- Home
- Entertainment
- TV Talk
- ಬ್ರೇಕಪ್ ಮಾಡ್ಕೊಂಡ ಗೆಳೆಯನ ಪ್ರೀತಿ ಪಡೆಯಲು ಮಾಟ-ಮಂತ್ರದ ಮೊರೆ ಹೊಕ್ಕ ಸೀರಿಯಲ್ ನಟಿ.. ಮುಂದೇನಾಯ್ತು?
ಬ್ರೇಕಪ್ ಮಾಡ್ಕೊಂಡ ಗೆಳೆಯನ ಪ್ರೀತಿ ಪಡೆಯಲು ಮಾಟ-ಮಂತ್ರದ ಮೊರೆ ಹೊಕ್ಕ ಸೀರಿಯಲ್ ನಟಿ.. ಮುಂದೇನಾಯ್ತು?
ಪ್ರೀತಿ, ಪ್ರೇಮ ಅನ್ನೋದು ಜನರ ಕೈಯಿಂದ ಏನು ಬೇಕಾದರೂ ಮಾಡಿಸುತ್ತೆ. ಈ ಜನಪ್ರಿಯ ಸೀರಿಯಲ್ ನಟಿ ಕೂಡ ಮಾಡಿದ್ದು ಅದೇ, ಪ್ರೀತಿಯ ಅಮಲಿನಲ್ಲಿದ್ದ ಈ ನಟಿ, ತನ್ನ ಗೆಳೆಯನನ್ನು ಪಡೆಯಲು, ಮಾಟ-ಮಂತ್ರದ ಮೊರೆ ಹೋಗಿದ್ದಳು, ಆದರೆ ಮುಂದೆ ಆಗಿದ್ದು ಮಾತ್ರ ಬೇರೆ.

ಈ ನಟಿ ಯಾರು?
ತನ್ನ ಸರಳತೆ ಮತ್ತು ನಗುವಿನಿಂದಲೇ ಜನರ ಹೃದಯ ಗೆದ್ದ ಪ್ರಸಿದ್ಧ ಟಿವಿ ನಟಿ (serial actress), ಒಮ್ಮೆ ನಟನೊಬ್ಬನನ್ನು ಪ್ರೀತಿಸಿ, ಮದುವೆಯಾಗಿ ಸೆಟಲ್ ಆಗುವ ಕನಸು ಕಾಣಲು ಪ್ರಾರಂಭಿಸಿದಳು. ಆದರೆ ಬಯಸಿದ್ದನ್ನು ಪಡೆಯುವುದು ಅಷ್ಟು ಸುಲಭವಲ್ಲ. ಈ ಪ್ರೇಮಕಥೆಯು ಇತರ ಪ್ರೇಮಕಥೆಗಳಿಗಿಂತ ಸ್ವಲ್ಪ ಭಿನ್ನವಾಗಿತ್ತು. ಈ ನಟಿ ತನ್ನ ಪ್ರೀತಿಯನ್ನು ಪಡೆಯಲು ಮಾಟಮಂತ್ರವನ್ನು ಆಶ್ರಯಿಸಿದರು. ಈ ನಟಿ ಯಾರು ಮತ್ತು ಅವರು ಇದನ್ನು ಏಕೆ ಮಾಡಬೇಕಾಯಿತು ಎಂದು ತಿಳಿಯೋಣ?
ಖ್ಯಾತ ನಟಿ ದಿವ್ಯಾಂಕ ತ್ರಿಪಾಠಿ
ಈ ನಟಿ ಬೇರೆ ಯಾರೂ ಅಲ್ಲ, ಟಿವಿ ಉದ್ಯಮದಲ್ಲಿ ದೊಡ್ಡ ಹೆಸರೆಂದು ಪರಿಗಣಿಸಲ್ಪಟ್ಟ ದಿವ್ಯಾಂಕ ತ್ರಿಪಾಠಿ (Divyanka Tripathi). ಈ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಜನಪ್ರಿಯ ಧಾರಾವಾಹಿಗಳನ್ನು ನೀಡಿದ್ದಾರೆ.
