ರತನ್ ಟಾಟಾ ನಿಧನದ ಬಳಿಕ ಒಂಟಿಯಾಗಿದ್ದ ಶಾಂತನು ಬಾಳಲ್ಲಿ 'ಪ್ರೇಮ'ದ ಚಿಲುಮೆ
Shantanu Naidu in LOVE: ರತನ್ ಟಾಟಾ ಅವರ ಆಪ್ತ ಸಹಾಯಕ ಶಾಂತನು ನಾಯ್ಡು ಅವರ ಜೀವನದಲ್ಲಿ ಹೊಸ ಪ್ರೇಮಕಥೆ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೇಯಸಿಯೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಉದ್ಯಮಿ ರತನ್ ಟಾಟಾ ಜೊತೆಯಲ್ಲಿಯೇ ಇರುತ್ತಿದ್ದ ಶಾಂತನು ನಾಯ್ಡು ಬಾಳಲ್ಲಿ ಸಂಗಾತಿಯ ಪ್ರವೇಶವಾಗಿದೆ. ಪ್ರೇಮದ ಬಲೆಯಲ್ಲಿ ಸಿಲುಕಿ ಆನಂದಿಸುತ್ತಿರುವ ವಿಷಯವನ್ನು ಸಂತೋಷದಿಂದ ಶಾಂತನು ನಾಯ್ಡು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ಶಾಂತನು ಪ್ರೀತಿಸುತ್ತಿರುವ ಗಂಧರ್ವ ಕನ್ಯೆ ಯಾರಿಬರಹುದು ಎಂಬ ಕುತೂಹಲ ಮೂಡಿದೆ.
ದಿವಂಗತ ರತನ್ ಟಾಟಾ ಅವರ ವಿಶ್ವಾಸರ್ಹ ವ್ಯಕ್ತಿಗಳಲ್ಲಿ ಶಾಂತನು ನಾಯ್ಡು ಒಬ್ಬರಾಗಿದ್ದರು. ರತನ್ ಟಾಟಾ ನಿಧನದ ವಿಷಯ ತಿಳಿಯುತ್ತಿದ್ದಂತೆ ಶಾಂತನು ನಾಯ್ಡು ಕುಸಿದಿದ್ದರು. ರತನ್ ಟಾಟಾ ನಿಧನದ ಬಳಿಕ ಒಂಟಿಯಾಗಿದ್ದ ಶಾಂತನು ನಾಯ್ಡು ಬಾಳಿಗೆ ಬೆಳಂದಿಗಳ ಬಾಲೆಯ ಎಂಟ್ರಿಯಾಗಿದೆ. ಸಂಗಾತಿ ಜೊತೆಗಿನ ಫೋಟೋಗಳನ್ನು ಶಾಂತನು ನಾಯ್ಡು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Gen-Z ಹುಡುಗಿಯರು ಹೀಗೆಲ್ಲಾ ಮಾಡ್ತಿದ್ರೆ ಹುಡುಗರಿಗೆ ಕ್ಯೂಟ್ ಆಗಿ ಕಾಣಿಸ್ತಾರೆ!
ಮನದಲ್ಲೆ ಜೊತೆಗಿನ ಆರು ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಆದ್ರೆ ಎಲ್ಲಿಯ ತಮ್ಮ ಚಂದ್ರಿಕೆಯ ಮೊಗವನ್ನು ಶಾಂತನೂ ನಾಯ್ಡು ರಿವೀಲ್ ಮಾಡಿಲ್ಲ. ಹಾಗಾಗಿ ಈ ಪೋಸ್ಟ್ ನೋಡಿದ ನೆಟ್ಟಿಗರು, ಯಾರೇ ನೀನು ಚೆಲುವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Gen-Z: ಹುಡುಗೀರು ಹೀಗೆಲ್ಲಾ ಮಾಡಿದ್ರೆ ಹುಡುಗರಿಗೆ ಕೆಟ್ಟ ಕೋಪ ಬರುತ್ತೆ!
ಲವರ್ ಬಾಯರ್ ಆಗಿರುವ ಶಾಂತನು ನಾಯ್ಡು, ರೊಮ್ಯಾಂಟಿಕ್ ಸಾಲು ಬರೆದುಕೊಂಡಿದ್ದಾರೆ. ನಮ್ಮ ಮನಸ್ಸುಗಳು ಭೇಟಿಯಾಗಲ್ಲ. ಆದ್ರೆ ಹೃದಯ ಪದೇ ಪದೇ ನೆನಪು ಮಾಡಿಕೊಳ್ಳುವ ಮೂಲಕ ಜೊತೆಯಲ್ಲಿರುತ್ತೇವೆ ಎಂದು ಪ್ರೀತಿಯ ಮಾತುಗಳನ್ನು ಮಧುರವಾಗಿ ಹಂಚಿಕೊಂಡಿದ್ದಾರೆ. ಆದ್ರೆ ತಮ್ಮ ಮನದರಸಿಯ ಮುಖ ತೋರಿಸದೇ ಹೈಡ್ ಮಾಡಿದ್ದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆಚ್ಚಾಗ್ತಿದೆ ಕ್ವಾಂಟಮ್ ಡೇಟಿಂಗ್; ಯುವಕರೇ ಹೆಚ್ಚು ಆಕರ್ಷಿತರಾಗ್ತಿರೋದು ಯಾಕೆ?
ಈ ಫೋಟೋಗಳಿಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇಬ್ಬರು ಗಹನವಾದ ಸಂಭಾಷಣೆಯಲ್ಲಿ ಮೈಮರೆತ ಹಾಗಿದೆ. ಈ ಚಿತ್ರದಲ್ಲಿರುವ ಚೆಲುವೆ AI ಕಲ್ಪನೆಯಲ್ಲಿ ಮೂಡಿಬಂದ ಅಪ್ಸರೆಯಂತಿದ್ದಾರೆ ಎಂದು ಹೊಗಳಿದ್ದಾರೆ. ಮೆಟ್ರೋ ನಿಲ್ದಾಣ, ರೆಸ್ಟೋರೆಂಟ್, ವಾಟರ್ ಫೌಂಟೇನ್ ಸುಂದರವಾದ ಸ್ಥಳಗಳಿಗೆ ಗೆಳತಿಯೊಂದಿಗೆ ಶಾಂತನು ನಾಯ್ಡು ಭೇಟಿ ನೀಡಿ ಕ್ವಾಲಿಟಿ ಟೈಂ ಸ್ಪೆಂಡ್ ಮಾಡಿದ್ದಾರೆ.
ಇದನ್ನೂ ಓದಿ: ಕುಕೀ ಜಾರಿಂಗ್ ಎಂಬ ಡೇಂಜರಸ್ ರಿಲೇಶನ್‌ಶಿಪ್; ನೀವು ಇದ್ರಲ್ಲಿ ಸಿಲುಕಿದ್ದೀರಾ? ಎಚ್ಚರ, ಎಚ್ಚರ!