಸೀರಿಯಲ್ ನೋಡಲ್ಲ ಅಂದ್ರು
Karna Promo ನೋಡಿ ಸಿಡಿದೆದ್ದ ವೀಕ್ಷಕರು… ನಮ್ಮ ಫೀಲಿಂಗ್ಸ್’ಗೆ ಬೆಲೆ ಕೊಡದ ಸೀರಿಯಲ್ ನೋಡಲ್ಲ ಅಂದ್ರು
ಕನ್ನಡ ಕಿರುತೆರೆಯ ಜನಪ್ರಿಯ ಕರ್ಣ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ನಿತ್ಯಾಳನ್ನು ಮದುವೆಯಾಗುತ್ತಿರುವ ಕರ್ಣನನ್ನು, ಕಣ್ಣೀರಿಡುತ್ತಿರುವ ನಿಧಿಯನ್ನು ನೋಡಿ ನೊಂದುಕೊಂಡಿರುವ ವೀಕ್ಷಕರು ನಮ್ಮ ಫೀಲಿಂಗ್ ಗೆ ಬೆಲೆ ಕೊಡದ ಮೇಲೆ ಸೀರಿಯಲ್ ನೋಡಲ್ಲ ಅಂತಿದ್ದಾರೆ.

ಕರ್ಣ ಸೀರಿಯಲ್ ಪ್ರೋಮೋ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕರ್ಣ. ಸದ್ಯ ಹೊಸ ಪ್ರೋಮೋ ರಿಲೀಸ್ ಆಗಿದ್ದು, ದೊಡ್ಡದಾದ ತಿರುವು ಸಿಕ್ಕಿದೆ. ನಿಧಿಯನ್ನು ಮದುವೆಯಾಗುವ ಕನಸು ಕಂಡಿದ್ದ ಕರ್ಣ, ಕೊನೆಗೆ ತಾಳಿ ಕಟ್ಟೋದು ನಿತ್ಯಾಗೆ. ನಿಧಿಗೆ ಕಣ್ಣೀರು ಮಾತ್ರ. ಈ ಮಹಾತಿರುವು ನೋಡಿ ವೀಕ್ಷಕರು ಸಿಡಿದೆದ್ದಿದ್ದಾರೆ. ಇನ್ನು ಮುಂದೆ ಸೀರಿಯಲ್ ನೋಡೋದೆ ಇಲ್ಲ ಎಂದಿದ್ದಾರೆ. ಇಲ್ಲಿದೆ ಜನರು ಮಾಡಿರುವ ಕಾಮೆಂಟ್ಸ್.
ಕರ್ಣ ಸೀರಿಯಲ್ ನೋಡಲ್ಲ
ನಿತ್ಯಾ ಜೊತೆ ಮದುವೆ ಮಾಡಿಸೋದೆ ಆದ್ರೆ, ನಿಧಿ ಮತ್ತು ಕರ್ಣ love track ಯಾಕೆ ಬೇಕಿತ್ತು. ಹೀಗೆ ಆದ್ರೆ ಕರ್ಣ ಸೀರಿಯಲ್ ನೋಡಲ್ಲ . No1 serial ಹಳ್ಳ ಹಿಡಿದು ಹೋಯಿತು. ಇನ್ಮೇಲೆ ನಾವು ಈ ಸೀರಿಯಲ್ ನೋಡಲ್ಲ. ಗುಡ್ ಬೈ ಕರ್ಣ. ನಿಧಿಗೋಸ್ಕರ ಸೀರಿಯಲ್ ನೋಡ್ತಾ ಇದ್ದೀವಿ. ಸೀರಿಯಲ್ಲೇ ಎಕ್ಕುಟ್ ಹೋಯ್ತು. ನನ್ ನೋಡ್ತಿದ್ದಿದ್ದೆ ಇದೊಂದು ಸೀರಿಯಲ್ ಈಗ ಅದು ಹಾಳಾಯ್ತು.
ಕಲರ್ಸ್ ಕನ್ನಡ ಬೆಳೆಸೋಣ.
