- Home
- Entertainment
- Sandalwood
- BBK 12: ಅಶ್ವಿನಿ ಗೌಡಗೆ ಮತ್ತೊಂದು ಅವಮಾನ; ಇದನ್ನು ಎಂದಿಗೂ ಮರೆಯೋಕಾಗಲ್ಲ ಎಂದು ಕಣ್ಣೀರು ಹಾಕಿದ ನಟಿ
BBK 12: ಅಶ್ವಿನಿ ಗೌಡಗೆ ಮತ್ತೊಂದು ಅವಮಾನ; ಇದನ್ನು ಎಂದಿಗೂ ಮರೆಯೋಕಾಗಲ್ಲ ಎಂದು ಕಣ್ಣೀರು ಹಾಕಿದ ನಟಿ
Bigg Boss Kannada Season 12: ಈ ವಾರ ಮನೆ ಮೊದಲ ಕ್ಯಾಪ್ಟನ್ ಆಯ್ಕೆ ಮಾಡಿಕೊಳ್ಳುವುದು. ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲದ ಸ್ಪರ್ಧಿಯನ್ನು ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಈಗ ಎಲ್ಲರೂ ಅಶ್ವಿನಿ ಗೌಡ ವಿರುದ್ಧ ನಿಂತಿದ್ದಾರೆ.

ಡಾಮಿನೇಟ್ ಮಾಡ್ತಾರೆ
ರಿಷಾ ಗೌಡ: ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹತೆ ಇಲ್ಲದವರು ಅಶ್ವಿನಿ ಗೌಡ
ಮ್ಯೂಟೆಂಟ್ ರಘು: ನಾನು ನಾನು ಅಂತ ಹೇಳುತ್ತಿರುತ್ತಾರೆ. ಫಸ್ಟ್ ಕ್ಯಾಪ್ಟನ್ಸಿ ಅವರಿಗೆ ಸಿಕ್ಕಿದರೆ ಡಾಮಿನೇಟ್ ಮಾಡ್ತಾರೆ.
ರಿಷಾ ಗೌಡ ಅವರು “ನಾವು ಅವರನ್ನು ಸ್ಟಾರ್ ಮಾಡೋದು ಬೇಡ” ಎಂದಿದ್ದಾರೆ.
ಈ ಅವಮಾನ ಮರೆಯೋಕಾಗಲ್ಲ
ಅಶ್ವಿನಿ ಗೌಡ ಅವರು,”ರೇಸ್‌ನಲ್ಲಿ ಬಿಟ್ಟಿಲ್ಲ ಅಂದ್ರೆ ಕುದುರೆ ಹೇಗೆ ಓಡತ್ತೆ ಅಂತ ಗೊತ್ತಾಗುತ್ತದೆ. ತುಂಬ ಕಷ್ಟಪಟ್ಟಿದೀನಿ, ಬಿಗ್ ಬಾಸ್ ಮನೆಯಲ್ಲಿ ಅವಮಾನ ಆದಾಗ ಮರೆಯಲು ಸಾಧ್ಯವಿಲ್ಲ, ಮರೆತು ಮುಂದೆ ಹೋಗಲು ಸಾಧ್ಯವಿಲ್ಲ” ಎಂದಿದ್ದಾರೆ.
ಕ್ಯಾಪ್ಟನ್ ಆದವರಿಗೆ ಒಂದು ವಾರ ಎಲಿಮಿನೇಶನ್‌ನಿಂದ ಇಮ್ಯುನಿಟಿ ಸಿಗುವುದು. ಹೀಗಾಗಿ ಕ್ಯಾಪ್ಟನ್ ಆಗಲು ಸ್ಪರ್ಧಿಗಳು ಹವಣಿಸುತ್ತಾರೆ.
ರಕ್ಷಿತಾ ಶೆಟ್ಟಿ ಜೊತೆ ಜಗಳ
ಅಶ್ವಿನಿ ಗೌಡ ಅವರ ಆಟದ ಬಗ್ಗೆ ಉಳಿದ ಸ್ಪರ್ಧಿಗಳಿಗೆ ತುಂಬ ಬೇಸರ ಇದೆ. ಎಲ್ಲ ವಿಚಾರದಲ್ಲಿಯೂ ಹೋಗಿ ಮಾತನಾಡೋದು, ಜಗಳ ಆಡೋದು, ಇನ್ನು ರಕ್ಷಿತಾ ಶೆಟ್ಟಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿರೋದು ವೀಕ್ಷಕರಿಗೂ ಕೂಡ ಬೇಸರ ತಂದಿದೆ.
ಕಿವಿ ಹಿಂಡಿದ ಕಿಚ್ಚ ಸುದೀಪ್
ರಕ್ಷಿತಾ ಶೆಟ್ಟಿಗೆ ಬೈದಿದ್ದಕ್ಕೆ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಅವರು ಕಿವಿ ಹಿಂಡಿದ್ದರು, ಅದಾದಮೇಲೆ ಕೂಡ ಅವರು ಬದಲಾಗಿಲ್ಲ ಎಂದು ವೀಕ್ಷಕರು ಕೂಡ ಹೇಳಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇರುತ್ತವೆ, ವಾದ-ಪ್ರತಿವಾದಗಳು ನಡೆಯುತ್ತಿರುತ್ತವೆ.
ವೈಲ್ಡ್ ಕಾರ್ಡ್ ಎಂಟ್ರಿಗಳಿಂದ ಆಟ ಬದಲಾಗಿದೆ
ಮ್ಯೂಟೆಂಟ್ ರಘು, ರಿಷಾ, ಸೂರಜ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದು, ಈಗ ಆಟದ ರೀತಿ ನೀತಿಯೇ ಬದಲಾದಂತಿದೆ.