ಪ್ರತಿ ಭಾನುವಾರ ಬಂತೆಂದ್ರೆ ಸಾಕು ಬೆಂಗಳೂರಿನ ಈ 3 ಸ್ಥಳಕ್ಕೆ ಜನ್ರು ಹೋಗೋದು ಪಕ್ಕಾ
ವಾರಾಂತ್ಯದಲ್ಲಿ ನಗರದಲ್ಲಿ ಸಂಜೆ ಎಲ್ಲೊರೊಟ್ಟಿಗೆ ಕಾಲ ಕಳೆಯಲು ಬಯಸುವವರಿಗಾಗಿ ಬೆಂಗಳೂರಿನಲ್ಲಿರುವ ಕೆಲವು ವಿಶೇಷ ಸ್ಥಳಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತಿದ್ದು, ಮನಸಾರೆ ವೀಕೆಂಡ್ ಎಂಜಾಯ್ ಮಾಡಲು ರೆಡಿ ಆಗಿ.

ಎಲ್ಲಾ ಆಯಾಸ ದೂರವಾಗುತ್ತೆ..
ಬೆಂಗಳೂರಿನಲ್ಲಿ ಭಾನುವಾರ ಬಂತೆಂದರೆ ವಿಶ್ರಾಂತಿ ಪಡೆಯುವ ಬದಲು ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಪ್ಲಾನ್ ಮಾಡ್ತಾರೆ. ಏಕೆಂದರೆ ವಾರವಿಡೀ ಕೆಲಸದಿಂದಾಗಿ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮನೆಯ ಹೊರಗೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವುದರಿಂದ ನಿಮ್ಮ ಎಲ್ಲಾ ಆಯಾಸ ದೂರವಾಗುತ್ತೆ.
ವೀಕೆಂಡ್ ಎಂಜಾಯ್ ಮಾಡಲು
ಬೆಂಗಳೂರಿನಲ್ಲಿ ಕೆಲವು ಸ್ಥಳಗಳು ಮಾತ್ರ ವಾರಾಂತ್ಯದಲ್ಲಿ ಪಕ್ಕಾ ಜನದಟ್ಟಣೆಯಿಂದ ಕೂಡಿರುತ್ತವೆ. ಭಾನುವಾರದಂದು ಇಲ್ಲಿ ತುಂಬಾ ಗದ್ದಲವಿರುತ್ತದೆ. ಜನರು ತಮ್ಮ ಇಡೀ ಕುಟುಂಬದೊಂದಿಗೆ ಈ ಸ್ಥಳಗಳಿಗೆ ಭೇಟಿ ನೀಡಲು ಹೋಗುತ್ತಾರೆ. ಮಳೆಗಾಲದಲ್ಲಿ ಈ ಸ್ಥಳಗಳ ದೃಶ್ಯ ಇನ್ನಷ್ಟು ಸುಂದರವಾಗುತ್ತದೆ. ಈ ಬಾರಿ ರಕ್ಷಾಬಂಧನ ಹಬ್ಬವೂ ಶನಿವಾರ ಬಂದಿರುವುದರಿಂದ ಅಣ್ತಮ್ಮಂದಿರ ಜೊತೆ, ಫ್ಯಾಮಿಲಿ ಜೊತೆ ವೀಕೆಂಡ್‌ನಲ್ಲಿ ಇಲ್ಲಿ ಕಾಲ ಕಳೆಯುವುದು ವಿಶೇಷವಾಗಿರುತ್ತದೆ. ವಾರಾಂತ್ಯದಲ್ಲಿ ನಗರದಲ್ಲಿ ಸಂಜೆ ಎಲ್ಲೊರೊಟ್ಟಿಗೆ ಕಾಲ ಕಳೆಯಲು ಬಯಸುವವರಿಗಾಗಿ ಇಂದಿನ ಲೇಖನದಲ್ಲಿ ಬೆಂಗಳೂರಿನಲ್ಲಿರುವ ಕೆಲವು ವಿಶೇಷ ಸ್ಥಳಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತಿದ್ದು, ಮನಸಾರೆ ವೀಕೆಂಡ್ ಎಂಜಾಯ್ ಮಾಡಲು ರೆಡಿ ಆಗಿ.
ವಿ.ಆರ್.ಮಾಲ್
ಎಲ್ಲಿದೆ?
ವೈಟ್‌ಫೀಲ್ಡ್ ಮುಖ್ಯ ರಸ್ತೆ, ದೇವಸಂದ್ರ ಕೈಗಾರಿಕಾ ಎಸ್ಟೇಟ್, ಮಹದೇವಪುರ, ಬೆಂಗಳೂರು.
ಸಮಯ:ಬೆಳಗ್ಗೆ 9 ರಿಂದ ರಾತ್ರಿ 11 ರವರೆಗೆ ತೆರೆದಿರುತ್ತದೆ.
ವಿಶೇಷತೆಯೇನು?
