- Home
- Entertainment
- Sandalwood
- Yatharv Birthday: ಸ್ಟೈಲಲ್ಲಿ ಅಪ್ಪನನ್ನೇ ಮೀರಿಸ್ತಾನೆ ರಾಕಿಂಗ್ ಸ್ಟಾರ್ ಯಶ್ ಪುತ್ರ
Yatharv Birthday: ಸ್ಟೈಲಲ್ಲಿ ಅಪ್ಪನನ್ನೇ ಮೀರಿಸ್ತಾನೆ ರಾಕಿಂಗ್ ಸ್ಟಾರ್ ಯಶ್ ಪುತ್ರ
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರ ಯಥರ್ವ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮಗನ ಆರನೇ ವರ್ಷದ ಹುಟ್ಟುಹಬ್ಬಕ್ಕೆ ಅಮ್ಮ ರಾಧಿಕ ಸ್ಪೆಷಲ್ ಫೋಟೊಗಳ ಮೂಲಕ ಶುಭಾಶಯ ಕೋರಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಪುತ್ರ
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದಿನ ಮಗ ಯಥರ್ವ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮ್ಮ ರಾಧಿಕಾ ಮಗನ ಮುದ್ದಾದ ಫೋಟೊಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ.
ನಮ್ಮ ಪುಟ್ಟ ಕಂದನಿಗೆ 6 ವರ್ಷ
ರಾಧಿಕಾ ಪಂಡಿತ್ ಮಗನ ಒಂದಿಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಅದರ ಜೊತೆಗೆ ನಮ್ಮ ಪುಟ್ಟ ಕಂದನಿಗೆ ಇಂದು ಆರು ವರ್ಷ ತುಂಬುತ್ತಿದೆ… ನಿನ್ನ ಬೆಚ್ಚಗಿನ ಅಪ್ಪುಗೆ, ನಗು ಮತ್ತು ಸಂತೋಷದಿಂದ ನೀನುಇ ನಮ್ಮ ಜೀವನವನ್ನು ಬೆಳಗಿಸುತ್ತಿದ್ದಿ. ನನ್ನ ಮಗು ಯಾವಾಗಲೂ ಶೈನ್ ಆಗುತ್ತಲಿರು. ಜನ್ಮದಿನದ ಶುಭಾಶಯಗಳು ಯಥರ್ವ್ ಎಂದು ಬರೆದುಕೊಂಡಿದ್ದಾರೆ.
ಸ್ಟೈಲ್ ನಲ್ಲಿ ಅಪ್ಪನನ್ನೆ ಮೀರಿಸುವ ಮಗ
ರಾಧಿಕಾ ಹಂಚಿಕೊಂಡಿರುವ ಫೋಟೊಗಳಲ್ಲಿ ಯಥರ್ವ್ ಬಿಳಿ ಬಣ್ಣದ ಪ್ಯಾಂಟ್, ಶರ್ಟ್ ಧರಿಸಿ ಟೋಪಿ ಹಾಕಿ ಪೋಸ್ ಕೊಟ್ಟಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಸ್ಟೈಲ್ ನಲ್ಲಿ ಮಗ ಅಪ್ಪನನ್ನೆ ಮೀರಿಸುವಂತೆ ಕಾಣಿಸುತ್ತಿದೆ. ಮುದ್ದು ಪುಟಾಣಿಗೆ ಅಭಿಮಾನಿಗಳು ಸಹ ಶುಭ ಕೋರಿದ್ದಾರೆ.
ಯಶ್ ಸಿನಿಮಾಗಳಲ್ಲಿ ಬ್ಯುಸಿ
ರಾಕಿಂಗ್ ಸ್ಟಾರ್ ಯಶ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯೋದಕ್ಕೆ ಸಾಧ್ಯ ಆಗುತ್ತಿಲ್ಲ. ಹಾಗಾಗಿ ಸಂಪೂರ್ಣ ಕುಟುಂಬದ ಜವಬ್ಧಾರಿಯನ್ನು ರಾಧಿಕಾ ಹೊತ್ತಿದ್ದಾರೆ. ಈ ಬಾರಿ ಮಗನ ಹುಟ್ಟುಹಬ್ಬಕ್ಕೆ ಜೊತೆಯಾಗುತ್ತಾರಾ ಯಶ್ ಕಾದು ನೋಡಬೇಕು.
ಜೊತೆಯಾಗಿ ದೀಪಾವಳಿ ಆಚರಣೆ
ಇತ್ತೀಚೆಗೆ ಯಶ್ ರಾಮಾಯಣ ಶೂಟಿಂಗ್ ಮುಗಿಸಿದ್ದು, ಇದೀಗ ಟಾಕ್ಸಿಕ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಬ್ರೇಕ್ ತೆಗೆದುಕೊಂಡು ಕುಟುಂಬದ ಜೊತೆ ದೀಪಾವಳಿ ಹಬ್ಬವನ್ನ ಆಚರಿಸಿದ್ದರು. ರಾಧಿಕಾ ಫೋಟೊಗಳನ್ನು ಹಂಚಿಕೊಂಡಿದ್ದರು.
ಮಕ್ಕಳ ಜೊತೆ ರಾಧಿಕಾ
ರಾಧಿಕಾ ಮದುವೆಯಾಗಿ ಮಕ್ಕಳಾದ ಮೇಲೆ ನಟನೆಯಿಂದ ದೂರವೇ ಉಳಿದು, ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮಕ್ಕಳ ಜೊತೆ ಟ್ರಾವೆಲ್ ಮಾಡೋದು, ಅವರ ಜೊತೆ ಆಟವಾಡೋದು, ಅವರಿಗೆ ಬೇಕಿಂಗ್ ಮಾಡೋದನ್ನು ಹೇಳಿಕೊಡುತ್ತಿರುತ್ತಾರೆ ರಾಧಿಕಾ.