MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Technology
  • Science
  • ಮಮ್ಮಿ ಸ್ಥಿತಿಯಲ್ಲಿ ಮಾನವ ಕೈಗಳನ್ನು ಹೋಲುವ ಅಪರೂಪದ ಜೀವಿ ಪತ್ತೆ

ಮಮ್ಮಿ ಸ್ಥಿತಿಯಲ್ಲಿ ಮಾನವ ಕೈಗಳನ್ನು ಹೋಲುವ ಅಪರೂಪದ ಜೀವಿ ಪತ್ತೆ

ಮಿಚಿಗನ್ ವಿಶ್ವವಿದ್ಯಾನಿಲಯದ ಕಟ್ಟಡ ನವೀಕರಣದ ವೇಳೆ ಮಾನವ ಕೈಗಳನ್ನು ಹೋಲುವ ಮಮ್ಮಿ ರೂಪದಲ್ಲಿರುವ ನಿಗೂಢ ಜೀವಿ ಪತ್ತೆಯಾಗಿದೆ. ಇದನ್ನು ಕ್ಯಾಪಕಾಬ್ರಾ ಎಂದು ಹೆಸರಿಸಲಾಗಿದ್ದು, ಇದರ ಮೂಲ ಮತ್ತು ಸಂರಕ್ಷಣೆಯ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

3 Min read
Anusha Kb
Published : May 15 2025, 02:41 PM IST| Updated : May 15 2025, 03:16 PM IST
Share this Photo Gallery
  • FB
  • TW
  • Linkdin
  • Whatsapp
17

ಅಮೆರಿಕಾದ ಮಿಚಿಗನ್ ವಿವಿಯ ಆವರಣವೊಂದರಲ್ಲಿ ಮಾನವ ಕೈಗಳನ್ನು ಹೋಲುವ ಮಮ್ಮಿ ರೂಪದಲ್ಲಿದ್ದ ನಿಗೂಢ ಜೀವಿಯೊಂದು ಪತ್ತೆಯಾಗಿದ್ದು, ಇದು ಮಮ್ಮಿಗಳ ಬಗ್ಗೆ ಹೊಸ ಬೆಳಕು ಚೆಲ್ಲುವಂತೆ ಮಾಡಿದೆ. ಹಿಂದೆ ಶವಗಳನ್ನು ಸಂಗ್ರಹಿಸಲು ಮಮ್ಮಿ ರೂಪದಲ್ಲಿ ಇಡುತ್ತಿದ್ದರೂ ಎಂಬುದು ನಿಮಗೆ ಗೊತ್ತೇ ಇದೆ. ಈ ಮಮ್ಮಿಗಳು ಯಾವಾಗಲೂ ವಿಜ್ಞಾನಿಗಳು, ಇತಿಹಾಸಕಾರರು ಮತ್ತು ಕುತೂಹಲಕಾರಿ ಜನರನ್ನು ಸೆಳೆಯುತ್ತಲೇ ಇರುತ್ತವೆ.  ಅವುಗಳ ಭಯಾನಕ ಸಂರಕ್ಷಣೆಯ ಸ್ಥಿತಿಯ ಕಾರಣಕ್ಕೆ ಮಾತ್ರವಲ್ಲ, ಅವು ಹೊಂದಿರುವ ರಹಸ್ಯಗಳ ಕಾರಣಕ್ಕೂ ಅವು ಎಲ್ಲರ ಸೆಳೆಯುತ್ತವೆ. ಈಜಿಪ್ಟ್‌ನ ಪ್ರಾಚೀನ ಸಮಾಧಿಗಳು ಮತ್ತು ಸೈಬೀರಿಯಾದ ಮಂಜುಗಡ್ಡೆಯಿಂದ ಆವೃತವಾದ ಪರ್ವತಗಳಂತಹ ಪ್ರದೇಶಗಳಲ್ಲಿಯೂ ಮಮ್ಮಿಗಳು ಕಂಡು ಬಂದಿವೆ ಮತ್ತು ಅವುಗಳ ಅವಶೇಷಗಳು ಜನರು ಮತ್ತು ಪ್ರಾಣಿಗಳು ಒಂದು ಕಾಲದಲ್ಲಿ ಹೇಗೆ ವಾಸಿಸುತ್ತಿದ್ದವು, ಅವು ಏನು ತಿನ್ನುತ್ತಿದ್ದವು, ಅವು ಅನುಭವಿಸಿದ ರೋಗಗಳು ಮತ್ತು ಕೆಲವೊಮ್ಮೆ ಅವು ಹೇಗೆ ಸತ್ತವು ಎಂಬುದರ ಬಗ್ಗೆ ಅಮೂಲ್ಯವಾದ ವಿಚಾರಗಳನ್ನು ನಮಗೆ ನೀಡಿವೆ. ಪ್ರತಿಯೊಂದು ಪ್ರಕೃತಿಯ ಟೈಮ್ ಕ್ಯಪ್ಸೂಲ್‌ನಂತೆ ಕಂಡರೂ ಹಳೆಯ ವಿಧಾನಗಳ ಮೂಲಕ ಅವು ಸಂರಕ್ಷಿಸಲ್ಪಟ್ಟಿದೆ.

