ಚೋರ್ ಬಜಾರ್ ಟು ಕೀಟಗಳ ಮಾರ್ಕೆಟ್…. ಭಾರತದಲ್ಲಿ ನೀವು ಭೇಟಿ ನೀಡಲೇಬೇಕಾದ ವಿಚಿತ್ರ ಮಾರ್ಕೆಟ್’ಗಳು…
ಭಾರತದಲ್ಲಿ ನೀವು ಎಲ್ಲೆಡೆ ಸಾಮಾನ್ಯ ಮಾರುಕಟ್ಟೆಗಳನ್ನು ಕಾಣಬಹುದು, ಆದರೆ ದೇಶದಲ್ಲಿ ಕೆಲವು ವಿಭಿನ್ನ ಮತ್ತು ವಿಶಿಷ್ಟ ಮಾರುಕಟ್ಟೆಗಳಿವೆ, ಅದರ ಬಗ್ಗೆ ತಿಳಿದ್ರೆ ನೀವು ಅಚ್ಚರಿ ಪಡೋದು ಖಚಿತಾ. ಅವುಗಳ ಬಗ್ಗೆ ತಿಳಿಯಿರಿ…

ವಿಚಿತ್ರ ಮಾರ್ಕೆಟ್
ನಮ್ಮ ದೇಶದ ಪ್ರತಿಯೊಂದು ಮೂಲೆ ಮತ್ತು ಬೀದಿಗಳಲ್ಲಿ ನೀವು ಹಲವಾರು ಮಾರುಕಟ್ಟೆಗಳನ್ನು ಕಾಣಬಹುದು, ಆದರೆ ಕೆಲವು ಮಾರುಕಟ್ಟೆಗಳು ಬಹಳ ವಿಶಿಷ್ಟವಾಗಿವೆ, ಅವುಗಳ ಬಗ್ಗೆ ತಿಳಿದ ನಂತರ, ನೀವು ಖಂಡಿತವಾಗಿಯೂ ಒಮ್ಮೆ ಅಲ್ಲಿಗೆ ಭೇಟಿ ನೀಡಬೇಕೆಂದು ನಿರ್ಧರಿಸುವಿರಿ. ಅಂತಹ ಚಿತ್ರ ವಿಚಿತ್ರ ಮಾರ್ಕೆಟ್ ಗಳ ಕುರಿತು ಮಾಹಿತಿ ಇಲ್ಲಿದೆ.
ಸೋನ್‌ಪುರ ಜಾನುವಾರು ಮಾರುಕಟ್ಟೆ:
ಬಿಹಾರದಲ್ಲಿರುವ ಈ ಸ್ಥಳವು ಏಷ್ಯಾದ ಅತಿದೊಡ್ಡ ಜಾನುವಾರು ಮಾರುಕಟ್ಟೆಗಳಲ್ಲಿ (animal market) ಒಂದಾಗಿದೆ. ಇಲ್ಲಿ ಒಂದು ತಿಂಗಳ ಕಾಲ ನಡೆಯುವ ಈ ಮಾರುಕಟ್ಟೆಯನ್ನು ಜಾತ್ರೆ ಎಂದೂ ಕರೆಯುತ್ತಾರೆ. ಒಂಟೆಗಳು, ಎಮ್ಮೆಗಳು, ಆನೆಗಳು, ಮೇಕೆಗಳು ಮುಂತಾದ ಪಕ್ಷಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಜನರು ಇಲ್ಲಿಗೆ ಬರುತ್ತಾರೆ.
ಚೋರ್ ಬಾಜಾರ್ ದೆಹಲಿ :
ಇಲ್ಲಿಗೆ ನೀವು ಒಂದು ಸಲನಾದ್ರೂ ಹೋಗಲೇಬೇಕು. ಇಲ್ಲಿ ನೀವು ಲಕ್ಷಾಂತರ ಮೌಲ್ಯದ ವಸ್ತುಗಳನ್ನು , ಸಾವಿರ ರೂಪಾಯಿಗಳಲ್ಲಿ ಪಡೆದುಕೊಳ್ಳಬಹುದು, ಐಫೋನ್, ಮ್ಯೂಸಿಕ್ ಸಿಸ್ಟಮ್, ಬ್ರಾಂಡೆಡ್ ಶೂ ಸೇರಿ ಹಲವು ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಇಲ್ಲಿ ವಸ್ತುಗಳನ್ನು ಖರೀದಿಸುವಾಗ ಸ್ವಲ್ಪ ಎಚ್ಚರಿಕೆ ಬೇಕು,. ಯಾಕಂದ್ರೆ ಇಲ್ಲಿನ ಹೆಚ್ಚಿನ ಸಾಮಾಗ್ರಿಗಳು ಕದ್ದ ಸಾಮಾಗ್ರಿಗಳಾಗಿರುತ್ತೆ.