ಬೆಂಗಳೂರಿನಲ್ಲಿ ಭಾನುವಾರ ಸಮಯ ಕಳೆಯಲು, ವಿ.ಆರ್.ಮಾಲ್‌ಗೆ ಹೋಗುವುದು ಉತ್ತಮ. ಇದು ನಗರದ ಅತ್ಯಂತ ಆಧುನಿಕ ಮಾಲ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ವಾರವಿಡೀ ಇದು ಜನರಿಂದ ತುಂಬಿರುತ್ತದೆ. ಆದರೆ ಭಾನುವಾರದಂದು ಇಲ್ಲಿ ಹೆಚ್ಚು ಗದ್ದಲ ಇರುತ್ತದೆ.
ಜನರೇಕೆ ಹೋಗ್ತಾರೆ?
ಅತ್ಯುತ್ತಮ ಬ್ರ್ಯಾಂಡ್‌ಗಳು ಮತ್ತು ಪ್ರೀಮಿಯಂ ಸೌಲಭ್ಯಗಳ ಜೊತೆಗೆ, ನೀವು ಮಾಲ್‌ನ ಹೊರಗೆ ವಿವಿಧ ಸ್ಟಾಲ್‌ಗಳನ್ನು ಸಹ ಕಾಣಬಹುದು, ಅಲ್ಲಿ ನೀವು ಅಗ್ಗದ ದರದಲ್ಲಿ ಆಹಾರ ಮತ್ತು ಪಾನೀಯಗಳನ್ನು ಖರೀದಿಸಬಹುದು. ಇದು ಕುಟುಂಬ, ಜೋಡಿಗಳಿಗೆ ಮತ್ತು ಸ್ನೇಹಿತರಿಗೆ ನೆಚ್ಚಿನ ಹ್ಯಾಂಗ್ಔಟ್ ತಾಣವೆಂದೂ ಪರಿಗಣಿಸಲಾಗಿದೆ. ಏಕೆಂದರೆ ಮಾಲ್‌ನಲ್ಲಿ ಕುಳಿತುಕೊಳ್ಳಲು ಉತ್ತಮ ಸ್ಥಳವೂ ಇದೆ, ಅಲ್ಲಿ ನೀವು ಸಮಯ ಕಳೆಯಬಹುದು.
ಹಲಸೂರು ಲೇಕ್
ಎಲ್ಲಿದೆ?
ಈ ಸರೋವರವು ಎಂ.ಜಿ. ರಸ್ತೆಯ ಬಳಿ ಇದ್ದು, ಅಲ್ಲಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಇಲ್ಲಿಂದ ನಿಮಗೆ ಸುಮಾರು 10 ನಿಮಿಷಗಳು ಬೇಕಾಗಬಹುದು ಅಷ್ಟೇ.
ಸಮಯ ಬೆಳಗ್ಗೆ 6:00 ರಿಂದ ರಾತ್ರಿ 8:00 ರವರೆಗೆ ತೆರೆದಿರುತ್ತದೆ.
ಹಲಸೂರು ಸರೋವರದ ವಿಶೇಷತೆ ಏನು ?
ಇದು ಅತ್ಯಂತ ಹಳೆಯ ಮತ್ತು ಸುಂದರವಾದ ಸರೋವರಗಳಲ್ಲಿ ಒಂದಾಗಿದೆ. 50 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಮಳೆಗಾಲದಲ್ಲಿ ಜನರು ಇಲ್ಲಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಏಕೆಂದರೆ ದೋಣಿ ವಿಹಾರ ಮತ್ತು ಹಚ್ಚ ಹಸಿರಿನ ಪರಿಸರವು ಜನರನ್ನು ಆಕರ್ಷಿಸುತ್ತದೆ. ಬೆಂಗಳೂರಿನ ಬಳಿಯಿರುವ ಇದು ದಂಪತಿಗೆ ಬೆಸ್ಟ್ ಪ್ಲೇಸ್ ಎಂದು ಹೇಳಲಾಗುತ್ತೆ.
ಲಾಲ್‌ಬಾಗ್ ಸಸ್ಯೋದ್ಯಾನ
ಎಲ್ಲಿದೆ?
ಮಾವಳ್ಳಿ, ಬೆಂಗಳೂರು.
ವಿಶೇಷತೆಯೇನು?
ಲಾಲ್‌ಬಾಗ್ ಸಸ್ಯೋದ್ಯಾನವು ಕುಟುಂಬದೊಂದಿಗೆ ಭೇಟಿ ನೀಡಲು ಉತ್ತಮವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಭಾನುವಾರದಂದು ಇಲ್ಲಿ ಜನದಟ್ಟಣೆ ಹೆಚ್ಚು. ವರ್ಷಕ್ಕೆ ಎರಡು ಬಾರಿ ಇಲ್ಲಿ ಭವ್ಯವಾದ ಹೂವಿನ ಪ್ರದರ್ಶನ ನಡೆಯುತ್ತದೆ. ಜನವರಿ 26 ಮತ್ತು ಆಗಸ್ಟ್ 15 ರಂದು ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಬಾರಿ ಇಲ್ಲಿ ಎರಡು ದಿನಗಳ ಹಿಂದೆಯಷ್ಟೇ ಆರಂಭವಾಗಿದ್ದು, ಮಕ್ಕಳ ಜೊತೆ ಸಮಯ ಕಳೆಯಲು ತೆರಳಬಹುದು.
ಸಮಯ- ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ.
ಇದು ಬೆಂಗಳೂರಿನ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ .