- Home
- Karnataka Districts
- Shivamogga
- ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್: ಅರಸಾಳು & ಕುಂಸಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ವಿಸ್ತರಣೆ
ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್: ಅರಸಾಳು & ಕುಂಸಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ವಿಸ್ತರಣೆ
ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲುಗಳು ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಮ್ಮ ನಿಲುಗಡೆಯನ್ನು ಮುಂದಿನ ಆರು ತಿಂಗಳವರೆಗೆ ಮುಂದುವರಿಸಲಿವೆ. ಈ ನಿಲುಗಡೆ ವಿಸ್ತರಣೆಯು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ.

ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ರೈಲು ಸಂಖ್ಯೆ: 16227/16228 ಮತ್ತು ರೈಲು ಸಂಖ್ಯೆ: 16206-16205 ಎಕ್ಸ್‌ಪ್ರೆಸ್‌ಗಳು ಅರಸಾಳು ಮತ್ತು ಕುಂಸಿ ನಿಲ್ದಾಣದಲ್ಲಿ ತಮ್ಮ ನಿಲುಗಡೆಯನ್ನು ಮುಂದುವರಿಸಲಿದೆ. ಎಲ್ಲಿಯವರೆಗೆ ಈ ರೈಲುಗಳು ನಿಲುಗಡೆ ಮುಂದುವರಿಯಲಿದೆ ಎಂಬುದರ ಮಾಹಿತಿಯನ್ನು ನೋಡೋಣ ಬನ್ನಿ.
ರೈಲು ಸಂಖ್ಯೆ: 16227/16228 ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್. ಅರಸಾಳು ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆ ಮುಂದಿನ ದಿನಗಳಗಳಲ್ಲಿಯೂ ಮುಂದುವರಿಯುತ್ತದೆ.
16227 ರೈಲು ಮೈಸೂರು ನಿಲ್ದಾಣದಿಂದ ರಾತ್ರಿ 7.30ಕ್ಕೆ ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ಮರುದಿನ ಬೆಳಗ್ಗೆ 7.15ಕ್ಕೆ ತಾಳುಗುಪ್ಪ ನಿಲ್ದಾಣವನ್ನು ತಲಪುತ್ತದೆ. ಶಿವಮೊಮ್ಮ ಟೌನ್ ಬಳಿಕ ಬರುವ ಕುಂಸಿ ಮತ್ತು ಅರಸಾಳು ನಿಲ್ದಾಣಗಳು ಬರುತ್ತದೆ.
16228 ರೈಲು ತಾಳಗುಪ್ಪ ನಿಲ್ದಾಣದಿಂದ ರಾತ್ರಿ 9 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 8.20ಕ್ಕೆ ಮೈಸೂರು ತಲಪುತ್ತದೆ.
ರೈಲು ಸಂಖ್ಯೆ: 16206-16205 ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಅರಸಾಳು ಮುತ್ತು ಕುಂಸಿ ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆಯಾಗಲಿದೆ.
16206 ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಬೆಳಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಟು, ಮಧ್ಯಾಹ್ನ 1.25ಕ್ಕೆ ತಾಳಗುಪ್ಪ ನಿಲ್ದಾಣ ತಲುಪಲಿದೆ.
16205 ರೈಲು ಮಧ್ಯಾಹ್ನ 2.50ಕ್ಕೆ ತಾಳಗುಪ್ಪದಿಂದ ಹೊರಟು ರಾತ್ರಿ 10.30ಕ್ಕೆ ಮೈಸೂರು ನಿಲ್ದಾಣವನ್ನು ತಲುಪಲಿದೆ.
ಅರಸಾಳು ಮತ್ತು ಕುಂಸಿ ನಿಲ್ದಾಣದಲ್ಲಿ ಮುಂದಿನ 6 ತಿಂಗಳವರೆಗೆ ಈ ಮೇಲಿನ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆಯಾಗಲಿವೆ. 24ನೇ ಆಗಸ್ಟ್ 2025ರಿಂದ 23ನೇ ಫೆಬ್ರವರಿ 2025ರವರೆಗೆ ರೈಲುಗಳ ನಿಲುಗಡೆಗೆ ಸೂಚನೆ ನೀಡಲಾಗಿದೆ.