ಸೀರಿಯಲ್ ಹಾಳಯ್ತು. ನಡೀರಿ ಇನ್ಮೇಲೆ ಎಲ್ಲಾ ಬಿಗ್ ಬಾಸ್ ನೋಡೋಣ. ಕಲರ್ಸ್ ಕನ್ನಡನ ಬೆಳೆಸೋಣ. ಇದೊಂದು ಡಬ್ಬ ಸೀರಿಯಲ್. ಥೂ ಬರೀ ಮೋಸ, ನಾನಂತು ಧಾರಾವಾಹಿ ನೋಡಲ್ಲ. ಎಷ್ಟು ಬೇಜಾರ್ ಆಗಿದೆ. ನಮಗೆ ಅಳು ಬರ್ತಾ ಇದೆ. ಪಾಪ ನಿಧಿ -ಕರ್ಣ. No 1 ಸೀರಿಯಲ್ ಆಗಿದ್ದ ಕರ್ಣ.... ಇನ್ಮೇಲೆ 0 TRP ಆಗುತ್ತೆ ಅನ್ನೋದು ಖಚಿತಾ.
ಈ ಪ್ರೋಮೋದ ಹೃದಯವೇ ನಿಧಿ
Nidhi is the heart of the promo.ಅವಳ ನೋವು, ಪ್ರೀತಿ, ತ್ಯಾಗ ಎಲ್ಲವೂ ಹೃದಯ ಮುಟ್ಟುತ್ತವೆ. ಕರ್ಣನ ಕಣ್ಣಲ್ಲಿ ಕಾಣುವ ಆಘಾತವೇ ಸಾಕು, ಅವಳ ಮಹತ್ವ ತೋರಿಸಲು. ಭವ್ಯಾ ಅದ್ಭುತವಾಗಿ ನಟಿಸಿದ್ದಾರೆ, ನೋವನ್ನು ನಾವೇ ಅನುಭವಿಸಿದಂತೆ. ನಿಜವಾದ ಪ್ರೇಮಕಥೆ ನೋವಿಲ್ಲದೆ ಪೂರ್ಣವಾಗುವುದಿಲ್ಲ, ಕರ್ಣ -ನಿಧಿ ಅದಕ್ಕೆ ಸಾಕ್ಷಿ. ಈ ಪ್ರೊಮೋ ಸ್ಪಷ್ಟಪಡಿಸುತ್ತದೆ ನಿಜವಾದ ನಾಯಕಿ ನಿಧಿ, ನಿಜವಾದ ಎಂಡ್‌ಗೇಮ್ ಕರ್ಣ- ನಿಧಿ ಪ್ರೀತಿ.
ಫೀಲಿಂಗ್ಸ್ ಗೆ ಬೆಲೇನೆ ಇಲ್ವಾ?
ಈ ತರಾನು Script Change ಮಾಡ್ತಾರಾ? ಧಾರಾವಾಹಿಯಲ್ಲಿ ಫೀಲಿಂಗ್ ಗೆ ಬೆಲೇನೆ ಇಲ್ವಾ? ಜೀವಾನೆ ಹೋದ ಹಾಗೆ ಆಯ್ತು. ಎಲ್ಲಾ ಸೀರಿಯಲ್ ಕಥೆ ಇದೆ ಆಯ್ತು. ತುಂಬಾ ಕೆಟ್ಟದಾದ ಟ್ವಿಸ್ಟ್. ಯಾಕೆ ಯಾವಾಗ್ಲೂ ಲವರ್ಸ್ ನ ದೂರ ಮಾಡಿ ಅವರಿಗೆ ಚಿತ್ರ ಹಿಂಸೆ ಕೊಡ್ತೀರಾ? ನಿತ್ಯಾ ಪ್ರೆಗ್ನೆಂಟ್ ಆಗಿದ್ರೆ, ಅವಳಿಗೆ ಬಾಳು ಕೊಡೋದಕ್ಕೆ ಈ ಭೂಮಿ ಮೇಲೆ ಕರ್ಣನ ಬಿಟ್ರೆ ಬೇರೆ ಯಾರೂ ಹುಡುಗ ಇಲ್ವಾ? ಎಂದು ಕಿಡಿ ಕಾರಿದ್ದಾರೆ.
