MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Su From So Movie ನೋಡಿ ಹೊಗಳಿದ‌ ಬಾಲಿವುಡ್‌ ನಟ ಅಜಯ್‌ ದೇವ್ಗನ್; ಇಷ್ಟೇ ಅಲ್ಲ, ಇನ್ನೂ ವಿಷಯ ಬೇರೆ ಐತೆ!

Su From So Movie ನೋಡಿ ಹೊಗಳಿದ‌ ಬಾಲಿವುಡ್‌ ನಟ ಅಜಯ್‌ ದೇವ್ಗನ್; ಇಷ್ಟೇ ಅಲ್ಲ, ಇನ್ನೂ ವಿಷಯ ಬೇರೆ ಐತೆ!

ಕಂಟೆಂಟ್‌ ಚೆನ್ನಾಗಿದ್ರೆ ವೀಕ್ಷಕರು ಥಿಯೇಟರ್‌ಗೆ ಒಂದಲ್ಲ, 2 ಬಾರಿ ಬರ್ತಾರೆ, ಅದ್ಯಾವುದೇ ಭಾಷೆ ಇರಲೀ, ಕೆಲವು ನಟರೆಲ್ಲ ಹೊಸಬರಿದ್ದರೂ ಪರವಾಗಿಲ್ಲ ಎನ್ನೋದಿಕ್ಕೆ ʼಸು ಫ್ರಂ ಸೋʼ (Su From So) ಉತ್ತಮ ಉದಾಹರಣೆ. ನಟ ಅಜಯ್‌ ದೇವ್ಗನ್‌ ಈ ಸಿನಿಮಾ ತಂಡವನ್ನು ಮುಂಬೈಗೆ ಕರೆಸಿಕೊಂಡು ಭೇಷ್‌ ಎಂದಿದ್ದಾರೆ. 

2 Min read
Author : Padmashree Bhat
| Updated : Aug 12 2025, 10:24 PM IST
Share this Photo Gallery
  • FB
  • TW
  • Linkdin
  • Whatsapp
15
 ಹೌಸ್‌ಫುಲ್‌ ಪ್ರದರ್ಶನ ಕಾಣ್ತಿರೋ ಸಿನಿಮಾ!
Image Credit : Asianet News

ಹೌಸ್‌ಫುಲ್‌ ಪ್ರದರ್ಶನ ಕಾಣ್ತಿರೋ ಸಿನಿಮಾ!

ಈಗ ಈ ಅಪ್ಪಟ ಕನ್ನಡ ಸಿನಿಮಾವನ್ನು ಬೇರೆ ಭಾಷೆಯ ಕಲಾವಿದರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಜುಲೈ 25ಕ್ಕೆ ‘Su From So Movie’ ರಿಲೀಸ್‌ ಆಗಿತ್ತು. ಅದಕ್ಕೂ ಮೊದಲು ಈ ಸಿನಿಮಾದ ಪ್ರೀಮಿಯರ್‌ ಶೋ ಆಗಿದೆ. ಪ್ರೀಮಿಯರ್‌ ಶೋನಲ್ಲಿಯೇ ಈ ಚಿತ್ರವನ್ನು ವೀಕ್ಷಕರು ಮೆಚ್ಚಿದ್ದರು. ಆ ಬಳಿಕ ಥಿಯೇಟರ್‌ನಲ್ಲಿ ಹಗಲು-ರಾತ್ರಿ, ವೀಡ್‌ ಡೇಸ್‌, ವೀಕೆಂಡ್‌ನಲ್ಲಿಯೂ ಹೌಸ್‌ಫುಲ್‌ ಪ್ರದರ್ಶನ ಕಾಣಲು ಆರಂಭವಾಯ್ತು.

25
ಮುಂಬೈನಲ್ಲಿ ವಿಶೇಷ ಶೋ ಏರ್ಪಡಿಸಲಾಗಿತ್ತು!
Image Credit : Asianet News

ಮುಂಬೈನಲ್ಲಿ ವಿಶೇಷ ಶೋ ಏರ್ಪಡಿಸಲಾಗಿತ್ತು!

ಈ ಸಿನಿಮಾ ಕಲಾವಿದರು ಮುಂಬೈಗೆ ಭೇಟಿ ನೀಡಿ, ಅಲ್ಲಿನ ಖ್ಯಾತ ನಟರು ಮತ್ತು ನಿರ್ಮಾಪಕರಿಗಾಗಿ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಿದ್ದರು.ಈ ಸಿನಿಮಾವನ್ನು ವೀಕ್ಷಿಸಿದ ನಟ ಅಜಯ್‌ ದೇವ್ಗನ್‌ ಅವರು ಈ ಸಿನಿಮಾ ತಂಡದ ಜೊತೆ ಮಾತುಕತೆ ನಡೆಸಿದ್ದಾರೆ. ಅಜಯ್ ದೇವ್ಗನ್ ಅವರು ನಿರ್ದೇಶಕ ಜೆಪಿ ಥುಮಿನಾಡ್, ರಾಜ್ ಬಿ ಶೆಟ್ಟಿ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿದಾಗ ದೇವ್ಗನ್‌ ಅವರು ಈ ಸಿನಿಮಾವನ್ನು ಇಷ್ಟಪಟ್ಟಿರೋದು, ಅವರ ಮೇಲೆ ಈ ಸಿನಿಮಾ ಗಾಢವಾದ ಪ್ರಭಾವ ಬೀರಿರೋದು ಮೇಲ್ನೋಟಕ್ಕೆ ಕಾಣಿಸುವುದು.

