Chanakya Niti: ಈ ಅಭ್ಯಾಸವಿರುವ ವಿದ್ಯಾರ್ಥಿಗಳು ಜೀವನದಲ್ಲಿ ಖಂಡಿತ ಯಶಸ್ವಿಯಾಗಲ್ಲ
Chanakya Niti for students: ಚಾಣಕ್ಯರು ತಮ್ಮ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಕೆಲವು ನಿಯಮಗಳನ್ನು ಹಾಕಿದ್ದಾರೆ. ಹೌದು, ವಿದ್ಯಾರ್ಥಿಗಳು ಸಾಧ್ಯವಾದಷ್ಟು ಬೇಗ ತ್ಯಜಿಸಬೇಕಾದ ಕೆಲವು ಕೆಟ್ಟ ಅಭ್ಯಾಸಗಳನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.

ಚಾಣಕ್ಯ ನೀತಿ
ಆಚಾರ್ಯ ಚಾಣಕ್ಯರು ತಮ್ಮ ಕಾಲದ ಅತ್ಯಂತ ಜ್ಞಾನಿ ಮತ್ತು ವಿದ್ವಾಂಸರಲ್ಲಿ ಒಬ್ಬರು ಎಂದೂ ಪ್ರಸಿದ್ಧರಾಗಿದ್ದಾರೆ. ಅವರ ಜೀವಿತಾವಧಿಯಲ್ಲಿ, ಮಾನವಕುಲದ ಕಲ್ಯಾಣಕ್ಕಾಗಿ ಅನೇಕ ಘೋಷಣೆಗಳನ್ನು ಮಾಡಿದರು. ಅದು ನಂತರ ಚಾಣಕ್ಯ ನೀತಿ ಎಂದು ಕರೆಯಲ್ಪಟ್ಟಿತು. ನೀವು ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ಬಯಸಿದರೆ ಚಾಣಕ್ಯ ನೀತಿಯ ಬೋಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಲಾಗುತ್ತದೆ. ನೀವು ಈ ಬೋಧನೆಗಳನ್ನು ನಿರ್ಲಕ್ಷಿಸಿಯೂ ಮತ್ತದೇ ಅಭ್ಯಾಸ ಹೊಂದಿದರೆ ಅದರ ಪರಿಣಾಮಗಳು ಭವಿಷ್ಯದಲ್ಲಿ ನಿಮಗೆ ತುಂಬಾ ಹಾನಿಕಾರಕವಾಗಬಹುದು ಎಂದು ಹೇಳಲಾಗುತ್ತದೆ.
ಬೇಗ ತ್ಯಜಿಸಿ
ಚಾಣಕ್ಯರು ತಮ್ಮ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಕೆಲವು ನಿಯಮಗಳನ್ನು ಸಹ ಹಾಕಿದ್ದಾರೆ. ಹೌದು, ವಿದ್ಯಾರ್ಥಿಗಳು ಸಾಧ್ಯವಾದಷ್ಟು ಬೇಗ ತ್ಯಜಿಸಬೇಕಾದ ಕೆಲವು ಕೆಟ್ಟ ಅಭ್ಯಾಸಗಳನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿಯು ಈ ಅಭ್ಯಾಸಗಳನ್ನು ಹೊಂದಿದ್ದರೆ, ಅವರು ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.
ಕೋಪ
ಕೋಪವನ್ನು ವ್ಯಕ್ತಿಯ ದೊಡ್ಡ ಶತ್ರು ಎಂದು ವಿವರಿಸಲಾಗಿದೆ. ಚಾಣಕ್ಯ ಹೇಳುವಂತೆ ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಅವನು ತನ್ನ ಕೋಪವನ್ನು ಜಯಿಸಬೇಕು. ನೀವು ಸಮಯಕ್ಕೆ ಸರಿಯಾಗಿ ಕೋಪವನ್ನು ಜಯಿಸದಿದ್ದರೆ ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ.
ಅಲಂಕಾರ
ವಿದ್ಯಾರ್ಥಿಯು ತಾನು ಅಂದವಾಗಿ ಕಾಣಬೇಕೆಂಬ ಬಯಕೆ ಶಿಕ್ಷಣದ ಬಯಕೆಯನ್ನೂ ಮೀರಿದರೆ, ಅವರು ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಅಂತಹ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕಿಂತ ದೈಹಿಕ ಸೌಂದರ್ಯದ ಮೇಲೆ ಹೆಚ್ಚು ಗಮನಹರಿಸುತ್ತಾರೆ. ನೀವು ಯಶಸ್ವಿಯಾಗಲು ಬಯಸಿದರೆ ಈ ಆಸೆಯನ್ನು ತ್ಯಜಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ.
ನಿದ್ರೆ
ಚಾಣಕ್ಯ ನೀತಿಯ ಪ್ರಕಾರ, ನೀವು ದಿನವಿಡೀ ಮಲಗುವ ಅಭ್ಯಾಸ ಹೊಂದಿರುವ ವಿದ್ಯಾರ್ಥಿಯಾಗಿದ್ದರೆ ಅಥವಾ ಅತಿಯಾದ ನಿದ್ರೆಯಿಂದ ಬಳಲುತ್ತಿದ್ದರೆ ನೀವು ಎಂದಿಗೂ ಯಶಸ್ವಿಯಾಗುವುದಿಲ್ಲ. ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ನಿದ್ರೆಯನ್ನು ತ್ಯಜಿಸಿ ನಿಮ್ಮ ಎಲ್ಲಾ ಗಮನವನ್ನು ಅಧ್ಯಯನದ ಮೇಲೆ ಕೇಂದ್ರೀಕರಿಸಬೇಕು.
ದುರಾಸೆ
ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಒಬ್ಬ ವಿದ್ಯಾರ್ಥಿಯು ಎಲ್ಲಾ ವಿಚಾರದಲ್ಲಿಯೂ ದುರಾಸೆಯನ್ನು ತ್ಯಜಿಸಬೇಕು. ದುರಾಸೆಯನ್ನು ಹೊಂದಿರುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾನೆ. ದುರಾಸೆಯ ವ್ಯಕ್ತಿಯು ಯಶಸ್ಸನ್ನು ಸಾಧಿಸಿದರೂ ಸಹ, ಅವರ ಪರಿಸ್ಥಿತಿ ಬೇಗನೆ ಹದಗೆಡುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ ಯಶಸ್ಸಿನ ಮೊದಲ ಹೆಜ್ಜೆ ದುರಾಸೆಯನ್ನು ತ್ಯಜಿಸುವುದು.