- Home
- Entertainment
- Sandalwood
- 'ನಾನು ಮಾತಾಡಿದ್ರೆ ದೀಪಿಕಾ ದಾಸ್‌ಗೆ ಸಮಸ್ಯೆ ಆಗತ್ತೆ': ಮನಸ್ತಾಪದ ಬಗ್ಗೆ ಪುಷ್ಪ ಅರುಣ್ ಕುಮಾರ್ Open Talk
'ನಾನು ಮಾತಾಡಿದ್ರೆ ದೀಪಿಕಾ ದಾಸ್‌ಗೆ ಸಮಸ್ಯೆ ಆಗತ್ತೆ': ಮನಸ್ತಾಪದ ಬಗ್ಗೆ ಪುಷ್ಪ ಅರುಣ್ ಕುಮಾರ್ Open Talk
‘ಕೊತ್ತಲವಾಡಿ’ ಸಿನಿಮಾ ಪ್ರಚಾರದ ವೇಳೆ ನಿರ್ಮಾಪಕಿ ಪುಷ್ಪ ಅವರು ತಂಗಿ ಮಗಳಾದ ದೀಪಿಕಾ ದಾಸ್ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು. ಅದಕ್ಕೆ ದೀಪಿಕಾ ದಾಸ್ ಕೂಡ ಆಕ್ರೋಶ ಹೊರಹಾಕಿದ್ದರು. ಈಗ ಪುಷ್ಪ ಮತ್ತೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಅನುಷ್ಕಾ ಶೆಟ್ಟಿ ಅವರ ‘ಘಾಟಿ’ ಸಿನಿಮಾವನ್ನು ಪುಷ್ಪ ಅವರು ವಿತರಣೆ ಮಾಡುತ್ತಿದ್ದಾರೆ. ಒಂದು ಸಂದರ್ಶನದಲ್ಲಿ “ದೀಪಿಕಾ ದಾಸ್ ಯಾವ ದೊಡ್ಡ ಹೀರೋಯಿನ್, ನಾನು ಅವಳ ಜೊತೆ ಯಾಕೆ ಸಿನಿಮಾ ಮಾಡಲಿ? ನನ್ನ ಬಳಿ ಅವರ ಬಗ್ಗೆ ಕೇಳಬೇಡಿ, ಅವರಿಗೂ ನನಗೂ ಆಗೋದಿಲ್ಲ” ಎಂದು ಹೇಳಿದ್ದರು.
ಆಮೇಲೆ ದೀಪಿಕಾ ದಾಸ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದು, “ನಾನು ಯಾವುದೇ ಸಾಧನೆ ಮಾಡದೇ ಇರಬಹುದು. ಅಮ್ಮ ಆಗಲೀ, ದೊಡ್ಡಮ್ಮ ಆಗಲೀ ನನ್ನ ಬಗ್ಗೆ ಕೀಳಾಗಿ ಮಾತನಾಡೋ ಅರ್ಹತೆ ಇಲ್ಲ. ನನ್ನನ್ನು ಯಾರೂ ಕಾಂಟ್ಯಾಕ್ಟ್ ಮಾಡಿಲ್ಲ. ಸತ್ಯದ ತಲೆ ಮೇಲೆ ಹೊಡೆಯೋ ಹಾಗೆ ಮಾತನಾಡುತ್ತಾರೆ” ಎಂದು ಹೇಳಿಕೊಂಡಿದ್ದರು.
“ನಾನು, ದೀಪಿಕಾ ದಾಸ್ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರೂ ಕೂಡ ನಾನು ಹಾಸನದಲ್ಲಿ ಇರುತ್ತೇನೆ. ಬೆಂಗಳೂರಿಗೆ ಬಂದರೂ ಕೂಡ ನಾನು ಮಗ, ಮಗಳು ಮನೆಯಲ್ಲಿ ಇರ್ತೀವಿ, ನಮಗೆ ತುಂಬ ಮನೆಗಳಿವೆ” ಎಂದು ಪುಷ್ಪ ಅರುಣ್ ಕುಮಾರ್ ಹೇಳಿದ್ದಾರೆ.
“ದೀಪಿಕಾ ದಾಸ್ ನಮ್ಮ ಮನೆ ಮಗಳು. ಅವಳ ಬಗ್ಗೆ ನಾನು ಮಾತಾಡಿದ್ರೆ ದೀಪಿಕಾ ದಾಸ್‌ಗೆ ತೊಂದರೆ ಆಗುತ್ತದೆ. ಅದಿಕ್ಕೆ ಸುಮ್ಮನೆ ಇದೀನಿ” ಎಂದು ಪುಷ್ಪ ಹೇಳಿದ್ದಾರೆ.
“ದೀಪಿಕಾ ದಾಸ್ ಅವರ ಮಧ್ಯೆ ಏನಾಗಿದೆ ಅನ್ನೋದನ್ನು ನಾನು ಹೇಳೋದಿಲ್ಲ. ನಮ್ಮ ಮನೆ ಹೆಣ್ಣು ಮಕ್ಕಳ ವಿಷಯವನ್ನು ನಾನು ಯಾರ ಮುಂದೆಯೂ ಹೇಳಬಾರದು. ಇದಕ್ಕೆ ಕಾರಣ ಏನು ಅಂತ ದೀಪಿಕಾ ದಾಸ್‌ಗೂ ಗೊತ್ತಿದೆ. ನನ್ನ ಮಗನಿಗೂ ಕೂಡ ಅವನು ಯಾವ ಹೀರೋ ಅಂತ ಹೇಳ್ತೀನಿ, ನಮ್ಮ ಮನೆ ಮಕ್ಕಳಿಗೆ ನಾವು ಹೀಗೆ ಹೇಳ್ತೀನಿ. ಯಶ್ ಜೊತೆ ಮಾತಾಡೋಕೆ ಟೈಮ್ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ದೀಪಿಕಾ ದಾಸ್ ಜೊತೆಗೆ ಮಾತಾಡ್ತೀನಿ” ಎಂದು ಪುಷ್ಪ ಅರುಣ್ ಕುಮಾರ್ ಹೇಳಿದ್ದಾರೆ.