27

ಆದರೆ ಇದುವರೆಗೆ ಸಿಕ್ಕ ಎಲ್ಲಾ ಮಮ್ಮಿಗಳು ರಾಜಮನೆತನದ ಸಮಾಧಿಗಳಲ್ಲ ಅಥವಾ ಹೆಪ್ಪುಗಟ್ಟಿದ ಪ್ರದೇಶಗಳಲ್ಲಿ ಸಿಕ್ಕಿರುವಂತಹದಲ್ಲ, ಕೆಲವು ಮಮ್ಮಿಗಳು ಮನೆಯ ಅಟ್ಟಗಳು, ಹಳೆಯ ಕಟ್ಟಡಗಳು ಮತ್ತು ಪರಿಸರವು ಒದಗಿಸಿದ ಆಕಸ್ಮಿಕ ಪರಿಸ್ಥಿತಿಗಳಿಂದಾಗಿ ಸಂರಕ್ಷಿಸಲ್ಪಟ್ಟಿರುವ ಅತ್ಯಂತ ಅನಿರೀಕ್ಷಿತ ಸ್ಥಳಗಳಲ್ಲಿ ಕಂಡುಬರುತ್ತವೆ. ಅದೇ ರೀತಿ ಅಮೆರಿಕಾದ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಯೂ ಇಂತಹದ್ದೇ ಘಟನೆಯೊಂದು ನಡೆದಿದೆ. ಕಟ್ಟಡವೊಂದರ  ಕಟ್ಟಡ ನವೀಕರಣದ ಸಮಯದಲ್ಲಿ ವಿಚಿತ್ರವಾದ ಮಾನವನಂತಹ ಕೈಗಳನ್ನು ಹೊಂದಿರುವ ಮಮ್ಮಿಯಾದ ರೂಪದಲ್ಲಿದ್ದ ನಿಗೂಢ ಜೀವಿ ಪತ್ತೆಯಾಗಿದೆ. ಇದಕ್ಕೀಗಾ ಕ್ಯಾಪಕಾಬ್ರಾ (Capacabra) ಎಂದು ಹೆಸರಿಟ್ಟಿದ್ದಾರೆ. ಈಗ ವಿಜ್ಞಾನಿಗಳು ಈ ಪ್ರಾಣಿಯ ಹಿಂದಿನ ರಹಸ್ಯದ ಪತ್ತೆಗೆ ತೊಡಗಿದ್ದಾರೆ. 

Related Articles

Related image1
ಮಹಾಭಾರತದ 5 ನಿಗೂಢ ಪಾತ್ರಗಳಲ್ಲಿ 3 ಇಂದಿಗೂ ಜೀವಂತ?
Related image2
ದಟ್ಟಾರಣ್ಯದ ಗುಹೆಯೊಳಗೆ ಹೋಗ್ತಿದ್ದಂತೆ ಹೊಸ ಲೋಕಕ್ಕೆ ಎಂಟ್ರಿ ಕೊಟ್ಟ ಮಹಿಳೆ
37

2018 ರಲ್ಲಿ ಮಿಚಿಗನ್ ವಿವಿಯ ನ ಕುಕ್-ಸೀವರ್ಸ್ ಹಾಲ್‌ನಲ್ಲಿ ನವೀಕರಣ ಕಾರ್ಯ ಕೈಗೊಂಡಾಗ ವಿಲಕ್ಷಣವಾದ ಸಣ್ಣ ಮಮ್ಮಿಫೈಡ್ ಜೀವಿ ಕಾಣಿಸಿಕೊಂಡಿತ್ತು. ಅಮೆರಿಕಾದ ಜಾನಪದ ಕತೆಗಳಲ್ಲಿ ಉಲ್ಲೇಖವಾಗಿರುವ ಚುಪಕಾಬ್ರಾ ಎಂಬ ವಿಲಕ್ಷಣ ಜೀವಿಗೆ ಇದನ್ನು ಹೋಲಿಸಲಾಯ್ತು.(ಚುಪಕಾಬ್ರಾ ಎಂದರೆ ಅಮೆರಿಕಾದ ಜಾನಪದ ಕತೆಗಳಲ್ಲಿ ಉಲ್ಲೇಖಿಸಿದಂತೆ ಮೇಕೆಗಳ ರಕ್ತ ಹೀರಿ ಬೇಟೆಯಾಡುವ ಕ್ರಿಪ್ಟಿಡ್) ಅಲ್ಲದೇ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಪುರಾತತ್ವ ಕಾರ್ಯಕ್ರಮದ ಗೌರವಾರ್ಥವಾಗಿ ಇದಕ್ಕೆ ಕ್ಯಾಪಕಾಬ್ರಾ ಎಂದು ಹೆಸರಿಟ್ಟರು. ಇದು ಐದು ಬೆರಳುಗಳು ಹಾಗೂ ಉಗುರುಗಳನ್ನು ಹೊಂದುವ ಜೊತೆಗೆ ಬಹುತೇಕ ಮಾನವ ಕೈಗಳನ್ನು ಹೊಂದಿತ್ತು. ಆರಂಭಿಕವಾಗಿ ವಿಜ್ಞಾನಿಗಳು ಇದರ ಬಗ್ಗೆ ಆಘಾತಗೊಂಡಿದ್ದರೂ, ಬಳಿಕ ಅದರ ಬಗ್ಗೆ ಅಧ್ಯಾಯನದಲ್ಲಿ ತೊಡಗಿದ್ದರು.