ದಿವ್ಯಾಂಕಳ ಪ್ರೇಮಕಥೆ
'ಯೇ ಹೈ ಮೊಹಬ್ಬತೇ' ಟಿವಿ ಧಾರಾವಾಹಿಯಲ್ಲಿ ನಟಿಸಿದ ನಟಿಯನ್ನು ಜನ ತುಂಬಾ ಇಷ್ಟಪಟ್ಟಿದ್ದರು. ಇದಲ್ಲದೆ, ಅವರು ‘ತೇರಿ ಮೇರಿ ಲವ್ ಸ್ಟೋರಿ’,’ ಬನೂನ್ ತೇರಿ ದುಲ್ಹನ್’ ಮತ್ತು ‘ಅದಾಲತ್’ನಂತಹ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಈ ನಟಿಯ ಪ್ರೇಮಕಥೆಯೂ ಸಹ ವಿಶಿಷ್ಟವಾಗಿದೆ.
ದಿವ್ಯಾಂಕ -ಶರದ್ ಜೊತೆ ಪ್ರೀತಿಯಲ್ಲಿ ಬಿದ್ದಳು
ದಿವ್ಯಾಂಕ ಮತ್ತು ಶರದ್ ಮಲ್ಹೋತ್ರಾ (Sharad Malhotra) ‘ಬನೂ ಮೈ ತೇರಿ ದುಲ್ಹನ್’ ಧಾರಾವಾಹಿಯ ಸೆಟ್‌ನಲ್ಲಿ ಭೇಟಿಯಾದರು. ಈ ಸಮಯದಲ್ಲಿ, ಇಬ್ಬರೂ ಪರಸ್ಪರ ಹತ್ತಿರದಿಂದ ತಿಳಿದುಕೊಂಡರು. ನಂತರ ಈ ಸ್ನೇಹ ಯಾವಾಗ ಪ್ರೀತಿಯಾಗಿ ಬದಲಾಯಿತು ಎಂದು ಅವರಿಗೆ ತಿಳಿದಿರಲಿಲ್ಲ. ಆ ಸಮಯದಲ್ಲಿ, ಇಬ್ಬರಲ್ಲೂ ಪ್ರೀತಿ ಮೂಡಿತ್ತು, ಆದ್ದರಿಂದ ಅವರು ಅದನ್ನು ಅಧಿಕೃತಗೊಳಿಸಿದರು. ನಂತರ ಇಬ್ಬರೂ ಎಲ್ಲೆಡೆ ಒಟ್ಟಿಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ಈ ಸಂಬಂಧ ಮುರಿದುಬಿತ್ತು
ದಿವ್ಯಾಂಕ ಮತ್ತು ಶರದ್ 8 ವರ್ಷಗಳ ಕಾಲ ರಿಲೇಶನ್’ಶಿಪ್ (relationship)ನಲ್ಲಿದ್ದರು. ಆದರೆ ನಂತರ ಈ ಸಂಬಂಧ ಹಳಸಿತು. ವರದಿಗಳ ಪ್ರಕಾರ, ದಿವ್ಯಾಂಕ ಈ ಸಂಬಂಧವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸಿದ್ದರು. ಅವರು ಶರದ್ ಅವರನ್ನು ಮದುವೆಯಾಗಿ ಸೆಟಲ್ ಆಗಲು ಬಯಸಿದ್ದರು ಆದರೆ ಶರದ್ ಇನ್ನೂ ಮದುವೆಗೆ ಸಿದ್ಧರಿರಲಿಲ್ಲ. ಅವರು ತಮ್ಮ ವೃತ್ತಿಜೀವನದ ಮೇಲೆ ಫೋಕಸ್ ಮಾಡಲು ಬಯಸಿದ್ದರು. ಇದರಿಂದಾಗಿ ಇಬ್ಬರ ನಡುವೆ ಅಂತರ ಮೂಡಿತು.