Related Articles

Related image1
ಒಬ್ಬಟ್ಟು- ರೊಟ್ಟಿ ಒಂದೇ ಎನ್ನೋದ್ಯಾಕೆ? ಸಮಾಜಕ್ಕೆ ನಾನು... Su From Soಗೆ ಯಶ್​ ಅಮ್ಮನ ಪ್ರತಿಕ್ರಿಯೆ ಏನು?
Related image2
Su From So ಬಟ್ಟೆಯಲ್ಲಿ ಸುತ್ತಿ ಚಪ್ಪಲಿಯಲ್ಲಿ ಹೊಡೆದಾಂಗೆ ಇದೆ... ನಟಿ ಸಂಧ್ಯಾ ಮಾತು ಕೇಳಿ...
35
ಇದು ಸಹಜ ಭೇಟಿ ಅಲ್ಲ
Image Credit : Asianet News

ಇದು ಸಹಜ ಭೇಟಿ ಅಲ್ಲ

ಈ ಭೇಟಿಯನ್ನು ಕೇವಲ ಪ್ರದರ್ಶನವೊಂದೇ ಅಲ್ಲ, ಬದಲಿಗೆ ಹೆಚ್ಚಿನದ್ದು ಎಂದು ಕೆಲ ಮೂಲಗಳು ಹೇಳಿವೆ. ಈ ಸಿನಿಮಾವು ಹಿಂದಿಗೆ ರಿಮೇಕ್‌ ಆಗಲಿದೆಯಾ ಎಂಬ ಅನುಮಾನ ಕೂಡ ಶುರುವಾಗಿದೆ. ಕನ್ನಡದಲ್ಲಿ ತಯಾರಾದ ಕಾಂತಾರ ಸಿನಿಮಾವು ತನ್ನ ಕಂಟೆಂಟ್‌ನಿಂದ ಹೇಗೆ ಬೇರೆ ಭಾಷೆಗೆ ಡಬ್‌ ಆಗಿ ಬಾಕ್ಸ್‌ ಆಫೀಸ್‌ ಯಶಸ್ಸು ಕಂಡಿತು ಎಂದು ಎಲ್ಲರೂ ನೋಡಿದ್ದೀರಿ. ಹಾಗೆ ಈ ಸಿನಿಮಾ ರಿಮೇಕ್‌ ಆಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಸಿನಿಮಾ ತಂಡ ಉತ್ತರ ಕೊಡಬೇಕಿದೆ. 

45
ಸೂಪರ್‌ ಹಿಟ್‌ ಸಿನಿಮಾಗಳ ಜೊತೆ ಸ್ಪರ್ಧೆ!
Image Credit : Asianet News

ಸೂಪರ್‌ ಹಿಟ್‌ ಸಿನಿಮಾಗಳ ಜೊತೆ ಸ್ಪರ್ಧೆ!

ʼಸೈಯಾರಾʼ, ಹಾಲಿವುಡ್‌ನ ʼಎಫ್1ʼ, ಪವನ್ ಕಲ್ಯಾಣ್ ಅವರ ʼಹರಿ ಹರ ವೀರ ಮಲ್ಲುʼ ಸಿನಿಮಾಗಳ ನಡುವೆ ಬಿಡುಗಡೆಯಾದ Su From So Movie ಗಟ್ಟಿಯಾಗಿ ನಿಂತು, ವೀಕ್ಷಕರ ಮನಸ್ಸಿನಲ್ಲಿ ಡ್ಯಾನ್ಸ್‌ ಮಾಡುತ್ತಿದೆ.

55
ನಿರ್ದೇಶಕ ಜೆಪಿ ಥುಮಿನಾಡ್‌ ಏನಂತಾರೆ?
Image Credit : Asianet News

ನಿರ್ದೇಶಕ ಜೆಪಿ ಥುಮಿನಾಡ್‌ ಏನಂತಾರೆ?

ನಟ ಅಜಯ್‌ ದೇವ್ಗನ್‌ ಭೇಟಿ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರೋ ಜೆಪಿ ಥುಮಿನಾಡ್‌ ಅವರು,”ಅಜಯ್‌ ಅವರು ನಮ್ಮ 'ಸು ಫ್ರಮ್ ಸೋ' ಸಿನಿಮಾವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದ್ದರು. ಅಜಯ್ ನಿಜವಾಗಿಯೂ ಅವರ ಅದ್ಭುತ ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಅಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಗೌರವ, ಪ್ರೀತಿ” ಎಂದು ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸು ಫ್ರಮ್ ಸೋ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಬಾಲಿವುಡ್

Latest Videos
Recommended Stories
Recommended image1
'ನಮ್ಮ ಹನುಮ ಕನ್ನಡಿಗ' : ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!
Recommended image2
ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Recommended image3
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Related Stories
Recommended image1
ಒಬ್ಬಟ್ಟು- ರೊಟ್ಟಿ ಒಂದೇ ಎನ್ನೋದ್ಯಾಕೆ? ಸಮಾಜಕ್ಕೆ ನಾನು... Su From Soಗೆ ಯಶ್​ ಅಮ್ಮನ ಪ್ರತಿಕ್ರಿಯೆ ಏನು?
Recommended image2
Su From So ಬಟ್ಟೆಯಲ್ಲಿ ಸುತ್ತಿ ಚಪ್ಪಲಿಯಲ್ಲಿ ಹೊಡೆದಾಂಗೆ ಇದೆ... ನಟಿ ಸಂಧ್ಯಾ ಮಾತು ಕೇಳಿ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved