ರಾತ್ರಿ ಮಲಗುವ ಮುನ್ನ ಸಂಗಾತಿ ಈ ಕೆಲಸ ಮಾಡ್ತಿದ್ರೆ ಇಂದೇ ಅಲರ್ಟ್ ಆಗಿ!
Relationship: ಸಂಬಂಧಗಳಲ್ಲಿ ನಂಬಿಕೆ ಅತ್ಯಂತ ಮುಖ್ಯವಾದ ವಿಷಯ, ಆದರೆ ಕೆಲವು ಅಭ್ಯಾಸಗಳು ಮತ್ತು ನಡವಳಿಕೆಗಳು ಮೋಸವನ್ನು ಸೂಚಿಸಬಹುದು. ನಿಮ್ಮ ಸಂಗಾತಿ ಮಲಗುವ ಮುನ್ನ ಕೆಲವು ವಿಚಿತ್ರ ಕೆಲಸಗಳನ್ನು ಮಾಡಿದರೆ, ನೀವು ಜಾಗರೂಕರಾಗಿರಬೇಕು.

ಸಂಬಂಧದಲ್ಲಿ ನಂಬಿಕೆ ಮುಖ್ಯ
ಯಾವುದೇ ಸಂಬಂಧದಲ್ಲಿ ನಂಬಿಕೆ ಮುಖ್ಯವಾಗುತ್ತದೆ. ಅದರಲ್ಲಿಯೂ ಗಂಡ-ಹೆಂಡತಿ ಸಂಬಂಧ ದೃಢವಾಗಿ ನಂಬಿಕೆ ಎಂಬ ಆಧಾರಸ್ತಂಭದ ಮೇಲೆ ನಿಂತಿರುತ್ತದೆ. ನಂಬಿಕೆ ಜೊತೆ ಗೌರವ, ಪ್ರೀತಿ, ಪ್ರಾಮಾಣಿಕತೆ ಸೇರಿದಂತೆ ಇನ್ನಿತರ ಅಂಶಗಳು ಸಂಬಂಧದ ಗಾಢತನವನ್ನು ಸೂಚಿಸುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿ ಪ್ರೈವೇಸಿ ಎಂಬ ಮಾತು ಅಡ್ಡಗೋಡೆಯಂತೆ ಜೋಡಿ ಮಧ್ಯೆ ಬರುತ್ತದೆ.
ಸಂಗಾತಿ ನಡೆದುಕೊಳ್ಳುವ ವರ್ತನೆ
ಪ್ರೈವೇಸಿ ಎಂದು ಹಲವು ವಿಷಯಗಳನ್ನು ಜೋಡಿಗಳು ಮರೆಮಾಡುತ್ತವೆ. ಪ್ರೈವೇಸಿಯಿಂದಾಗಿ ನಂಬಿಕೆ ಎಂಬ ಮರಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಈ ನಂಬಿಕೆ ಒಂದೇ ದಿನಕ್ಕೆ ಕಳೆದುಕೊಳ್ಳುದಿಲ್ಲ. ದೀರ್ಘವಾದ ಸಂಬಂಧದಲ್ಲಿ ಒಂದೊಂದೇ ನಡವಳಿಕೆಗಳು ಮೋಸ ಸೂಚಿಸುತ್ತದೆ. ಈ ರೀತಿಯ ನಡವಳಿಕೆ ಇಬ್ಬರ ಪೈಕಿ ಯಾರಿಂದಲಾದ್ರೂ ಶುರುವಾಗಬಹುದು. ಈ ಲೇಖನದಲ್ಲಿ ರಾತ್ರಿ ಮಲಗುವ ಮುನ್ನ ನಿಮ್ಮ ಸಂಗಾತಿ ನಡೆದುಕೊಳ್ಳುವ ವರ್ತನೆ ಮೇಲೆ ಆತ ಅಥವಾ ಆಕೆ ನಿಮ್ಮಿಂದ ದೂರವಾಗುವ ಸುಳಿವು ಆಗಿರುತ್ತದೆ. ಹಾಗಾಗಿ ಇಂತಹ ವರ್ತನೆ ನಿಮ್ಮ ಸಂಗಾತಿಯಲ್ಲಿ ಕಂಡು ಬಂದ್ರೆ ಇಂದೇ ಅಲರ್ಟ್ ಆಗಿರಿ.
ಮೊಬೈಲ್‌ನಲ್ಲಿ ಹೆಚ್ಚು ಸಮಯ
1. ನಿಮ್ಮ ಸಂಗಾತಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ ಮತ್ತು ನಿಮಗೆ ಸ್ಕ್ರೀನ್ ತೋರಿಸದೇ ಸೀಕ್ರೆಟ್ ಮೇಂಟೈನ್ ಮಾಡುತ್ತಿದ್ರೆ ನೀವು ಅಲರ್ಟ್ ಆಗಬೇಕಾಗುತ್ತದೆ. ರಾತ್ರಿ ಮಲಗುವ ಮುನ್ನ ಮೆಸೇಜ್/ಕಾಲ್ ಮಾಡಿ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದರೂ ನೀವು ಎಚ್ಚರವಾಗಿರಬೇಕಾಗುತ್ತದೆ. ನೀವು ಕೇಳಿದಾಗ ಪ್ರಮುಖವಾದ ಕಾಲ/ಮೆಸೇಜ್ ಅಂತಿದ್ರೆ ಅಲರ್ಟ್ ಆಗಬೇಕು.
ಲಾಕ್, ಸೈಲೆಂಟ್ ಅಥವಾ ಫ್ಲೈಟ್ ಮೋಡ್
2. ನಿಮ್ಮ ಸಂಗಾತಿ ಮಲಗಲು ಹೋಗುತ್ತಿದ್ದಂತೆ ಮೊಬೈಲ್‌ನನ್ನು ಲಾಕ್, ಸೈಲೆಂಟ್ ಅಥವಾ ಫ್ಲೈಟ್ ಮೋಡ್‌ಗೆ ಹಾಕುತ್ತಿದ್ರೆ ನಿಮ್ಮಿಂದ ಯಾವುದೇ ವಿಷಯವನ್ನು ಮರೆಮಾಚುವ ಸುಳಿವು ಇದಾಗಿರುತ್ತದೆ. ಈ ನಡವಳಿಕೆ ಮೋಸದ ಸುಳಿವು ಆಗಿರಬಹುದು.
ಮೊಬೈಲ್ ಚಾಟ್
3. ಮಲಗಿರುವಾಗ ದಿಢೀರ್ ಅಂತ ಎದ್ದು ಬಾತ್‌ರೂಮ್‌ಗೆ ಹೋಗಿ ದೀರ್ಘ ಸಮಯದವರೆಗೆ ಮೊಬೈಲ್ ಚಾಟ್ ಮಾಡುತ್ತಿರುವ ಅಭ್ಯಾಸವಿದ್ದರೆ ನೀವು ಖಂಡಿತ ಅದನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಬಾತ್‌ರೂಮ್‌ಗೆ ಹೋದಗೆಲ್ಲಾ ಕೆಲವೊಮ್ಮೆ ಫೋನ್ ತೆಗೆದುಕೊಂಡು ಹೋಗುವುದು ಸಹ ಅನುಮಾನಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತವೆ.
ಅಂತರ
4. ನಿಮ್ಮ ಸಂಗಾತಿ ಇದಕ್ಕಿದಂತೆ ಮಲಗುವ ಮುನ್ನ ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ಅಥವಾ ಮಾತನಾಡೋದನ್ನು ನಿಲ್ಲಿಸಿದ್ರೆ ಅಥವಾ ನೆಪಗಳನ್ನು ಹೇಳಿ ದೂರವಾಗುತ್ತಿದ್ದರೆ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗಿರುವ ಸಾಧ್ಯತೆಗಳಿರುತ್ತವೆ. ಈ ವರ್ತನೆಯ ಅರ್ಥ ಸಂಗಾತಿ ಬೇರೊಬ್ಬರಲ್ಲಿ ಆಸಕ್ತಿಯ ಸಂಕೇತವಾಗಿರಬಹುದು.
ಇದನ್ನೂ ಓದಿ: ಬಾಡಿಗೆಗೆ ಸಿಗ್ತಾರೆ ಹೆಂಡತಿಯರು: ಶುರುವಾಗಿದೆ ಹೊಸ ಟ್ರೆಂಡ್, Rent ಫಿಕ್ಸ್ ಮಾಡೋಕಿದೆ ಮಾನದಂಡ
ಪದೇ ಪದೇ ಕೋಪ
5. ರಾತ್ರಿ ಮಲಗುವ ಮುನ್ನ ಸಂಗಾತಿ ಪದೇ ಪದೇ ಕೋಪ ಮಾಡಿಕೊಂಡು ಅನಗತ್ಯವಾಗಿ ಕಲಹ ಮಾಡಿಕೊಳ್ಳುತ್ತಿದ್ದರೆ ಇದು ಸಹ ನಿಮ್ಮ ದಾಂಪತ್ಯದಲ್ಲಿನ ಅಂತ್ಯದ ಸುಳಿವು ಆಗಿರಬಹುದು. ಹಾಗಾಗಿ ಸಂಗಾತಿಯಲ್ಲಿ ಈ ಚಿಹ್ನೆಗಳನ್ನು ಕಾಣಿಸಿದ್ರೆ ನಿರ್ಲಕ್ಷಿಸಬೇಡಿ. ಇಂತಹ ಸಂದರ್ಭದಲ್ಲಿ ಸಂಗಾತಿಯೊಂದಿಗೆ ನಿಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಚರ್ಚಿಸಿ. ನಿಮ್ಮ ನಡುವಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ.
ಇದನ್ನೂ ಓದಿ: ಹೆಚ್ಚಾಗ್ತಿದೆ ಕ್ವಾಂಟಮ್ ಡೇಟಿಂಗ್; ಯುವಕರೇ ಹೆಚ್ಚು ಆಕರ್ಷಿತರಾಗ್ತಿರೋದು ಯಾಕೆ?