- Home
- Entertainment
- Sandalwood
- Amruthadhaare Serial: ಮಲ್ಲಿ ಮುಖದಲ್ಲಿ ಮಂದಹಾಸ; ಮದುವೆಯಾಗೋಕೆ ಹೊಸ ಹುಡುಗ ಓಕೆ ಎಂದಾಯ್ತು!
Amruthadhaare Serial: ಮಲ್ಲಿ ಮುಖದಲ್ಲಿ ಮಂದಹಾಸ; ಮದುವೆಯಾಗೋಕೆ ಹೊಸ ಹುಡುಗ ಓಕೆ ಎಂದಾಯ್ತು!
Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯನ್ನು ಮದುವೆ ಆಗೋಕೆ ಓರ್ವ ಹುಡುಗ ರೆಡಿ ಆಗಿದ್ದಾನೆ. ಹಾಗಾದರೆ ಅವನ ಜೊತೆ ಮಲ್ಲಿ ಮದುವೆ ಆಗುವುದೇ?

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಮಾತ್ರ ಸಿಂಗಲ್ ಆಗಿದ್ದಾಳೆ. ಮದುವೆಗೆ ಮುಂಚೆಯೇ ಮಲ್ಲಿಯನ್ನು ಗರ್ಭಿಣಿ ಮಾಡಿ ಆಮೇಲೆ ಎಲ್ಲರ ಒತ್ತಾಯಕ್ಕೆ ಜಯದೇವ್ ಮದುವೆಯಾಗಿದ್ದನು. ಆ ಬಳಿಕ ಅವಳನ್ನು ಬಿಟ್ಟು ದಿಯಾಳನ್ನು ಮದುವೆಯಾದನು. ಈಗ ಮಲ್ಲಿ ಸಿಂಗಲ್ ಆಗಿರಬೇಕಾ?
ಅಂದು ಮಗುವನ್ನು ಕಿಡ್ನ್ಯಾಪ್ ಮಾಡೋಕೆ ಬಂದೋರು ಯಾರು ಅಂತ ಸೃಜನ್ ಸಿಸಿಟಿವಿಯಲ್ಲಿ ಚೆಕ್ ಮಾಡಿದ್ದಾನೆ. ಆಗ ಜಯದೇವ್ ಎನ್ನೋದು ಗೊತ್ತಾಗಿದೆ. ಈ ವಿಷಯ ಭೂಮಿ ಕಿವಿಗೂ ಬಿದ್ದಿದೆ. ಅವಳೀಗ ಅವನ ಮನೆಗೆ ಹೋಗಿ ಬಾಯಿಗೆ ಬಂದ ಹಾಗೆ ಬೈಯ್ದು, ಎಚ್ಚರಿಕೆ ಕೊಟ್ಟಿದ್ದಾಳೆ.
ಭೂಮಿ ಹಾಗೂ ಜಯದೇವ್ ಜಗಳದಲ್ಲಿ ಅವನು ಇನ್ನೊಂದಿಷ್ಟು ಕೂಗಾಡಿದ್ದಾನೆ. ಆಗ ಮಲ್ಲಿ ಅವನನ್ನು ತಡೆದು ನಾನು ನಿಮ್ಮ ಕೈ ಮುರಿಯುವೆ ಎಂದು ಹೇಳಿದ್ದಾಳೆ. ಆಗ ಜಯದೇವ್ ಅವಳನ್ನು ಮನಸೋ ಇಚ್ಛೆ ನಿಂದಿಸಿದ್ದಾನೆ.
ಆಗ ಜಯದೇವ್, “ಎಡಗಾಲಲ್ಲಿ ಒದ್ದು ಮೂಲೆಗೆ ಕಸದ ಥರ ಬೀಸಾಕಿದ್ರೂ ಕೂಡ ನಿನ್ನ ಕೊಬ್ಬು ಕರಗಲಿಲ್ಲ. ನಿನ್ನ ಸಂಸಾರವನ್ನು ನೆಟ್ಟಗೆ ಮಾಡಿಕೊಂಡು, ಆಮೇಲೆ ಬೇರೆಯವರ ಸಂಸಾರದ ಕಡೆಗೆ ಬೆರಳು ತೋರಿಸು. ಉರಿಸೋದು, ಉರಿಸಿ ಮಜಾ ತಗೊಳೋದು ನಿಮಗಿಂತ ಹತ್ತರಷ್ಟು ಮಾಡಬಲ್ಲೆ. ಕನ್ನಡಿಯಲ್ಲಿನ ನಿನ್ನ ಮುಖ ನೋಡಿಕೋ, ಗತಿಗೆಟ್ಟವನು ನಿನ್ನ ಮದುವೆ ಆಗಬೇಕು ಅಷ್ಟೇ. ಕೆಫೆಯಲ್ಲಿ ಕಾಲ್, ಮೆಸೇಜ್, ಪ್ರಫೋಸಲ್ಸ್, ಅಬ್ಬಬ್ಬಾ..ಏನ್ ನಾಟಕ ಮಾಡ್ತೀರಿ. ಬಣ್ಣ ಹಚ್ಚಿಕೊಳ್ಳದೆ ಏನ್ ನಾಟಕ ಮಾಡ್ತೀರಿ?” ಎಂದು ನಿಂದಿಸಿದ್ದಾನೆ.
ಇದು ಭೂಮಿ, ಮಲ್ಲಿಗೂ ಇನ್ನೊಂದಿಷ್ಟು ಸಿಟ್ಟು ತರಿಸಿದೆ. ಹೀಗಾಗಿ ಜಯದೇವ್ ಮನೆಗೆ ಮಲ್ಲಿಯನ್ನು ನೋಡೋಕೆ ಭೂಮಿ ಹುಡುಗನನ್ನು ಕರೆಸಿದ್ದಾಳೆ. ಅಲ್ಲಿ ಮಲ್ಲಿಯನ್ನು ಆ ಹುಡುಗ ಓಕೆ ಮಾಡಿದ್ದಾನೆ. ಇದು ದಿಯಾ, ಜಯದೇವ್‌ಗೆ ಇನ್ನೊಂದಿಷ್ಟು ಹೊಟ್ಟೆ ಉರಿಸಿದೆ. ನಿಜಕ್ಕೂ ಆ ಹುಡುಗನನ್ನು ಮಲ್ಲಿ ಮದುವೆ ಆಗ್ತಾಳಾ? ಇಲ್ಲವಾ ಎಂದು ಕಾದು ನೋಡಬೇಕಿದೆ.