ಕೀಟಗಳ ಮಾರ್ಕೆಟ್, ನಾಗಾಲ್ಯಾಂಡ್ :
ನಾಗಾಲ್ಯಾಂಡಲ್ಲಿ ಒಂದು ಮಾರ್ಕೆಟ್ ಇದೆ, ಅಲ್ಲಿ ಕೇವಲ ಕೀಟಗಳನ್ನು ಮಾರಾಟ ಮಾಡಲಾಗುತ್ತದೆ. ರೇಷ್ಮೆ ಹುಳ, ಮಿಡತೆ ಸೇರಿ ಹಲವು ಕೀಟಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಯಾಕಂದ್ರೆ ಇಲ್ಲಿನ ಜನರ ಪ್ರಮುಖ ಆಹಾರ ಇದು. ಆದರೆ ಹೊಸದಾಗಿ ನೋಡುವವರಿಗೆ ಇದು ವಿಚಿತ್ರ ಎನಿಸದೇ ಇರದು.
ಜೋನ್‌ಬೀಲ್ ಮಾರುಕಟ್ಟೆ ಅಸ್ಸಾಂ:
ಇಲ್ಲಿನ ವಿನಿಮಯ ವ್ಯವಸ್ಥೆಯು ಈ ಮಾರುಕಟ್ಟೆಯನ್ನು ವಿಶೇಷವಾಗಿಸುತ್ತದೆ. ಈ ಮಾರುಕಟ್ಟೆಯು 15 ನೇ ಶತಮಾನದಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ ಮತ್ತು ಅಂದಿನಿಂದ ಈ ವ್ಯವಸ್ಥೆಯಡಿಯಲ್ಲಿ ಇಲ್ಲಿ ವ್ಯಾಪಾರ ನಡೆಯುತ್ತಿದೆ. ಇದು ವಾರಕ್ಕೆ ಮೂರು ದಿನ ಮಾತ್ರ ತೆರೆದಿರುತ್ತದೆ.
ಅತ್ತರ್ ಮಾರುಕಟ್ಟೆ, ಉತ್ತರ ಪ್ರದೇಶ:
ಉತ್ತರ ಪ್ರದೇಶದ ಕನೌಜ್‌ನಲ್ಲಿರುವ ಈ ಮಾರುಕಟ್ಟೆಯಲ್ಲಿ ನೀವು ಸುಗಂಧ ದ್ರವ್ಯಗಳನ್ನು ಮಾತ್ರ ಕಾಣುತ್ತೀರಿ ಮತ್ತು ಅದಕ್ಕಾಗಿಯೇ ಇದನ್ನು ಅತ್ತರ್ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. ಈ ಮಾರುಕಟ್ಟೆಯ ಇತಿಹಾಸವು ಹರ್ಷವರ್ಧನನ ಕಾಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.
ಇಮಾ ಕೈಥೆಲ್, ಮಣಿಪುರ:
ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಈ ಮಾರುಕಟ್ಟೆಯನ್ನು ಮಹಿಳೆಯರು ಮಾತ್ರ ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಇಲ್ಲಿನ ಹೆಚ್ಚಿನ ಅಂಗಡಿಗಳನ್ನು ಮಹಿಳೆಯರು ನಡೆಸುತ್ತಾರೆ ಮತ್ತು ಅದಕ್ಕಾಗಿಯೇ ಈ ಮಾರುಕಟ್ಟೆ ಸಾಕಷ್ಟು ಪ್ರಸಿದ್ಧವಾಗಿದೆ.
ದಾಲ್ ಲೇಕ್ ಫ್ಲೋಟಿಂಗ್ ಮಾರ್ಕೆಟ್:
ಕಾಶ್ಮೀರವನ್ನು ಭಾರತದ ಸ್ವರ್ಗ ಎಂದೂ ಕರೆಯುತ್ತಾರೆ ಮತ್ತು ಅದಕ್ಕಾಗಿಯೇ ಈ ಸ್ಥಳವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿರುವ ದಾಲ್ ಸರೋವರದಲ್ಲಿ ತರಕಾರಿ ಮಾರುಕಟ್ಟೆಯೂ ಇದೆ. ತರಕಾರಿಗಳನ್ನು ದೋಣಿಗಳಲ್ಲಿ ಮಾರಾಟ ಮಾಡುವುದರಿಂದ ಇದನ್ನು ಬಹಳ ವಿಶಿಷ್ಟ ಮಾರುಕಟ್ಟೆ ಎಂದು ಪರಿಗಣಿಸಲಾಗಿದೆ.