ಭುವನ್ ಪೊನ್ನಣ್ಣ ನಟನೆಯ ಹಲೋ 1 2 3 ಚಿತ್ರಕ್ಕೆ ಮುಹೂರ್ತ: ಯೋಗರಾಜ್ ಭಟ್ ನಿರ್ದೇಶನ
ಯೋಗರಾಜ್ ಭಟ್, ನಾನು ಅಮೆರಿಕ ಪ್ರವಾಸ ಹೊರಟಿದ್ದೇನೆ. ಹೀಗಾಗಿ ಒಳ್ಳೆಯ ದಿನ ಎನ್ನುವ ಕಾರಣಕ್ಕೆ ದಿಢೀರ್ ಎಂದು ಚಿತ್ರಕ್ಕೆ ಚಾಲನೆ ನೀಡಿದ್ದೇವೆ. ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕತೆ ಇದು.

ಯೋಗರಾಜ್ ಭಟ್ ನಿರ್ದೇಶನದಲ್ಲಿ, ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ‘ಹಲೋ 1 2 3’ ಚಿತ್ರದ ಮುಹೂರ್ತ ನಡೆದಿದೆ. ಚಿತ್ರದ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ನಿರ್ಮಾಪಕ ವಿಜಯ್ ಟಾಟಾ ಅವರು ಅಡ್ವಾನ್ಸ್ ಕೊಡುವ ಮೂಲಕ ಚಿತ್ರವನ್ನು ಘೋಷಣೆ ಮಾಡಿದ್ದು ವಿಶೇಷವಾಗಿತ್ತು.
ಯೋಗರಾಜ್ ಭಟ್, ನಾನು ಅಮೆರಿಕ ಪ್ರವಾಸ ಹೊರಟಿದ್ದೇನೆ. ಹೀಗಾಗಿ ಒಳ್ಳೆಯ ದಿನ ಎನ್ನುವ ಕಾರಣಕ್ಕೆ ದಿಢೀರ್ ಎಂದು ಚಿತ್ರಕ್ಕೆ ಚಾಲನೆ ನೀಡಿದ್ದೇವೆ. ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕತೆ ಇದು.
ರೊಮ್ಯಾಂಟಿಕ್ ಪ್ರೇಮ ಕತೆಯನ್ನು ಈ ಚಿತ್ರ ಮೂಲಕ ಹೇಳುತ್ತಿದ್ದೇವೆ. ಕತೆಗೆ ಸೂಕ್ತ ಎನ್ನುವ ಕಾರಣಕ್ಕೆ ‘ಹಲೋ 1 2 3’ ಎನ್ನುವ ಹೆಸರು ಇಟ್ಟಿದ್ದೇವೆ ಎಂದರು.
ಭುವನ್ ಪೊನ್ನಣ್ಣ, ‘ರಾಂಧವ ಚಿತ್ರದ ನಂತರ ಬರುತ್ತಿದ್ದೇನೆ. ಆ ಚಿತ್ರಕ್ಕೂ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿ ಗೆಲ್ಲಿಸಿದ ಪ್ರೇಕ್ಷಕರು, ‘ಹಲೋ 1 2 3’ ಚಿತ್ರವನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ’ ಎಂದರು.
ಇದೊಂದು ಪ್ರೇಮ ಕತೆಯ ಸಿನಿಮಾ. ‘ಹಲೋ 1 2 3’ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಆಗುತ್ತಿದ್ದೇನೆ. ಇದು ನನಗೆ ಒಂದು ಪುನರ್ ಜನ್ಮ ಎನ್ನಬಹುದು. ಯೋಗರಾಜ್ ಭಟ್ ನಿರ್ದೇಶನದಲ್ಲಿ ನನ್ನ ನಟನೆಯ ಸಿನಿಮಾ ಸೆಟ್ಟೇರುತ್ತಿರುವುದು ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ.
ಅಕ್ಟೋಬರ್ ತಿಂಗಳಿನಿಂದ ಚಿತ್ರೀಕರಣ ನಡೆಯಲಿದೆ. ನಟಿ ಹರ್ಷಿಕಾ ಪೂಣಚ್ಚ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ನಿರ್ಮಾಪಕ ವಿಜಯ್ ಟಾಟಾ, ಅಮೃತಾ ವಿಜಯ್ ಟಾಟಾ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