47

ಈ ಅಪರೂಪದ ಜೀವಿ ಕ್ಯಾಪಕಾಬ್ರಾದ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಅದರ ಕೈಗಳು, ಅವು ಆಘಾತಕಾರಿಯಾಗಿ ಮಾನವ ಕೈಗಳಂತೆಯೇ ಕಂಡು ಬಂತು. ಐದು ವಿಭಿನ್ನ ಬೆರಳುಗಳು ಮತ್ತು ಉಗುರುಗಳನ್ನು ಅದು ಹೊಂದಿತ್ತು. ಈ ಬಗ್ಗೆ ವಿಧಿವಿಜ್ಞಾನ ಮಾನವಶಾಸ್ತ್ರದ ಪಿಎಚ್‌ಡಿ ವಿದ್ಯಾರ್ಥಿನಿ ಜೆರಿಯೆಲ್ ಕಾರ್ಟೇಲ್ಸ್ ಅವರು ಇದು ಬಹುತೇಕ ಮಾನವನನ್ನು ಹೋಲುತ್ತಿದೆ ಎಂದಿದ್ದಾರೆ. ಆದರೆ ಗಾತ್ರ ಮತ್ತು ರೂಪದಲ್ಲಿ ಸಣ್ಣ ಬೆಕ್ಕನ್ನು ಹೋಲುತ್ತಿದೆ. ಅದರ ಕೈಕಾಲುಗಳು ಬೇರೇನನ್ನೋ ಸೂಚಿಸಿದವು. ಹಾಗೆಯೇ  ಅದರ ಕಿವಿಗಳು ಹಾಗೂ ಮೂಗು ಕಾಗದದಷ್ಟು ತೆಳುವಾದ ಅಂಗಾಂಶದಿಂದ ಮುಚ್ಚಲ್ಪಟ್ಟಿದೆ, ಅದರ ವಿಚಿತ್ರ ದೇಹವೂ ಮಮ್ಮಿಫೈಡ್ ಜೀವಿ ಮತ್ತು ಅದರ ಜಾತಿಯ ಬಗ್ಗೆ ವಿಜ್ಞಾನಿಗಳಿಗೆ ಯಾವುದೇ ತೀರ್ಮಾನಗಳಿಗೆ ಬರದಂತೆ ತಡೆಯುತ್ತಿದೆ ಎಂದು ವರದಿಯಾಗಿದೆ. 

57

ಕ್ಯಾಪಕಾಬ್ರಾದ ದೇಹದ ಗುರುತಿಗೆ ಹೋಲಿಕೆಯಾಗುವ ಪ್ರಸ್ತುತ ಮುಂಚೂಣಿಯಲ್ಲಿರುವ ಪ್ರಾಣಿ ಎಂದರೆ ರಕೂನ್. ಈ ಪ್ರಾಣಿಯ ಅಸ್ಥಿಪಂಜರಗಳೊಂದಿಗಿನ ಎಕ್ಸ್-ರೇ ಹೋಲಿಕೆಗಳು ರಕೂನ್‌ ಜೊತೆ ಹೋಲಿಕೆಯಾಗುತ್ತವೆ.  ವಿಶೇಷವಾಗಿ ದವಡೆ ಹಾಗೂ ಮೂತಿಯ ಆಕಾರ. ಆದರೂ ಇದನ್ನು ದೃಢೀಕರಿಸಲು ಮಮ್ಮಿಯ ಹಲ್ಲುಗಳನ್ನು ತಿಳಿದಿರುವ ರಕೂನ್ ದಂತಗಳೊಂದಿಗೆ ಹೋಲಿಸುವ ಅಗತ್ಯವಿದೆ. ಪಿಎಚ್‌ಡಿ ವಿದ್ಯಾರ್ಥಿನಿ ಜೆರಿಯೆಲ್ ಕಾರ್ಟೇಲ್ಸ್ ಅವರು ಅದು ರಕೂನ್ ಎಂಬುದು ಸುಮಾರು 75%  ಖಚಿತ ಎಂದು ಅಂದಾಜಿಸಿದ್ದಾರೆ. ಆದರೆ ದಂತ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೆ ಅದನ್ನು ಖಚಿತವಾಗಿ ಹೇಳುವುದಿಲ್ಲಎಂದು ತಜ್ಞರು ಹೇಳುತ್ತಾರೆ. 

