- Home
- Entertainment
- Sandalwood
- ಬರ್ತ್ ಡೇ ದಿನ ನಾನು ಸಿಗಲ್ಲ ಎಂದಿದ್ದ ಡಾಲಿ ಧನಂಜಯ್… ಪತ್ನಿ ಜೊತೆ ಯೂರೋಪ್’ಗೆ ಹಾರಿದ್ರ?
ಬರ್ತ್ ಡೇ ದಿನ ನಾನು ಸಿಗಲ್ಲ ಎಂದಿದ್ದ ಡಾಲಿ ಧನಂಜಯ್… ಪತ್ನಿ ಜೊತೆ ಯೂರೋಪ್’ಗೆ ಹಾರಿದ್ರ?
ಹುಟ್ಟುಹಬ್ಬದ ದಿನ ನಾನು ಕೆಲಸದ ನಿಮಿತ್ತ ಹೊರಗೆ ಹೋಗ್ತಿದ್ದೇನೆ ಎಂದು ಹೇಳಿದ್ದ ಡಾಲಿ ಧನಂಜಯ್ ಇದೀಗ ಪತ್ನಿ ಧನ್ಯತಾ ಜೊತೆ ಯುರೋಪ್ ನಲ್ಲಿ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟ ರಾಕ್ಷಸ ಎಂದೇ ಹೆಸರು ಪಡೆದಿರುವ ನಟ ಡಾಲಿ ಧನಂಜಯ್ (Daali Dhananjay) ಇದೀಗ ಮದುವೆಯಾದ ನಂತರ ಮೊದಲ ಬಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪತ್ನಿ ಧನ್ಯತಾ, ಪತಿ ಜೊತೆಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ.
ಡಾ. ಧನ್ಯತಾ (Dr. Dhanyatha) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯೂರೋಪ್ ಪ್ರವಾಸದ ಫೋಟೊಗಳನ್ನು ಶೇರ್ ಮಾಡಿದ್ದು, ತಮ್ಮ ಪತಿಗೆ ಅಷ್ಟೇ ಮುದ್ದಾಗಿ ಶುಭ ಕೋರಿದ್ದಾರೆ. ಈ ಫೋಟೊಗಳು ಈವಾಗಿನದ್ದೆ ಅಥವಾ ಮದುವೆಯಾದ ಬಳಿಕ ಯುರೋಪ್ ಗೆ ತೆರಳಿದ್ದಾಗ ತೆಗೆಸಿದಂತಹ ಫೋಟೊಗಳೆ ಅನ್ನೋದು ಗೊತ್ತಿಲ್ಲ.
ಇನ್ನು ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿರುವ ಧನ್ಯತಾ ತನ್ನ ಪ್ರತಿಭೆ, ಉತ್ಸಾಹ ಮತ್ತು ಹೃದಯದಿಂದ ಸ್ಫೂರ್ತಿ ನೀಡುತ್ತಲೇ ಇರುವ ವ್ಯಕ್ತಿಗೆ, ಹುಟ್ಟುಹಬ್ಬದ ಶುಭಾಶಯಗಳು! ಪರದೆಯ ಮೇಲೆ ಮತ್ತು ಹೊರಗೆ ನೀವು ಮಿಂಚುವುದನ್ನು ನೋಡುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ. ಹೆಚ್ಚಿನ ಶಕ್ತಿ, ಹೆಚ್ಚಿನ ಕಥೆಗಳು ಮತ್ತು ಅಂತ್ಯವಿಲ್ಲದ ಪ್ರೀತಿಗಾಗಿ ಕಾಯುತ್ತಿದ್ದೇನೆ ಎಂದು ವಿಶ್ ಮಾಡಿದ್ದಾರೆ.
ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಹ ಶುಭಾಶಯಗಳನ್ನು ಕೋರಿದ್ದಾರೆ. ಇಬ್ಬರ ಫೋಟೊಗಳನ್ನು ನೋಡಿ, ಯಾರ ದೃಷ್ಟಿಯೂ ಬೀಳದಿರಲಿ. ನೂರು ಕಾಲ ಈ ಜೋಡಿ ಹೀಗೆ ಜೊತೆಯಾಗಿರಲಿ ಎಂದು ಆಶಿಸಿದ್ದಾರೆ.
ಕನ್ನಡದ ಸ್ಟಾರ್ ನಟ ಧನಂಜಯ್ ಹಾಗೂ ವೈದ್ಯೆ, ಗೈನಕಾಲಜಿಸ್ಟ್ ಆಗಿರುವ ಡಾ. ಧನ್ಯತಾ ವಿವಾಹವು ಇದೇ ವರ್ಷ ಫೆಬ್ರುವರಿ 16 ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಲಕ್ಷಾಂತರ ಜನರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮದುವೆ ಬಳಿಕ ಇದೀಗ ಮೊದಲ ಬಾರಿಗೆ ಪತ್ನಿಗೆ ಡಾಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಎರಡು ದಿನಗಳ ಹಿಂದೆ ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಬಗ್ಗೆ ಪೋಸ್ಟ್ ಮಾಡಿದ್ದರು. ಆಗಸ್ಟ್ 23, ಪ್ರತಿ ವರ್ಷ ನನ್ನ ಬರ್ತ್ ಡೇ ಅಂದ್ರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ – ಅದೇ ನನ್ನ ಶಕ್ತಿ. ಆದ್ರೆ ಈ ಸಲ ನಾನು ಕೆಲಸದ ನಿಮಿತ್ತ ಹೊರಗೆ ಹೋಗ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ ಎಂದಿದ್ದರು.
ಇದರಿಂದ ಕೆಲವು ಅಭಿಮಾನಿಗಳು ಮಾತ್ರ ರೊಚ್ಚಿಗೆದ್ದಿದ್ದರು. ಇದಕ್ಕೆ ಕಾರಣ ಕಳೆದ ವರ್ಷವೂ ಹುಟ್ಟುಹಬ್ಬದ ದಿನ ಧನಂಜಯ್ ಅಭಿಮಾನಿಗಳ ಕೈಗೆ ಸಿಕ್ಕಿರಲಿಲ್ಲ. ಈ ಬಾರಿಯೂ ಅದನ್ನೆ ಮಾಡುತ್ತಿದ್ದಾರೆ. ಈ ಸೆಲೆಬ್ರಿಟಿಗಳು ಯಾಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ. ಒಂದು ವೇಳೆ ನಾವು ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡದೇ ಇದ್ದರೆ ಏನಾಗುತ್ತೆ ಎಂದು ಸಹ ಪ್ರಶ್ನಿಸಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಧನಂಜಯ್ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಹಲಗಲಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 666 ಆಪರೇಷನ್ ಡ್ರೀಮ್ ಥಿಯೇಟರ್, ಜಿಂಗೋ ಸಿನಿಮಾಗಳು ಸಹ ಘೋಷಣೆಯಾಗಿವೆ. ಯಾವ ಸಿನಿಮಾ ಯಾವಾಗ ರಿಲೀಸ್ ಆಗಲಿವೆ ಎನ್ನುವ ಮಾಹಿತಿ ಇನ್ನೂ ಸಿಕ್ಕಿಲ್ಲ.