- Home
- Entertainment
- Sandalwood
- 'ಇಲ್ಲೇ ಹುಟ್ಟಿ ಬೆಳೆದು, ಊರು ಉದ್ಧಾರ ಮಾಡೋರ್ ನಾವು' ಎಂದ Darshan Thoogudeepa; ಫ್ಯಾನ್ಸ್ ಬಹುಪರಾಕ್!
'ಇಲ್ಲೇ ಹುಟ್ಟಿ ಬೆಳೆದು, ಊರು ಉದ್ಧಾರ ಮಾಡೋರ್ ನಾವು' ಎಂದ Darshan Thoogudeepa; ಫ್ಯಾನ್ಸ್ ಬಹುಪರಾಕ್!
ನಟ ದರ್ಶನ್ ತೂಗುದೀಪ ನಟನೆಯ 'ದಿ ಡೆವಿಲ್' ಸಿನಿಮಾದ 'ನೆಮ್ಮದಿಯಾಗ್ ಇರ್ಬೇಕ್' ಹಾಡು ರಿಲೀಸ್ ಆಗಿದೆ. ಈ ಹಾಡಿನ ಸಾಹಿತ್ಯವೇ ಈಗ ಸೌಂಡ್ ಮಾಡ್ತಿದೆ.

ನಟ ದರ್ಶನ್ ತೂಗುದೀಪ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಹೀಗಾಗಿ ಈ ಹಿಂದೆಯೇ ರಿಲೀಸ್ ಆಗಬೇಕಿದ್ದ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಹಾಡು ಇಂದು ರಿಲೀಸ್ ಆಗಿದೆ.
ಒಂದಿಷ್ಟು ರ್ಯಾಪ್ ಮಿಶ್ರಿತವಾಗಿ ಈ ಹಾಡಿದೆ. ನೂರಾರು ಡ್ಯಾನ್ಸರ್‌ಗಳ ಜೊತೆಯಲ್ಲಿ ದರ್ಶನ್ ಡ್ಯಾನ್ಸ್ ಮಾಡಿದ್ದಾರೆ. ಇಲ್ಲಿ ಒಂದಿಷ್ಟು ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್‌ಗಳಿದ್ದಂತೆ ಕಾಣುತ್ತಿದೆ. ʼದಿ ಡೆವಿಲ್ʼ ಸಿನಿಮಾದಲ್ಲಿ ದರ್ಶನ್ ಅವರ ಇಂಟ್ರಡಕ್ಷನ್ ಸಾಂಗ್ ಎಂದು ಕಾಣುತ್ತಿದೆ.
ಸಂತು ಮಾಸ್ಟರ್ ಕೊರಿಯೋಗ್ರಫಿ, ಅನಿರುದ್ಧ್ ಶಾಸ್ತ್ರೀ ಸಾಹಿತ್ಯ, ಬಿ ಅಜನೀಶ್ ಲೋಕನಾಥ್ ಸಂಗೀತ ಈ ಹಾಡಿಗಿದೆ. ಅಂದಹಾಗೆ ಈ ಹಾಡು ರಿಲೀಸ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಈ ಹಾಡು ರಿಲೀಸ್ ಆಗಿ ಅರ್ಧ ಗಂಟೆಗೆ 4 ಲಕ್ಷ ವೀಕ್ಷಣೆ ಸಿಕ್ಕಿದೆ. ಈ ಮೂಲಕ ಒಂದೇ ದಿನಕ್ಕೆ 10 ಮಿಲಿಯನ್ ವೀಕ್ಷಣೆ ಆದರೂ ಆಶ್ಚರ್ಯವಿಲ್ಲ.
ಈ ಸಾಹಿತ್ಯವನ್ನು ನೋಡಿದರೆ, ಅಭಿಮಾನಿಗಳನ್ನು ಉದ್ದೇಶಿಸಿ ದರ್ಶನ್ ಮಾತನಾಡಿದಂತಿದೆ. “ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ನಿಯತ್ತು, ಊರು ಉದ್ಧಾರ ಮಾಡೋರು ನಾವು. ಬೇಡ ನಮಗೆ ಬೇರೆಯವರ ಕಥೆ ಪುರಾಣ, ನೇರ ನುಡಿಯಲ್ಲೇ ಹೇಳ್ತೀವಿ. ನಿನ್ನ ಬೆಳವಣಿಗೆ ನಿನ್ನ ಕೈಯಲ್ಲಿ, ನಿನ್ನ ಫ್ಯೂಚರ್ ಬ್ರೈಟ್” ಎಂಬ ಸಾಹಿತ್ಯ ಈ ಹಾಡಿನಲ್ಲಿದೆ.
ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳಲ್ಲಿ ದರ್ಶನ್ ಅವರಿಗೆ ಇಂಟ್ರಡಕ್ಷನ್ ಸಾಂಗ್ ಇಡಲಾಗಿದೆ. ಅವುಗಳಿಗೆ ಹೋಲಿಕೆ ಮಾಡಿದರೆ ಈ ಹಾಡು ತುಂಬ ಡಿಫರೆಂಟ್ ಎನ್ನಬಹುದು. ದರ್ಶನ್ ಮನದಲ್ಲಿರುವ ಮಾತುಗಳು ಈ ಹಾಡು ಆಗಿವೆಯಾ ಎಂದು ಡೌಟ್ ಬರೋದಂತೂ ಪಕ್ಕಾ. ನಟ ದರ್ಶನ್ ಅವರು ಜೈಲಿನಲ್ಲಿದ್ದು, ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಕಾದು ನೋಡಬೇಕಿದೆ.
ಅಂದಹಾಗೆ ಈ ಸಿನಿಮಾಕ್ಕೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ 40 ಕೋಟಿ ರೂಪಾಯಿ ಹಣ ಹೂಡಲಾಗಿದೆ ಎನ್ನಲಾಗಿದೆ. ರಾಜಸ್ಥಾನ, ಬೆಂಗಳೂರು, ಮಲೇಷಿಯಾ ಮುಂತಾದ ಕಡೆ ಈ ಸಿನಿಮಾ ಶೂಟಿಂಗ್ ಅಗಿದೆ. ನಟ ದರ್ಶನ್ ನಟನೆಯ ಶೂಟಿಂಗ್, ಡಬ್ಬಿಂಗ್ ಕೆಲಸ ಕೂಡ ಮುಗಿದಿದೆಯಂತೆ.