ನಿಧಿಯನ್ನು ವಿಲನ್ ಮಾಡ್ಬೇಡಿ
ಹಾಯ್ ಜೀ ಕನ್ನಡ, ಬಿಗ್ ಬಾಸ್ ಭವ್ಯಗೆ ಜನಪ್ರಿಯತೆಯ ಜೊತೆಗೆ, ನಕಾರಾತ್ಮಕತೆಯನ್ನೂ ನೀಡಿತು. ನೀವು ಇಲ್ಲಿಯೂ ಅದೇ ರೀತಿ ಮಾಡಿದ್ದೀರಿ. ಇದೇ ಪ್ಲ್ಯಾನ್ ಆಗಿದ್ದರೆ, ಕರ್ಣ ನಿಧಿ ಲವ್ ಟ್ರ್ಯಾಕ್‌ನ ಅಷ್ಟೊಂದು ಎಳೆಯುವ ಅಗತ್ಯವಿರಲಿಲ್ಲ. ಥ್ಯಾಂಕ್ ಗಾಡ್ ನೀವು ಈಗ ಅದನ್ನು ಬಹಿರಂಗಪಡಿಸಿದ್ದೀರಿ. ಅವರ ಅಭಿಮಾನಿಯಾಗಿ, ಒಂದೇ ಒಂದು ವಿನಂತಿ. ಅವರನ್ನು ನೆಗೆಟಿವ್ ರೋಲ್ ಮಾಡಲು ಒತ್ತಾಯ ಮಾಡಬೇಡಿ ಮತ್ತು ಕಾರ್ಯಕ್ರಮದ ಕೊನೆಯವರೆಗೂ ಯಾರೊಂದಿಗೂ ಮದುವೆಯಾಗುವಂತೆ ಮಾಡಬೇಡಿ. ಇದು ನಿಧಿಯ ಪಾತ್ರಕ್ಕೆ ಮತ್ತೆ ಹಾನಿ ಮಾಡುತ್ತದೆ.
ನಮ್ಮ ಫೀಲಿಂಗ್ಸ್ ಬೆಲೆನೇ ಇಲ್ಲ
ಸೀರಿಯಲ್ ಮಾಡೋದೇ ನಾವು ನೋಡ್ಲಿ ಅಂತ, ಟಿ ಆರ್ ಪಿ ಬರೋದು ನಮ್ಮಿಂದಾನೆ, ಆದರೆ ನಮ್ಮ ಫೀಲಿಂಗ್ಸ್ ಗೆ ಅಥವಾ ನಮ್ಮ ಅಭಿಪ್ರಾಯಕ್ಕೆ ಬೆಲೆನೇ ಇಲ್ಲ, ಈ ಕಿತ್ತೋದು ಸೀರಿಯಲ್ ಗೆ ಇಷ್ಟೊಂದು ಬಿಲ್ಡಪ್ ಬೇರೆ, ಇದಕೋಸ್ಕರ ನಾವು ಇಷ್ಟು ದಿನ ಕಾದಿದ್ದು, ಹಿಂದಿ ರಿಮೇಕ್ ಮಾಡೋದು ಬಿಡಿ, ನಿಮ್ಮ ಸ್ವಂತ ಬುದ್ಧಿ ತೋರಿಸಿ, ಬರಿ ಇದೆ ಆಯ್ತು ಕಾಪಿ ಮಾಡೋದು, ನಿಧಿ ಕರ್ಣ ದೂರ ಮಾಡಿ ನಿತ್ಯ ಮದುವೆ ಮಾಡಿಸೋ ಅಗತ್ಯ ಏನಿತ್ತು, ನಿಮಗೆ ಕಥೆ ಬರೆಯೋದಕ್ಕೆ ಬರಲ್ಲ, ಅಂದ್ರೆ ಸೀರಿಯಲ್ ಯಾಕೆ ಮಾಡ್ತೀರಿ. ಯಾಕೆ ಸಮಾಜಕೆ ತಪ್ಪ ಸಂದೇಶ ಕೊಡ್ತೀರಾ.
ಕಥೆ ಬದಲಾಯಿಸ್ತಾರ ನಿರ್ದೇಶಕರು
ಪ್ರೋಮೋ ನೋಡಿ ವೀಕ್ಷಕರು ಇಷ್ಟೊಂದು ಕಿಡಿ ಕಾರಿರೋದು ನೋಡಿ, ವೀಕ್ಷಕರು ಕಥೆ ಬದಲಾಯಿಸುವ ನಿರ್ಧಾರ ಮಾಡ್ತಾರ? ಪ್ರೊಮೋದಲ್ಲಿ ತೋರಿಸಿದಂತೆ ಆಗುತ್ತಾ ಅಥವಾ ನಿಜವಾಗಿಯೂ ನಿಧಿಯನ್ನೆ ಮದುವೆ ಆಗ್ತಾನ ಕರ್ಣ. ಎಲ್ಲಾದಕ್ಕೂ ವೀಕ್ಷಕರು ಇನ್ನೂ ಒಂದಷ್ಟು ದಿನ ಕಾದು ನೋಡಬೇಕು.