ದಿವ್ಯಾಂಕ ಮಾಟಮಂತ್ರದ ಮೊರೆ ಹೋದರು
ಶರದ್ ಜೊತೆಗಿನ ತನ್ನ ಸಂಬಂಧ ಮುರಿದುಬಿದ್ದ ನಂತರ, ದಿವ್ಯಾಂಕ ತುಂಬಾ ಕುಗ್ಗಿ ಹೋಗಿದ್ದರು. ಆ ಆಘಾತವನ್ನು ತಡೆದುಕೊಳ್ಳಲು ಆಕೆಗೆ ಸಾಧ್ಯವಾಗಲಿಲ್ಲ. ಸಂದರ್ಶನವೊಂದರಲ್ಲಿ, ಶರದ್ ನನ್ನು ಪಡೆಯಲು ತಾನು ಎಷ್ಟರ ಮಟ್ಟಿಗೆ ಪ್ರಯತ್ನಿಸಿದ್ದೇನೆಂದು ನಟಿ ಬಹಿರಂಗಪಡಿಸಿದರು.
ಈ ಬ್ರೇಕಪ್ ಶಾಕ್ ನೀಡಿತ್ತು
ರಾಜೀವ್ ಖಂಡೇಲ್ವಾಲ್ ಅವರ ಕಾರ್ಯಕ್ರಮದಲ್ಲಿ ದಿವ್ಯಾಂಕ ಅವರು ಶರದ್ ಅವರ ಜೊತೆಗಿನ ಬ್ರೇಕಪ್ ನಿಂದ ಚೇತರಿಸಿಕೊಳ್ಳಲು ಬಯಸಿದ್ದರೂ ಸಹ ಸಾಧ್ಯವಾಗಲಿಲ್ಲ. ಈ ಸಂಬಂಧವನ್ನು ಉಳಿಸಲು ನಾನು ಸಾಕಷ್ಟು ಪ್ರಯತ್ನಿಸಿದೆ. ನಾನು ತಾಂತ್ರಿಕ ಜ್ಞಾನವನ್ನು (black magic) ಸಹ ಆಶ್ರಯಿಸಿದೆ. ಬ್ಲ್ಯಾಕ್ ಮ್ಯಾಜಿಕ್ ಕೂಡ ಮಾಡಿಸಿದ್ದೆ. ನಾನು ವಿಚಿತ್ರ ಜನರನ್ನು ಭೇಟಿಯಾಗಲು ಪ್ರಾರಂಭಿಸಿದೆ ಮತ್ತು ಯಾರಾದರೂ ಶರದ್‌ಗೆ ಏನಾದರೂ ಮಾಡಿದ್ದಾರೆಯೇ ಎಂದು ಅವರನ್ನು ಕೇಳುತ್ತಿದ್ದೆ. ಎಂಟು ವರ್ಷಗಳ ನಂತರ ಇದು ಹೇಗೆ ಸಂಭವಿಸಬಹುದು ಅನ್ನೋದೆ ನನ್ನ ಪ್ರಶ್ನೆಯಾಗಿತ್ತು ಎಂದು ದಿವ್ಯಾಂಕ ಹೇಳಿದ್ದಾರೆ. .
ನನ್ನನ್ನು ನಾನು ಪ್ರೀತಿಸಲು ಕಲಿತೆ
ಶರದ್ ಮಲ್ಹೋತ್ರಾ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ, ಈ ದುಃಖವನ್ನು ಹೋಗಲಾಡಿಸಲು ತಾನು ಮಗುವನ್ನು ದತ್ತು ಪಡೆಯಲು ಬಯಸಿದ್ದೆ ಎಂದು ದಿವ್ಯಾಂಕ ಹೇಳಿದಳು, ಆಗ ಅವರ ತಾಯಿ ನೀನು ಹೊರಗೆ ಪ್ರೀತಿಯನ್ನು ಏಕೆ ಹುಡುಕುತ್ತೀಯಾ ಎಂದು ಕೇಳಿದಳು. ನಿನ್ನನ್ನು ನೀನು ಪ್ರೀತಿಸು ಎಂದರಂತೆ. ನಂತರ ನನ್ನ ತಾಯಿ ಮತ್ತು ನಾನು ಆಭರಣ ಅಂಗಡಿಗೆ ಹೋದೆವು. ಅಲ್ಲಿಂದ ನಿಶ್ಚಿತಾರ್ಥದ ಉಂಗುರವನ್ನು ಖರೀದಿಸಿ, ಅದನ್ನು ನಾನೇ ಧರಿಸಿದೆ. ನಾನು ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡೆ. ನನ್ನನ್ನು ನಾನು ಪ್ರೀತಿಸಲು ಕಲಿತೆ ಎಂದಿದ್ದಾರೆ.