67

ಈ ಜೀವಿ ಇಷ್ಟು ದಿನ ಹೇಗೆ ಸಂರಕ್ಷಿಸಲ್ಪಟ್ಟಿತು?
ಪಿಎಚ್‌ಡಿ ವಿದ್ಯಾರ್ಥಿನಿ ಜೆರಿಯೆಲ್ ಕಾರ್ಟೇಲ್ಸ್ ನಂಬುವಂತೆ ಅದು ಗಾಳಿ ಹೋಗಲು ಇಟ್ಟರಂಧ್ರದ  ಮೂಲಕ ಕಟ್ಟಡವನ್ನು ಪ್ರವೇಶಿಸಿ ಅಲ್ಲಿ ಸಿಕ್ಕಿಹಾಕಿಕೊಂಡಿರಬಹುದು. ಚಳಿಗಾಲದಲ್ಲಿ ಶುಷ್ಕ, ಬೆಚ್ಚಗಿನ ಗಾಳಿಯಾಗಿ ಉಳಿಯುವ ಮತ್ತು ಆರ್ದ್ರ ಬೇಸಿಗೆಯ ಶಾಖದಿಂದ ರಕ್ಷಿಸುವ ಒಳಗಿನ ಪರಿಸ್ಥಿತಿಗಳು ನೈಸರ್ಗಿಕ ಮಮ್ಮಿಫಿಕೇಶನ್‌ಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಿದವು. ಕಟ್ಟಡವನ್ನು ನಿರ್ಮಿಸಿದಾಗ ಅದರ ವಯಸ್ಸು 1889 ಕ್ಕಿಂತ ಹಿಂದಿನದು ಎಂದು ಹೇಳಲು ಸಾಧ್ಯವಾಗದಿದ್ದರೂ, ಅದರ ದಿನಾಂಕವನ್ನು ಇನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೂ, ಕ್ಯಾಪಕಾಬ್ರಾದ ವಿಲಕ್ಷಣ ಮಮ್ಮಿಫಿಕೇಶನ್ ನಿಗೂಢವಾಗಿಯೇ ಉಳಿದಿದೆ.

77

ನೈಸರ್ಗಿಕ ಮಮ್ಮಿಫಿಕೇಶನ್ ಎಂದರೇನು?
ಇದು ಸಾಂಪ್ರದಾಯಿಕ ಮಾನವ ಪದ್ಧತಿಗಳನ್ನು ಅನುಸರಿಸುವ ಬದಲು ಪರಿಸರ ಪರಿಸ್ಥಿತಿಗಳ ಮೂಲಕ ದೇಹವನ್ನು ಸಂರಕ್ಷಿಸುವುದು. ಕೃತಕ ಮಮ್ಮಿಫಿಕೇಶನ್‌ನಿಂದ ಭಿನ್ನವಾಗಿರುವುದು. ದೇಹವು ತುಂಬಾ ಶುಷ್ಕ ಶಾಖ, ಶೀತ ಅಥವಾ ಕೊಳೆಯಲು ಅನುಮತಿಸದ ಆಮ್ಲಜನಕದ ಕೊರತೆಯಂತಹ ತೀವ್ರ ಪರಿಸರಗಳಿಗೆ ಒಡ್ಡಿಕೊಂಡಾಗ ನೈಸರ್ಗಿಕ ಮಮ್ಮಿಫಿಕೇಶನ್ ನಡೆಯುತ್ತದೆ. ಅದರ ಹೊರತಾಗಿ, ಶುಷ್ಕ ಹವಾಮಾನ, ಘನೀಕರಿಸುವ ತಾಪಮಾನ ಅಥವಾ ಗಾಳಿ-ಬಿಗಿಯಾದ ಆವರಣಗಳು ಬ್ಯಾಕ್ಟೀರಿಯಾದ ಚಟುವಟಿಕೆ ಮತ್ತು ತೇವಾಂಶ ನಷ್ಟವನ್ನು ನಿಧಾನಗೊಳಿಸುತ್ತವೆ. ಇವು ಶವದ ಚರ್ಮ, ಅಂಗಾಂಶಗಳು ಮತ್ತು ಆಂತರಿಕ ಅಂಗಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ. 

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ವಿಜ್ಞಾನ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved